ಸೆಂಚುರಿಯನ್: ಇಲ್ಲಿನ ಸೂಪರ್ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ ಅವರ ಶಿಸ್ತಿನ ಬೌಲಿಂಗ್ ದಾಳಿಗೆ ನಲುಗಿದ ಅತಿಥೇಯ ದಕ್ಷಿಣ ಆಫ್ರಿಕಾ 197 ರನ್ಗಳಿಗೆ ಆಲೌಟ್ ಆಗಿದೆ. ಪರಿಣಾಮವಾಗಿ ಭಾರತ ತಂಡವು 130 ರನ್ ಇನ್ನಿಂಗ್ಸ್ ಮುನ್ನಡೆ ಕಾಯ್ದುಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಕೆ.ಎಲ್.ರಾಹುಲ್ ಶತಕದ (123) ಹಾಗೂ ಮಯಂಕ್ ಅಗರ್ವಾಲ್ ಅರ್ಧಶತಕದ (60) ನೆರವಿನಿಂದ 327 ರನ್ ಗಳಿಸಿತ್ತು.
ಎರಡನೇ ದಿನದ ಆಟ ಮಳೆಯಿಂದಾಗಿ ರದ್ದಾಗಿತ್ತು. ಮೂರನೇ ದಿನ ಬೌಲರ್ಗಳದ್ದೇ ಪಾರಮ್ಯ. ಒಂದೇ ದಿನ 18 ವಿಕೆಟ್ಗಳು ಪತನ!
ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಗಿಡಿ (77ಕ್ಕೆ6) ಮತ್ತು ಕಗಿಸೊ ರಬಾಡ (72ಕ್ಕೆ3) ಬೌಲಿಂಗ್ನಲ್ಲಿ ಮಿಂಚಿದರೆ ಇತ್ತ ಶಮಿ ಕೂಡ ಟೆಸ್ಟ್ ಕ್ರಿಕೆಟ್ನಲ್ಲಿ ಆರನೇ ಬಾರಿ ಐದು ವಿಕೆಟ್ಗಳ ಗೊಂಚಲು ಗಳಿಸಿದ ಸಾಧನೆ ಮಾಡಿದರು.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ಮೂರನೇ ದಿನದ ಆಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿದೆ. ಮಯಂಕ್ ಅಗರ್ವಾಲ್ 4 ರನ್ ಗಳಿಸಿ ಔಟ್ ಆಗಿದ್ದಾರೆ. ರಾಹುಲ್ 5 ರನ್, ಶಾರ್ದೂಲ್ ಠಾಕೂರ್ 4 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಸದ್ಯ ಭಾರತ ತಂಡವು ಒಟ್ಟು 146 ರನ್ಗಳ ಮುನ್ನಡೆ ಕಾಯ್ದುಕೊಂಡಿದೆ.
ಇನ್ನಷ್ಟು ಸುದ್ದಿಗಳು…
ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ ಸರಣಿ: ಕನ್ನಡಿಗ ರಾಹುಲ್ಗೆ ನಾಯಕತ್ವ ಸಾಧ್ಯತೆ
IND vs SA Test Cricket: ಮಳೆ ಕಾಟ, ಎರಡನೇ ದಿನ ನಡೆಯದ ಆಟ
IND vs SA Test Cricket: ರಾಹುಲ್ ಆಕರ್ಷಕ ಶತಕ, ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಮೇಲುಗೈ
Discussion about this post