ಗುವಾಹಟಿ: ಕೋಮು ಸೌಹಾರ್ದಕ್ಕೆ ಧಕ್ಕೆಯುಂಟು ಮಾಡುತ್ತಿದ್ದಾರೆಂಬ ಆರೋಪದ ಮೇಲೆ ಇಬ್ಬರು ಯುವ ಪತ್ರಕರ್ತೆಯರನ್ನು ಅಸ್ಸಾಂನ ಕರೀಂಗಂಜ್‌ನಲ್ಲಿ ತ್ರಿಪುರಾದ ಪೊಲೀಸರು ಬಂಧಿಸಿದ್ದಾರೆ. ಮಸೀದಿಯಲ್ಲಿ ನಡೆದ ದಾಂಧಲೆ ನಡೆಸಲಾಗಿದೆ ಎಂಬ ಸುದ್ದಿಯನ್ನು ಸಮೃದ್ಧಿ ಸುಕುನಿಯಾ ಮತ್ತು ಸ್ವರ್ಣ ಝಾ ಪ್ರಚೋದನಾಕಾರಿಯಾಗಿ ಮಾಡಿದ್ದರು ಎಂದು ಇವರ ವಿರೋಧ ಅಸ್ಸಾಂನ ಕರೀಂಗಂಜ್‌ನಲ್ಲಿರುವ ನೀಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರ್ಮಿಕ ಗ್ರಂಥವನ್ನು ಸುಟ್ಟುಹಾಕಲಾಗಿದೆ ಎಂಬ ಖಚಿತವಲ್ಲದ ಸುದ್ದಿಯನ್ನು ಈ ಇಬ್ಬರು ಪತ್ರಕರ್ತೆಯರು ವರದಿ ಮಾಡಿದ್ದರು. ಈ ಸಂಬಂಧದ ವಿಚಾರಣೆಗೆ ಅಗರ್ತಾಲಕ್ಕೆ ಆಗಮಿಸುವಂತೆ ಅವರಿಗೆ ಸೂಚಿಸಲಾಗಿತ್ತು. ಆದರೆ, ಅವರು ತ್ರಿಪುರಾದಿಂದ ಅಸ್ಸಾಂಗೆ ಹೋಗಿದ್ದರು. ಹೀಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ನಮ್ಮಿಬ್ಬರನ್ನು ಬಂಧಿಸಲಾಯಿತು. ವಕೀಲರು ಬರುತ್ತಿದ್ದಾರೆ ತಡೆಯಿರಿ ಎಂದು ಹೇಳಿದರೂ ಕೇಳದೆ ನಮ್ಮನ್ನು ತ್ರಿಪುರಾಕ್ಕೆ ಕರೆದೊಯ್ದರು ಎಂದು ಸುಕುನಿಯಾ ಮತ್ತು ಝಾ ಟ್ವೀಟ್ ಮಾಡಿದ್ದಾರೆ.
ಬಂಧಿತ ಪತ್ರಕರ್ತೆಯರನ್ನು ಕೂಡಲೆ ಬಿಡುಗಡೆ ಮಾಡುವಂತೆ ಎಡಿಟರ್ಸ್ ಗಿಲ್ಡ್ ಒತ್ತಾಯಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನ ಖಂಡನೀಯ ಎಂದು ಹೇಳಿದೆ.
ವಿಶ್ವ ಹಿಂದೂಪರಿಷತ್ ಕಾರ್ಯಕ್ರಮದ ವೇಳೆ ಮಸೀದೆಯಲ್ಲಿ ದಾಂಧಲೆ ನಡೆದಿದೆ. ಈ ವಾಸ್ತವವನ್ನು ವರದಿ ಮಾಡಿದ ಮಾಧ್ಯಮದವರನ್ನು ಪೊಲೀಸರು ಗುರಿಯಾಗಿಟ್ಟುಕೊಳ್ಳುತ್ತಿದ್ದಾರೆ ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ. ತ್ರಿಪುರಾದಲ್ಲಿ ಮಸೀದಿಯಲ್ಲಿ ದಾಂಧಲೆ ನಡೆದಿದೆ ಎಂಬ ಸುದ್ದಿಯೇ ಸುಳ್ಳು ಇಂಥ ಯಾವುದೇ ಘಟನೆ ನಡೆದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದನ್ನೂ ಓದಿ: College of Journalism: ಬೆಂಗಳೂರಿನಲ್ಲಿ ನೂತನ ಪತ್ರಿಕೋದ್ಯಮ ಕಾಲೇಜು ಆರಂಭ
Discussion about this post