ರಾಂಚಿ: ನ್ಯೂಜಿಲೆಂಡ್ ವಿರುದ್ಧ ರಾಂಚಿಯಲ್ಲಿ ಶುಕ್ರವಾರ ರಾತ್ರಿ ನಡೆದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿಯೂ ಟೀಂ ಇಂಡಿಯಾ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಆ ಮೂಲಕ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಟ್ವೆಂಟಿ-20 ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಜೈಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡವು 5 ವಿಕೆಟ್ ಅಂತರ ಗೆಲುವು ಸಾಧಿಸಿತ್ತು.
ಇದರೊಂದಿಗೆ ಭಾರತ ತಂಡವು, ರಾಹುಲ್ ದ್ರಾವಿಡ್ ಅವರು ಮುಖ್ಯ ಕೋಚ್ ಆಗಿ ಮತ್ತು ರೋಹಿತ್ ಶರ್ಮಾ ಅವರು ನಾಯಕರಾಗಿ ಆಡಿದ ಮೊದಲ ಸರಣಿಯನ್ನೇ ಗೆದ್ದುಕೊಂಡಿದೆ.
ಎರಡನೇ ಪಂದ್ಯದಲ್ಲೂ ಟಾಸ್ ಗೆದ್ದ ಟೀಂ ಇಂಡಿಯಾ: ಸರಣಿಯ ಎರಡನೇ ಪಂದ್ಯದಲ್ಲೂ ಟಾಸ್ ಗೆದ್ದ ಟೀಂ ಇಂಡಿಯಾವು ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಭಾರತ ಪರ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯ ಆಡಿದ ಹರ್ಷಲ್ ಪಟೇಲ್ ಅವರ ಅಮೋಘ ಬೌಲಿಂಗ್ ದಾಳಿಗೆ ಕಂಗೆಟ್ಟ ನ್ಯೂಜಿಲೆಂಡ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನಟ್ಟಿದ ಭಾರತವು, ನಾಯಕ ರೋಹಿತ್ ಶರ್ಮಾ (55) ಹಾಗೂ ಕೆ.ಎಲ್. ರಾಹುಲ್ (65) ಆಕರ್ಷಕ ಅರ್ಧಶತಕಗಳ ನೆರವಿನಿಂದ 17.2 ಓವರ್ಗಳಲ್ಲೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಆರಂಭದಲ್ಲೇ ರಾಹುಲ್ ಅಬ್ಬರದ ಬ್ಯಾಟಿಂಗ್ಗೆ ಮುಂದಾದರೆ ರೋಹಿತ್ ರಕ್ಷಣಾತ್ಮಕ ಆಟಕ್ಕೆ ಮೊರೆಹೋದರು. ಬಳಿಕ ರೋಹಿತ್ ಕೂಡ ಬ್ಯಾಟಿಂಗ್ನಲ್ಲಿ ಚುರುಕು ಪ್ರದರ್ಶಿಸಿದರು. ಇದರೊಂದಿಗೆ, ಈ ಜೋಡಿ ಸತತ ಐದನೇ ಪಂದ್ಯದಲ್ಲಿ ಆರಂಭಿಕ ಅರ್ಧಶತಕದ ಜತೆಯಾಟದ ಕಾಣಿಕೆ ಒದಗಿಸಿತು.
10 ಓವರ್ ಮುಕ್ತಾಯಗೊಂಡಾಗ ಭಾರತ ವಿಕೆಟ್ ನಷ್ಟವಿಲ್ಲದೆ 79 ರನ್ ಗಳಿಸಿತ್ತು. ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 75 ರನ್ ಅಗತ್ಯವಿತ್ತು. ಆಕರ್ಷಕ ಇನ್ನಿಂಗ್ಸ್ ಕಟ್ಟಿದ ರಾಹುಲ್, ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 16ನೇ ಅರ್ಧಶತಕ ಸಾಧನೆ ಮಾಡಿದರು. ರೋಹಿತ್ 35 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು.
ನ್ಯೂಜಿಲೆಂಡ್ ಪರ ಗಪ್ಟಿಲ್ ಕೇವಲ 15 ಎಸೆತಗಳಲ್ಲಿ 31 ರನ್ ಗಳಿಸಿದರು. ಮಾರ್ಕ್ ಚಾಪ್ಮನ್ 21, ಡೆರಿಲ್ ಮಿಚೆಲ್ 31 ರನ್ ಗಳಿಸಿದರು.
ಭಾರತ ಪರ ಹರ್ಷಲ್ ಪಟೇಲ್ ಎರಡು ವಿಕೆಟ್, ಅಶ್ವಿನ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ ಹಾಗೂ ದೀಪಕ್ ಚಾಹರ್ ತಲಾ ಒಂದು ವಿಕೆಟ್ ಪಡೆದರು.
ಇನ್ನಷ್ಟು ಸುದ್ದಿಗಳು…
ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆ ಅಲಂಕರಿಸಿರುವುದು ಅಚ್ಚರಿ ಮೂಡಿಸಿದೆ ಎಂದ ರಿಕಿ ಪಾಂಟಿಂಗ್
ದ್ರಾವಿಡ್ ಕೋಚಿಂಗ್ ಶೈಲಿಯ ಬಗ್ಗೆ ಈಗಲೇ ಏನೂ ಹೇಳಲಾಗದು: ಆರ್.ಅಶ್ವಿನ್
ICC: ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷತೆಯ ಜೊತೆಗೆ ಮತ್ತೊಂದು ದೊಡ್ಡ ಪದವಿಯನ್ನೂ ಅಲಂಕರಿಸಲಿರುವ ಸೌರವ್ ಗಂಗೂಲಿ
Discussion about this post