Spiritual Story: ತಿರುಪತಿ ತಿರುಮಲ ದೇವಸ್ಥಾನ.. ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಈ ದೇವಾಲಯಕ್ಕೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ಕೊಟ್ಟು, ತಿಮ್ಮಪ್ಪನ ದರ್ಶನ ಮಾಡಬೇಕೆಂಬುದು ಹಲವರ ಕೋರಿಕೆ. ಇನ್ನು ಈ ದೇವಸ್ಥಾನದಲ್ಲಿ ಸಿಗುವ ಪ್ರಸಾದದ ರುಚಿ ಮತ್ತೆಲ್ಲಿಯೂ ಸಿಗಲು ಸಾಧ್ಯವೇ ಇಲ್ಲ. ಇಂಥ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಸಿಗುವ ಸ್ವಾದಿಷ್ಟ ಲಡ್ಡು ಪ್ರಸಾದದ ಬಗ್ಗೆ ಇವತ್ತು ಚಿಕ್ಕ ಮಾಹಿತಿಯನ್ನ ನೀಡಲಿದ್ದೇವೆ.
ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ತಿರುಪತಿ ತಿರುಮಲ ದೇವಸ್ಥಾನ ಭಾರತದ ಪುರಾತನ, ಶ್ರೀಮಂತ, ಪುರಾಣ ಪ್ರಸಿದ್ಧ ದೇವಸ್ಥಾನಗಳಲ್ಲೊಂದು. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎನ್ನದೇ ಎಲ್ಲ ಜಾತಿ ಧರ್ಮದವರು ಏಳು ಬೆಟ್ಟದ ಅಧಿಪತಿಯ ದರ್ಶನ ಪಡೆಯಲು ಬರುತ್ತಾರೆ.
ಬೇರೆ ಬೇರೆ ದೇಶಗಳಿಂದಲೂ ಭಕ್ತರು ತಿರುಮಲನ ದರ್ಶನಕ್ಕೆ ಬರುತ್ತಾರೆ. ಅಲ್ಲದೇ, ಸೆಲೆಬ್ರಿಟಿಗಳು, ಪಾಲಿಟಿಶಿಯನ್ಸ್ ಹೀಗೆ ದೊಡ್ಡ ದೊಡ್ಡ ಜನರು ಕೂಡ ವರ್ಷಕ್ಕೊಮ್ಮೆಯಾದ್ರೂ ತಿರುಪತಿ ತಿಮ್ಮಪ್ಪನ ದರ್ಶನ ಪಡೀತಾರೆ.
ಇನ್ನು ಪ್ರಸಾದಗಳಲ್ಲೇ ಫೇಮಸ್ ಪ್ರಸಾದ ಅಂದ್ರೆ ತಿರುಪತಿ ಲಡ್ಡು. ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಪಡೆದು, ಮಹಾಲಕ್ಷ್ಮೀಯ ಆಶೀರ್ವಾದ ತೆಗೆದುಕೊಂಡು, ಲಡ್ಡು ಪ್ರಸಾದವನ್ನ ಸೇವಿಸಿದರಷ್ಟೇ ತಿರುಮಲ ಪ್ರವಾಸ ಪೂರ್ಣಗೊಂಡಂತೆ.
ಕಡಲೆಹಿಟ್ಟು, ಗೋಡಂಬಿ, ಸಕ್ಕರೆ, ಕಲ್ಲು ಸಕ್ಕರೆ, ದ್ರಾಕ್ಷಿ, ತುಪ್ಪ, ಏಲಕ್ಕಿಯಿಂದ ತಯಾರಾಗುವ ಈ ಪ್ರಸಾದದಲ್ಲಿ ವಿಶ್ವದ ಯಾವ ಸಿಹಿ ಖಾದ್ಯದಲ್ಲೂ ಇಲ್ಲದಿರುವಷ್ಟು ಸ್ವಾದವಿರುತ್ತದೆ.
ತಿರುಪತಿ ಲಡ್ಡುವಿನ ಇತಿಹಾಸ(History)
ಈ ತಿರುಪತಿ ಲಾಡುವಿಗೆ ಮುನ್ನೂರು ವರ್ಷಗಳ ಇತಿಹಾಸವಿದೆ. 1516 ಆಗಸ್ಟ್ 2ರಿಂದ ತಿರುಪತಿಯಲ್ಲಿ ಲಾಡು ಪ್ರಸಾದ ವಿತರಿಸಲು ಶುರು ಮಾಡಲಾಯಿತು. ಈ ಪ್ರಸಾದ ನಕಲು ಮಾಡಿ ಬೇರೆಯವರು ಹಂಚಬಾರದೆಂಬ ಕಾರಣಕ್ಕೆ 1999ರಲ್ಲಿ ಪೇಟೆಂಟ್ ತೆಗೆದುಕೊಳ್ಳಲಾಯಿತು.
ಇನ್ನು ತಿರುಪತಿಯಲ್ಲಿ ಪ್ರತಿದಿನ 2ಲಕ್ಷದ 8 ಸಾವಿರ ಲಡ್ಡುಗಳು ತಯಾರಾಗುತ್ತದೆ. ಈ ಲಡ್ಡು ತಯಾರಿಕೆಗೆ 10 ಟನ್‌ಗಳಷ್ಟು ಕಡಲೆ ಹಿಟ್ಟು, 10 ಟನ್ ಸಕ್ಕರೆ, 700 ಕೆಜಿ ಗೋಡಂಬಿ, 150 ಕೆಜಿ ಏಲಕ್ಕಿ, 300ರಿಂದ 500 ಲೀಟರ್ ತುಪ್ಪ, 500 ಕೆಜಿ ಕಲ್ಲುಸಕ್ಕರೆ ಮತ್ತು 540 ಕೆಜಿ ಒಣದ್ರಾಕ್ಷಿ ಬಳಸಲಾಗುತ್ತದೆ.
ಈ ಲಡ್ಡು ಪ್ರಸಾದವನ್ನು ಬೆಳಗ್ಗಿನ ಪೂಜೆ ವೇಳೆ ತಿಮ್ಮಪ್ಪನಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಲಡ್ಡು ಪ್ರಸಾದವನ್ನ ಮಾರಾಟ ಕೂಡ ಮಾಡಲಾಗುತ್ತದೆ. ಕೇವಲ ಈ ಪ್ರಸಾದದಿಂದಲೇ ದೇವಸ್ಥಾನಕ್ಕೆ ಕೋಟಿ ಕೋಟಿ ಆದಾಯ ಬರುತ್ತದೆ.
ತಿರುಪತಿ ಲಾಡು(Tirupati Laddu) ತಯಾರಿಸುವ ಪದ್ಧತಿ
ದೇವಸ್ಥಾನದ ಬಳಿಯೇ ಇರುವ ಪೋತು ಎಂಬ ಪಾಕಶಾಲೆಯಲ್ಲಿ ಈ ಲಾಡು ಪ್ರಸಾದವನ್ನ ಪರಂಪರಾಗತವಾಗಿ ಬಂದ ಅರ್ಚಕರು ತಯಾರಿಸುತ್ತಾರೆ. 620 ಜನ ಈ ಲಡ್ಡು ತಯಾರಿಕೆಯಲ್ಲಿ ತೊಡಗುತ್ತಾರೆ. ಇವರನ್ನ ಪೋರ್ತು ಕಾರ್ಮಿಕರು ಅಂತಾನೇ ಕರಿಯಲಾಗುತ್ತದೆ. 150 ಪೋರ್ತು ಕಾರ್ಮಿಕರು ಪ್ರತಿದಿನ ಲಡ್ಡು ತಯಾರಿಸುತ್ತಾರೆ. ಆದ್ರೆ ಉಳಿದ 350 ಜನ ಕಾಂಟ್ರ್ಯಾಕ್ಟ್ ಬೇಸ್ ಮೇಲೆ ಕೆಲಸ ಮಾಡುತ್ತಾರೆ.
ಇನ್ನು ತಿರುಪತಿ ಲಡ್ಡು ಪ್ರಸಾದಗಳಲ್ಲಿ ಮೂರು ವಿಧ. ಪ್ರೋಕ್ತಂ ಲಡ್ಡು, ಆಸ್ಥಾನಂ ಲಡ್ಡು, ಕಲ್ಯಾಣೋತ್ಸವಂ ಲಡ್ಡು. ಪ್ರತಿದಿನ ಭಕ್ತರಿಗೆ ವಿತರಿಸುವ ಲಡ್ಡುವನ್ನ ಪ್ರೋಕ್ತಂ ಲಡ್ಡು ಎಂದು ಕರೆಯಲಾಗುತ್ತದೆ. ಈ ಚಿಕ್ಕ ಉಂಡೆಗಳು 175 ಗ್ರಾಮ್‌ನಷ್ಟಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಲಡ್ಡುಗಳನ್ನ ತಯಾರಿಸಲಾಗುತ್ತದೆ.
ಇನ್ನು ಆಸ್ಥಾನಂ ಲಡ್ಡುವನ್ನ ವಿಶೇಷ ದಿನಗಳಲ್ಲಿ ಮತ್ತು ಹಬ್ಬ ಹರಿದಿನಗಳಲ್ಲಿ ತಯಾರಿಸಲಾಗುತ್ತದೆ. ಈ ಲಡ್ಡು 750 ಗ್ರಾಮ್‌ನಷ್ಟಿರುತ್ತದೆ. ಇದರಲ್ಲಿ ಹೆಚ್ಚು ಗೋಡಂಬಿ ಬಾದಾಮಿಯನ್ನ ಬಳಸಲಾಗುತ್ತದೆ.
ಇನ್ನು ಮೂರನೇಯದಾಗಿ ಕಲ್ಯಾಣೋತ್ಸವಂ ಲಡ್ಡು. ಈ ಲಡ್ಡುವನ್ನ ತಿರುಪತಿಯಲ್ಲಿ ಜರುಗುವ ವಿಜೃಂಭಣೆಯ ಕಲ್ಯಾಣೋತ್ಸವದಲ್ಲಿ ತಯಾರಿಸಲಾಗುತ್ತದೆ. ಕಲ್ಯಾಣೋತ್ಸವದ ಸಮಯದಲ್ಲಿ ಈ ಲಡ್ಡುವಿಗೆ ಬಹುಬೇಡಿಕೆ ಇದ್ದು, ಆನ್‌ಲೈನ್ ಮೂಲಕ ಕೂಡ ಈ ಲಡ್ಡು ಬುಕಿಂಗ್ ಮಾಡುವ ವ್ಯವಸ್ಥೆಯನ್ನ ಟಿಟಿಡಿ ಮಾಡಿದೆ.
Spiritual: ಈ ದೇವಸ್ಥಾನಕ್ಕೆ ಭೇಟಿ ಕೊಟ್ಟವರಿಗೆ ಎಂದೂ ಸೋಲಿಲ್ಲ.. ಸೆಲೆಬ್ರಿಟಿ, ರಾಜಕಾರಣಿಗಳ ನೆಚ್ಚಿನ ದೇವರೀತ..
Prajwal case: ರೇವಣ್ಣ, ಪ್ರಜ್ಜಣ್ಣ ನನಗೇನೂ ಮಾಡಿಲ್ಲ, ನಾನು ಆರಾಮಾಗಿದ್ದೇನೆ, ನೆಂಟರ ಮನೆಯಲ್ಲಿದ್ದೇನೆ: ಸಂತ್ರಸ್ತೆ
Discussion about this post