ಕುರುವಂಶ ನಾಶ ಮಾಡಿದ್ದಕ್ಕಾಗಿ ಮಹಾಭಾರತದ ಯುದ್ಧದ ಬಳಿಕ ಗಾಂಧಾರಿ ಈ ಇಬ್ಬರಿಗೆ ಶಾಪ ನೀಡಿದ್ದಳು
ಮಹಾಭಾರತದಲ್ಲಿ ಬರುವ ಹಲವು ಪಾತ್ರಗಳಲ್ಲಿ ಗಾಂಧಾರಿ ಪಾತ್ರ ಕೂಡ ಪ್ರಮುಖ. ಇಂಥ ಗಾಂಧಾರಿ ಮಹಾಭಾರತ ಯುದ್ಧವಾದ ಬಳಿಕ ಇಬ್ಬರು ಪ್ರಮುಖರಿಗೆ ಶಾಪ ನೀಡಿದ್ದಳು. ಹಾಗಾದ್ರೆ ಗಾಂಧಾರಿ, ಯಾರಿಗೆ ಮತ್ತು ಯಾಕೆ ಶಾಪ ನೀಡಿದ್ದಳು ಅಂತಾ ತಿಳಿಯೋಣ ಬನ್ನಿ..
ಆಕೆಯ ಮೊದಲ ಶಾಪ ಶಕುನಿಗೆ ಆಗಿತ್ತು. ಶಕುನಿ ಗಾಂಧಾರಿಯ ಸ್ವಂತ ಅಣ್ಣನಾಗಿದ್ದ. ಗಾಂಧಾರ ದೇಶದ ರಾಜನಾಗಿದ್ದ. ಆದರೆ ಮಹಾಭಾರತ ಯುದ್ಧವಾಗಲು ಪ್ರಮುಖ ಕಾರಣವೇ ಶಕುನಿಯಾಗಿದ್ದ. ಶಕುನಿ ತನ್ನ ಸ್ವಾರ್ಥಕ್ಕಾಗಿ ಪಾಂಡವರು ಮತ್ತು ಕೌರವರ ನಡುವೆ ಜಗಳ ಮಾಡಿಸಿ, ಮಹಾಭಾರತ ಯುದ್ಧಕ್ಕೆ ಕಾರಣನಾಗಿದ್ದ.
ಹಾಗಾಗಿ ಶಕುನಿಯ ಈ ಕೃತ್ಯಕ್ಕಾಗಿ ಗಾಂಧಾರಿ ಶಕುನಿಯ ವಂಶ ನಿರ್ವಂಶವಾಗಲಿ ಮತ್ತು ಅವನ ರಾಜ್ಯ ಅನಾಥವಾಗಲಿ ಎಂದು ಶಾಪ ನೀಡಿದ್ದಳು. ಹಾಗಾಗಿಯೇ ಶಕುನಿ ಮರಣದ ಬಳಿಕ, ಅವನ ವಂಶ ನಿರ್ವಂಶವಾಯಿತು. ಅಂದಿನ ಗಾಂಧಾರವೇ ಇಂದಿನ ಅಫ್ಗಾನಿಸ್ಥಾನ. ಗಾಂಧಾರ ದೇಶ ಈಗಲೂ ಆಕೆಯ ಶಾಪದಿಂದ, ಬಡ ದೇಶವಾಗಿಯೇ ಉಳಿದಿದೆ. ಅಲ್ಲಿನ ನಾಗರಿಕರಿಗೆ ನಾಗರಿಕತೆಯೇ ಇಲ್ಲದಂತಿದ್ದಾರೆ.
ಇನ್ನು ಎರಡನೇಯ ಶಾಪ ಶ್ರೀಕೃಷ್ಣನಿಗೆ. ಶ್ರೀಕೃಷ್ಣ ಮಹಾಭಾರತದಲ್ಲಿ ಪಾಂಡವರ ಪರ ನಿಂತು, ಅವರಿಗೆ ಸಹಾಯ ಮಾಡಿ, ಕೌರವರ ಸಂಹಾರ ಆಗುವಂತೆ ಮಾಡಿದ. ಅಲ್ಲದೇ ಗಾಂಧಾರಿಯ ನೂರು ಮಕ್ಕಳು ಸಾಯುವಂತೆ ಮಾಡಿದನೆಂದು ಶ್ರೀಕೃಷ್ಣನಿಗೆ ಗಾಂಧಾರಿ ಶಾಪ ನೀಡಿದಳು. ನಿನ್ನ ವಂಶವೂ ನಿರ್ವಂಶವಾಗಲಿ, ನಿನ್ನವರು ಬಡಿದಾಡಿಕ“ಂಡು ಸಾಯಲಿ, ನೀನು ಏಕಾಂಗಿಯಾಗಿ ಸಾಯು ಎಂದು ಕೃಷ್ಣನಿಗೆ ಗಾಂಧಾರಿ ಶಾಪ ನೀಡಿದಳು.
ಇನ್ನು ಪಾಂಡವರಿಗೇಕೆ ಗಾಂಧಾರಿ ಶಾಪ ನೀಡಲಿಲ್ಲವೆಂದರೆ, ಮಹಾಭಾರತ ಯುದ್ಧದ ಬಳಿಕ ಯುಧಿಷ್ಠಿರ ಗಾಂಧಾರಿಯಲ್ಲಿ ಬಂದು ಕ್ಷಮೆಯಾಚಿಸಿದ್ದ. ಹೀಗಾಗಿ ಗಾಂಧಾರಿ ಪಾಂಡವರಿಗೆ ಶಾಪ ನೀಡಿರಲಿಲ್ಲ.
ಯಾಕೆ ಕೌರವರು ಸಾವನ್ನಪ್ಪಿದರು ಎಂಬ ಪ್ರಶ್ನೆಗೆ ಉತ್ತರ, ಧೃತರಾಷ್ಟ್ರ 50 ಜನ್ಮದ ಹಿಂದೆ ಬೇಟೆಗಾರನಾಗಿದ್ದ. ಈ ವೇಳೆ ಓರ್ವ ತಂದೆ ಪಕ್ಷಿಯ ಎದುರು, ಅದರ 100 ಮರಿಗಳನ್ನು ಬೇಟೆಯಾಡಿದ್ದ. ಆಗ ಆ ತಂದೆ ಪಕ್ಷಿ ಮಕ್ಕಳ ಸಾವನ್ನು ಕಂಡು ದುಃಖಿಸಿತ್ತು. ಆ ರೀತಿ ಪುಣ್ಯ ಸಂಪಾದನೆ ಮಾಡಿ, ನೂರು ಮಕ್ಕಳನ್ನು ಪಡೆಯುವ ಭಾಗ್ಯ ಧೃತರಾಷ್ಟ್‌ರನಿಗೆ ದ್ವಾಪರ ಯುಗದಲ್ಲಿ ಬಂದಿತ್ತು. ಹಾಗಾಗಿ 100 ಮಕ್ಕಳ ಪಡೆಯುವ ಪುಣ್ಯದ ಫಲ. ಮತ್ತು ಮಹಾಭಾರತ ಯುದ್ಧದಲ್ಲಿ ಅವರ ಸಾವನ್ನು ಕಾಣುವ ಪಾಪದ ಫಲ ಎರಡನ್ನೂ 1 ಜನ್ಮದಲ್ಲಿ ಪಡೆದಿದ್ದ.
ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಬಲರಾಮ ಮಹಾಭಾರತ ಯುದ್ಧದಿಂದ ದೂರವಿದ್ದಿದ್ದಕ್ಕೆ ಕಾರಣವೇನು..?
ಮಹಾಭಾರತ ಯುದ್ಧದಲ್ಲಿ ಕೃಷ್ಣ, ಅರ್ಜುನ, ದುರ್ಯೋಧನ ಸೇರಿ ಹಲವರು ಪಾಲ್ಗೊಂಡಿದ್ದರು. ಆದ್ರೆ ಬಲರಾಮ ಮಾತ್ರ ಮಹಾಭಾರತ ಯುದ್ಧದಿಂದ ದೂರ ಉಳಿದಿದ್ದ. ಹಾಗಾದ್ರೆ ಯಾಕೆ ಬಲರಾಮ ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡಿಲ್ಲ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..‘
ಬಲಶಾಲಿಯಾಗಿದ್ದ ಬಲರಾಮ, ಮಹಾಭಾರತ ಯುದ್ಧದಲ್ಲಿ ಪಾಲ್ಗೊಳ್ಳದೇ, ತೀರ್ಥ ಯಾತ್ರೆಗೆ ತೆರಳಿದ. ಯಾಕಂದ್ರೆ ಕೌರವರು ಮತ್ತು ಪಾಂಡವರಿಗೆ ಬಲರಾಮ ಗಧೆಯನ್ನ ಹೇಗೆ ಬಳಸುವುದು ಎಂದು ಹೇಳಿದ್ದ. ಕೌರವರು ಮತ್ತು ಪಾಂಡವರನ್ನು ಕಂಡ್ರೆ ಬಲರಾಮನಿಗೆ ಪ್ರೀತಿ ಇತ್ತು. ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡು, ಒಬ್ಬರ ಪರ ವಹಿಸಿ ಇನ್ನೊಬ್ಬರ ವಿರುದ್ಧ ಯುದ್ಧ ಮಾಡುವುದು ಬಲರಾಮನಿಗೆ ಇಷ್ಟವಿರಲಿಲ್ಲ. ಹಾಗಾಗಿ ಬಲರಾಮ ಈ ಯುದ್ಧದಿಂದ ದೂರ ಉಳಿದಿದ್ದ.
ಯುದ್ಧ ಶುರುವಾಗುವ ಮುನ್ನ ಪಾಂಡವರ ಕುಟೀರಕ್ಕೆ ಬಂದಿದ್ದ ಬಲರಾಮ, ಕೃಷ್ಣನಿಗೆ ಎಷ್ಟು ಹೇಳಿದರೂ ಅವನು ಕೇಳುತ್ತಿಲ್ಲ. ಕೌರವರು ಪಾಂಡವರು ಇಬ್ಬರೂ ನಮ್ಮವರೇ. ಹಾಗಾಗಿ ಯಾರ ಪರವೂ ಯುದ್ಧ ಮಾಡಬೇಡ ಎಂದಿದ್ದೆ. ಆದ್ರೆ ಅವನು ಅರ್ಜುನನ ಪರ ವಹಿಸಿದ್ದಾನೆ. ಏನೇ ಆಗಲಿ ನಾನಂತೂ ಯಾರ ಪರವೂ ವಹಿಸುವುದಿಲ್ಲ. ನಾನು ತೀರ್ಥಯಾತ್ರೆಗೆ ಹೊರಟಿದ್ದೇನೆಂದು ಹೇಳಿ ಹೋದ.
ನಂತರ ತೀರ್ಥಯಾತ್ರೆ ಮುಗಿಸಿ ಬರುವ ವೇಳೆಗೆ ಭೀಮ, ದುರ್ಯೋಧನನಿಗೆ ಗಧೆಯಿಂದ ಬಡಿದು ನೆಲಕ್ಕುರುಳಿಸಿದ್ದ. ಆಗ ಕ್ರೋಧಿತನಾದ ಬಲರಾಮ, ಭೀಮ ನೀನು ಮಾಡಿದ್ದು ತಪ್ಪು, ದುರ್ಯೋಧನನ್ನು ಈ ರೀತಿ ಛಲದಿಂದ ಕೊಂದಿದ್ದು ತಪ್ಪು. ಇದಕ್ಕೆ ನಿನಗೆ ಶಿಕ್ಷೆಯಾಗಲೇಬೇಕೆಂದು ಹೇಳುತ್ತಾನೆ. ಆಗ ಕೃಷ್ಣ, ನೀನು ಯಾರ ಪರವೂ ಅಲ್ಲವೆಂದಿದ್ದೆ. ಹೀಗಿರುವಾಗ ಈ ಬಂದು ಭೀಮನಿಗೆ ಶಿಕ್ಷೆ ಕೊಡುವುದು ಉಚಿತವಲ್ಲ. ಹಾಗಾಗಿ ನೀನು ಇದರಿಂದ ದೂರವಿರು ಎನ್ನುತ್ತಾನೆ. ಹೀಗೆ ಬಲರಾಮ ಮಹಾಭಾರತ ಯುದ್ಧದಿಂದ ದೂರವಿರುತ್ತಾನೆ.
ೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಯಾರ ತಪ್ಪಿಗೆ ದ್ರೌಪದಿಗೆ ಐವರು ಪತಿಯನ್ನು ಪಡೆಯಬೇಕಾಯಿತು ಗೊತ್ತಾ..?
ಎಲ್ಲರಿಗೂ ಗೊತ್ತಿರುವ ಹಾಗೆ ದ್ರೌಪದಿಗೆ ಐವರು ಪತಿಯರು. ಹಾಗಾಗಿಯೇ ಆಕೆಯನ್ನು ಪಾಂಚಾಲಿ ಎಂದು ಕರೆಯುತ್ತಿದ್ದರು. ಆದ್ರೆ ಯಾರ ತಪ್ಪಿನಿಂದ ದ್ರೌಪದಿ ಐವರನ್ನು ವಿವಾಹವಾಗಬೇಕಾಯಿತು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯೋಣ ಬನ್ನಿ..
ಯಮದೇವ ನೈಮಿಷಾರಣ್ಯದಲ್ಲಿ ಒಂದು ವಿಶೇಷ ಯಜ್ಞ ನಡೆಸುತ್ತಿದ್ದ. ಹೀಗಾಗಿ ಮನುಷ್ಯರೆಲ್ಲ ಅಮರರಾಗುತ್ತಿದ್ದರು. ಹೀಗಾಗಿ ಭೂಮಿಯ ಭಾರ ಹೆಚ್ಚತೊಡಗಿತು. ಇದಕ್ಕೆ ಕಂಗಾಲಾದ ದೇವತೆಗಳು, ಬ್ರಹ್ಮನ ಬಳಿ ಹೋಗಿ, ಮನುಷ್ಯರು ಹೀಗೆ ಅಮರರಾಗುತ್ತಿದ್ದರೆ ಏನು ಗತಿ ಎಂದು ಗೋಗರೆದರು. ಆಗ ಬ್ರಹ್ಮ ದೇವ ಯಮರಾಜ ಯಜ್ಞದಲ್ಲಿದ್ದು, ಯಜ್ಞ ಮುಗಿದ ಬಳಿಕ ಯಮದೇವ ಮತ್ತೆ ತಮ್ಮ ಕೆಲಸವನ್ನು ಮುಂದುವರಿಸುತ್ತಾರೆಂದು ಹೇಳುತ್ತಾರೆ.
ಇದಾದ ಬಳಿಕ ಇಂದ್ರ ಭೂಲೋಕದಲ್ಲಿ ಸುತ್ತಾಡುವಾಗ, ಒಂದು ನದಿಯಲ್ಲಿ ಸುಂದರವಾದ ಕಮಲಗಳು ತೇಲಿ ಬರುವುದು ಕಂಡಿತು. ಅದು ಎಲ್ಲಿಂದ ಬರುತ್ತಿದೆ ಎಂದು ಹುಡುಕಿದರೆ, ಅದು ಓರ್ವ ಮಹಿಳೆಯ ಕಣ್ಣೀರಿನಿಂದ ಅರಳಿ ಬರುತ್ತಿತ್ತು. ಆಗ ಇಂದ್ರೆ ಆ ಮಹಿಳೆಯ ಬಳಿ ಹೋಗಿ, ಯಾಕೆ ಅಳುತ್ತಿದ್ದೀರಿ ಎಂದು ಕೇಳಿದ. ಆಗ ಆ ಮಹಿಳೆ, ನನ್ನ ಜೊತೆ ಬನ್ನಿ, ಆಗ ನಿಮಗೆ ನಾನ್ಯಾಕೆ ಅಳುತ್ತಿದ್ದೇನೆಂದು ಗೊತ್ತಾಗುತ್ತದೆ ಎನ್ನುತ್ತಾಳೆ.
ಸ್ವಲ್ಪ ಮುಂದೆ ಹೋದಾಗ ಅಲ್ಲಿ ಓರ್ವ ಸುಂದರ ಸ್ತ್ರೀ ಮತ್ತು ಪುರುಷ ಸೇರಿ ಪಗಡೆಯಾಡುತ್ತಿದ್ದರು. ಇಂದ್ರದೇವ ಬಂದರೂ ಕೂಡ, ಅವರು ಅವನೆಡೆಗೆ ನೋಡದೆ ಪಗಡೆಯಾಡುತ್ತಿದ್ದರು. ಆಗ ಇಂದ್ರನಿಗೆ ಕೋಪ ಬರುತ್ತದೆ. ಅವನು ಅಹಂನಿಂದ ಆ ಪುರುಷನೊಂದಿಗೆ ಮಾತನಾಡುತ್ತಾನೆ. ಆ ಪುರುಷ ಇಂದ್ರನನ್ನು ನೋಡಿ ನಕ್ಕು ಸುಮ್ಮನಾಗುತ್ತಾನೆ.
ಅದಾದ ಬಳಿಕ ಇಂದ್ರ ಅಲ್ಲಾಡದ ಹಾಗೆ ಮೂರ್ತಿಯಂತೆ ಗಟ್ಟಿಯಾಗುತ್ತಾನೆ. ಅಲ್ಲೇ ಇದ್ದ ಸ್ತ್ರೀ ಇಂದ್ರನನ್ನು ಮುಟ್ಟುತ್ತಾಳೆ. ಆಗ ಇಂದ್ರ ಮತ್ತೆ ಮೊದಲಿನಂತಾಗುತ್ತಾನೆ. ಯಾಕಂದ್ರೆ ಅಲ್ಲೇ ಪಗಡೆಯಾಡುತ್ತಿದ್ದ ಸ್ತ್ರೀ ಮತ್ತು ಪುರುಷ, ಶಿವ ಮತ್ತು ಪಾರ್ವತಿಯಾಗಿರುತ್ತಾರೆ. ಇಂದ್ರನ ಅಹಂ ಕಂಡ ಶಿವ, ಇಲ್ಲೇ ಇರುವ ಗುಹೆಯ ಬಾಗಿಲನ್ನು ಸರಿಸಿ ಹೋಗಿ ನೋಡು, ನಿನ್ನ ಹಾಗೆ ಅಹಂನಿಂದ ಮೆರೆದ 4 ಜನ ಅಲ್ಲಿದ್ದಾರೆಂದು ಹೇಳಿದ.
ಅಲ್ಲದೇ, ನೀನು ಅದೇ ಗುಹೆಯಲ್ಲಿ ವಾಸಮಾಡಬೇಕು. ಮುಂದಿನ ಯುಗದಲ್ಲಿ ಆ ನಾಲ್ವರು ಮತ್ತು ನೀನೊಬ್ಬ ಸೇರಿ ಅಣ್ಣತಮ್ಮಂದಿರಾಗಿ ಜನಿಸುತ್ತೀರಿ. ಮತ್ತು ನಿಮ್ಮನ್ನು ಇಲ್ಲಿ.ವರೆಗೆ ಕರೆತಂದ ಮಹಿಳೆ ನಿಮ್ಮೆಲ್ಲರ ಪತ್ನಿಯಾಗುತ್ತಾಳೆ. ನಿಮ್ಮಿಂದಲೇ ಈ ಪ್ರಪಂಚದ ಭಾರ ಕಡಿಮೆಯಾಗುತ್ತದೆ ಎನ್ನುತ್ತಾನೆ.‘
ಹಾಗಾಗಿಯೇ ಮಹಾಭಾರತ ಕಾಲದಲ್ಲಿ ಪಾಂಡವರಿಗೆ ದ್ರೌಪದಿ ಪತ್ನಿಯಾಗುತ್ತಾಳೆ. ಮತ್ತು ದುರ್ಯೋಧನ ದ್ರೌಪದಿಯ ವಸ್ತ್ರಾಪಹರಣ ಮಾಡಿದ್ದಕ್ಕೆ ಮಹಾಭಾರತ ಯುದ್ಧ ನಡೆದು, ಅದರಲ್ಲಿ ಹಲವರು ಹತರಾಗಿ ಭೂಮಿಯ ಭಾರ ಕಡಿಮೆಯಾಯಿತು.
ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಅರ್ಜುನನಲ್ಲಿರುವ ಈ ಗುಣಗಳನ್ನು ಕಲಿತರೆ ನೀವು ಬಹುಬೇಗ ಯಶಸ್ಸು ಗಳಿಸಬಹುದು
ಮಹಾಭಾರತದಲ್ಲಿ ಕಾಣಸಿಗುವ ಪ್ರಸಿದ್ಧ ವ್ಯಕ್ತಿತ್ವದಲ್ಲಿ ಅರ್ಜುನ ಪ್ರಮುಖ. ಪಂಚ ಪಾಂಡವರಲ್ಲಿ ಮಧ್ಯಮ ಪಾಂಡವ ಅಂತಲೇ ಪ್ರಸಿದ್ಧನಾದ ಅರ್ಜುನ, ಅದೇಕೆ ಅಷ್ಟು ಪ್ರಚಲಿತ ಎಂದರೆ, ಆತನಲ್ಲಿರುವ ಕೆಲವು ಗುಣಗಳಿಂದ. ಹಾಗಾದ್ರೆ ಅರ್ಜುನನಲ್ಲಿರುವ ಯಾವ ಗುಣಗಳನ್ನು ನಾವು ಕಲಿತರೆ ಯಶಸ್ಸು ಗಳಿಸಬಹುದು ಅಂತಾ ತಿಳಿಯೋಣ ಬನ್ನಿ..
ಶಕ್ತಿ, ಬುದ್ಧಿವಂತಿಕೆ ಮತ್ತು ಧೈರ್ಯ: ಮಹಾಭಾರತದಲ್ಲಿ ಅರ್ಜುನ ಏಕೆ ಅಷ್ಟು ವಿಶಿಷ್ಟ ವ್ಯಕ್ತಿಯಾಗಿ ಕಾಣಿಸುವನು ಎಂದರೆ, ಆತನ ಧೈರ್ಯದಿಂದ. ಆತನಿಗೆ ಅದೆಷ್ಟರ ಮಟ್ಟಿಗೆ ಧೈರ್ಯವಿತ್ತೆಂದರೆ, ಎಂಥಹ ಪರಿಸ್ಥಿತಿ ಬಂದರೂ, ಅದನ್ನು ಎದುರಿಸುವ ಧೈರ್ಯವಿತ್ತು. ಇನ್ನು ಶಕ್ತಿ, ಬುದ್ಧಿವಂತಿಕೆಯ ಬಗ್ಗೆ ಮಾತನಾಡುವುದಾದರೆ, ಇದೇ ಬುದ್ಧಿವಂತಿಕೆಯಿಂದಲೇ ಆತ ಸ್ವಯಂವರದಲ್ಲಿ ದ್ರೌಪದಿಯನ್ನು ಗೆದ್ದಿದ್ದು. ಯಾರಿಗೆ ಜೀವನದಲ್ಲಿ ಧೈರ್ಯ, ಶೌರ್ಯ, ಬುದ್ಧಿವಂತಿಕೆ ಇರುತ್ತದೆಯೋ, ಅಂಥವರು ಜೀವನದಲ್ಲಿ ಸೋಲಲು ಸಾಧ್ಯವೇ ಇಲ್ಲ.
ತಾಳ್ಮೆ: ಅರ್ಜುನ ತನ್ನ ತಾಳ್ಮೆಯಿಂದಲೇ, ಬುದ್ಧಿವಂತ, ಧೈರ್ಯವಂತ, ಬಿಲ್ವಿದ್ಯಾ ಪರಿಣಿತ ಎಂದೆನ್ನಿಸಿಕ“ಂಡಿದ್ದು. ಹಿರಿಯರೇ ಹೇಳುವ ಹಾಗೆ, ಯಾರಲ್ಲಿ ತಾಳ್ಮೆ ಇರುತ್ತದೆಯೋ, ಅವರು ಜಗತ್ತನ್ನೇ ಗೆಲ್ಲಬಹುದಂತೆ. ಅರ್ಜುನನಂತೆ ನೀವು ತಾಳ್ಮೆ ಹ“ಂದಿದ್ದಲ್ಲಿ, ನೀವೂ ಜೀವನದಲ್ಲಿ ಯಶಸ್ಸು ಗಳಿಸಬಹುದು.
ಕಲಿಕೆಯ ಗುಣ: ಅರ್ಜುನ ಬಿಲ್ಲುಗಾರಿಕೆಯಲ್ಲಿ ನಿಪುಣನಾಗಿದ್ದ. ಎಲ್ಲರಿಗಿಂತ ಚೆನ್ನಾಗಿ ಬಿಲ್ವಿದ್ಯೆ ಬಲ್ಲವನಾಗಿದ್ದ. ಏಕೆಂದರೆ ಅವನ ಏಕಾಗೃತೆ ಆ ಮಟ್ಟಿಗಿತ್ತು. ಅಂಥ ಏಕಾಗೃತೆ ನಮ್ಮ ಜೀವನದಲ್ಲಿದ್ದರೆ, ನಾವೂ ಜೀವನದಲ್ಲಿ ಯಶಸ್ಸು ಸಾಧಿಸಬಹುದು.
ಮೋಹ ತ್ಯಜಿಸುವ ಗುಣ: ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಗುರುಪದೇಶ ಮಾಡುವಾಗ, ತಾನು, ತನ್ನವರು ಎಂಬ ಮೋಹವೇ ಎಲ್ಲ ದುಃಖಗಳಿಗೂ ಕಾರಮವೆಂದು ಹೇಳಿದ್ದ. ಈ ಮಾತನ್ನು ಮನಗಂಡ ಅರ್ಜುನ ದುಃಖದ ಪಾಠ ಕಲಿತಿದ್ದ. ಎಲ್ಲ ಮೋಹಗಳಿಂದ ಈಚೆ ಬಂದಾಗ ಮಾತ್ರ, ನಮ್ಮ ಜೀವನದ ದುಃಖ ಕಡಿಮೆಯಾಗುತ್ತದೆ ಎಂದು ಅರಿತ. ಅವನಂತೆ ನಾವು ಕೂಡ ಎಲ್ಲರ ಮೇಲಿನ ಮೋಹದಿಂದ ಈಚೆ ಬಂದಾಗಲೇ, ದುಃಖದಿಂದಲೂ ಹ“ರಬರುತ್ತೇವೆ.
ೃೃೃೃೃೃೃೃೃೃೃೃೃೃೃೃೃೃೃ
ಭಾರತದಲ್ಲಿ ರಕ್ಕಸಿ ಹಿಡಿಂಬೆಗೂ ಇದೆ ದೇವಸ್ಥಾನ
ಭಾರತದಲ್ಲಿ ರಾಶಿ ರಾಶಿ ಪುರಾತನ, ಪ್ರಾಚೀನ ಕಾಲದ, ಶ್ರೀಮಂತ, ಸಾಂಸ್ಕೃತಿಕ ದೇವಸ್ಥಾನಗಳಿದೆ. ಇಡೀ ಪ್ರಪಂಚದಲ್ಲಿ ಹಿಂದೂ ದೇವಸ್ಥಾನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ದೇಶ ಅಂದ್ರೆ ಅದು ಭಾರತ ಮಾತ್ರ.
ಆದರೆ ಇಲ್ಲಿನ ವಿಶೇಷತೆ ಅಂದ್ರೆ ನಮ್ಮ ದೇಶದಲ್ಲಿ ಬರೀ ದೇವರ ದೇವಸ್ಥಾನ ಮಾತ್ರವಲ್ಲದೇ, ರಾಕ್ಷಸರಿಗೂ ದೇವಸ್ಥಾನವಿದೆ. ಮಹಾಭಾರತದಲ್ಲಿ ಬರುವ ರಕ್ಕಸಿಯಾಗಿರುವ ಹಿಡಿಂಬೆಗೂ ನಮ್ಮ ದೇಶದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ. ಹಾಗಾದ್ರೆ ಆ ದೇವಸ್ಥಾನ ಎಲ್ಲಿದೆ..? ಆ ದೇವಸ್ಥಾನದ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ..
ಪ್ರವಾಸಿ ತಾಣ ಎನ್ನಿಸಿಕ“ಂಡಿರುವ ಹಿಮಾಚಲಪ್ರದೇಶದ ಮನಾಲಿಯಲ್ಲಿ ಈ ಹಿಡಿಂಬಾ ದೇಗುಲವಿದೆ. ಇಲ್ಲಿ ಜನ ಹಿಡಿಂಬೆಯನ್ನು ಕಾಳಿಯ ರೂಪವೆಂದು ಭಾವಿಸಿ ಪೂಜಿಸುತ್ತಾರೆ. ಮನಾಲಿಗೆ ಪ್ರವಾಸ ಅಥವಾ ಹನಿಮೂನ್‌ಗೆ ಬರುವ ಜನ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಮನಾಲಿಯ ಕಾಡಿನಲ್ಲಿ ದೇವದಾರು ಮರದ ಮಧ್ಯದಲ್ಲಿ ಈ ದೇವಸ್ಥಾನ ನಿರ್ಮಿಸಲಾಗಿದೆ. ಈ ಕಾಡಿನ ಸೌಂದರ್ಯದ ಮಧ್ಯೆ ಇರುವ ಈ ದೇವದಾರು ಮರಗಳೇ ಈ ದೇವಸ್ಥಾನದ ಅಂದವನ್ನು ಹೆಚ್ಚಿಸಿದೆ ಅಂದರೆ ತಪ್ಪಾಗಲಾರದು. ಇದರ ಇನ್ನ“ಂದು ವಿಶೇಷತೆ ಅಂದ್ರೆ ಈ ದೇವಸ್ಥಾನ ಮರದಿಂದ ನಿರ್ಮಿಸಲಾಗಿದೆ.
ಇನ್ನು ದೇವಸ್ಥಾನದ ವಿಚಿತ್ರ ಸಂಗತಿ ಅಂದ್ರೆ, ಈ ದೇವಸ್ಥಾನದಲ್ಲಿ ಯಾವುದೇ ಮೂರ್ತಿ ಇಲ್ಲ. ಬೃಹತ್ ಪಾಾದದ ರೂಪದಲ್ಲಿರುವ ಕಲ್ಲನ್ನೇ ಪೂಜಿಸಲಾಗುತ್ತದೆ. ಇದು ಹಿಡಿಂಬೆಯ ಪಾದ ತಾಕಿರುವ ಕಲ್ಲೆನ್ನಲಾಗಿದೆ. ಅಲ್ಲದೇ ಇದೇ ಸ್ಥಳದಲ್ಲಿ ಹಿಡಿಂಬೆ ತಪಸ್ಸು ಮಾಡಿದ್ದಳೆನ್ನಲಾಗಿದೆ. ಈ ದೇವಸ್ಥಾನದ ಗರ್ಭಗುಡಿ ಗುಹೆಯಂತಿದೆ.
ಇನ್ನು ಭೀಮಸೇನನಿಂದ ಪಡೆದಿದ್ದ ಮಗನಾಗಿರುವ ಘಟೋತ್ಕಜನ ದೇವಸ್ಥಾನವೂ ಇಲ್ಲಿದೆ. ಆದರೆ ಅದು ಬೃಹತ್ ಮರವಾಗಿದೆ. ಈ ಮರವನ್ನೇ ಘಟೋತ್ಕಜನ ರೂಪ ಎಂದು ಪೂಜಿಸಲಾಾಗುತ್ತದೆ. ಈ ಮರಕ್ಕೆ ಕತ್ತಿ, ಚೂರಿ, ಪ್ರಾಣಿಗಳ ಬುರುಡೆ, ಕೊಂಬು ಕಟ್ಟಲಾಗಿದೆ.
ಮನಾಲಿಯ ರಾಜರನ್ನು ಪ್ರಜೆಗಳನ್ನು ಕಾಯುವ ದೇವತೆ ಅಂದ್ರೆ ಅದು ಹಿಡಿಂಬೆ ಅಂತಲೇ ಇಲ್ಲಿನ ಜನರ ನಂಬಿಕೆ. ಮನಾಲಿಯ ಈ ಪ್ರದೇಶಕ್ಕೆ ಹಿಡಿಂಬ ರಾಜನಾಗಿರುತ್ತಾನೆ. ಹಿಡಿಂಬೆ ಅವನ ತಂಗಿ. ಹಿಡಿಂಬನಿಗೆ ರಾಕ್ಷಸ ಗುಣ ತುಂಬಿ ತುಳುಕುತ್ತಿದ್ದರೆ, ಹಿಡಿಂಬೆಗೆ ಕರುಣೆ ಹೆಚ್ಚು. ಆಕೆ ಮನುಷ್ಯರಂತೆ ವರ್ತಿಸುವವಳು. ಹಾಗಾಗಿಯೇ ಭೀಮಸೇನನಿಗೆ ಮನಸೋತು, ಕೆಲ ಸಮಯ ಅವನ ಪತ್ನಿಯಾಗಿ ಘಟೋತ್ಕಜನನ್ನು ಪಡೆದಿದ್ದಳು.
ಭೀಮನ ಮೇಲೆ ಪ್ರೀತಿಯಾಗಿದ್ದು ಹೇಗೆ..?
ಪಾಂಡವರು ಮನವಾಸಕ್ಕೆಂದು ಅರಣ್ಯಕ್ಕೆ ಬಂದಾಗ, ಭೀಮನನ್ನು ಕಂಡ ಹಿಡಿಂಬನಿಗೆ ಆತನನ್ನು ತಿನ್ನಬೇಕು ಎಂದು ಮನಸ್ಸಾಯಿತು. ಆಗ ಹಿಡಿಂಬ ತಂಗಿ ಹಿಡಿಂಬೆಯನ್ನು ಭೀಮನನ್ನು ಪುಸಲಾಯಿಸಿ, ಕರೆತಾ ಎಂದು ಕಳುಹಿಸಿದ. ಭೀಮನನ್ನು ತರಲು ಹೋಗಿದ್ದ ಹಿಡಿಂಬೆಗೆ ಭೀಮನ ಮೇಲೆ ಪ್ರೇಮವಾಯಿತು. ಹೀಗಾಗಿ ಸಹೋದರ ಹಿಡಿಂಬನ ದುರಾಲೋಚನೆ ಬಗ್ಗೆ ಭೀಮನಲ್ಲಿ ಹೇಳುತ್ತಾಳೆ. ಆಗ ಭೀಮ ಹಿಡಿಂಬನ ಜತೆ ಯುದ್ಧ ಮಾಡಿ ಆತನ ಸಂಹಾರ ಮಾಡುತ್ತಾನೆ.
ಬಳಿಕ ಭೀಮ ಹಿಡಿಂಬೆ ವಿವಾಹವಾಗುತ್ತದೆ. ನಂತರ ಪುತ್ರ ಸಂತಾನವಾಗುತ್ತದೆ. ಇಬ್ಬರೂ 1 ವರ್ಷ ಸಂಸಾರ ಮಾಡಿ, ತಮ್ಮ ತಮ್ಮ ದಾರಿಗೆ ಹೋಗುತ್ತಾರೆ. ಭೀಮ ವನವಾಸ ಮುಂದುವರಿಸಿದರೆ, ಹಿಡಿಂಬೆ ಪುತ್ರನ ಜತೆ ಮನಾಲಿಯಲ್ಲೇ ಇದ್ದು, ರಾಜ್ಯ ಭಾರ ಮಾಡುತ್ತಾಳೆ.
ಮುಂದೆ ಮಹಾಭಾರತ ಯುದ್ಧ ನಡೆಯುವಾಗ ಪಾಂಡವರ ಪರವಾಗಿ, ತಂದೆಗೆ ಬೆಂಬಲವಾಗಿ ಪುತ್ರ ಘಟೋತ್ಕಜನನ್ನು ಕಳುಹಿಸಿಕ“ಡುತ್ತಾಳೆ. ಆದರೆ ಪುತ್ರ ಘಟೋತ್ಕಜ ಮಾತ್ರ ಮರಳಿ ಬರುವುದಿಲ್ಲ. ಬಳಿಕ ಹಿಡಿಂಬೆ ಮನಾಲಿಯ ಇದೇ ಸ್ಥಳದಲ್ಲಿ ತಪಸ್ಸಿಗೆ ಕೂರುತ್ತಾಳೆ. ಆಕೆ ತಪಸ್ಸಿಗೆ ಕುಳಿತ ಸ್ಥಳದಲ್ಲಿಯೇ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.
Discussion about this post