ಗಂಗೆಯಲ್ಲಿ ಸ್ನಾನ ಮಾಡಿದರೆ ನಿಜವಾಗಲೂ ನಮ್ಮ ಪಾಪ ಕಳೆಯುತ್ತದಾ..?
ಗಂಗಾ ಸ್ನಾನ ತುಂಗಾ ಪಾನ ಮಾಡಿದ್ದಲ್ಲಿ, ಜನ್ಮ ಪಾವನವಾಗುತ್ತದೆ. ಮಾಡಿದ ಪಾಪ ನಾಶವಾಗುತ್ತದೆ ಅನ್ನೋ ನಂಬಿಕೆ ಇದೆ. ಯಾಕಂದ್ರೆ ಈ ನದಿಗಳು ಅಷ್ಟು ಪವಿತ್ರವಾಗಿದೆ. ಹಾಗಾದ್ರೆ ನಿಜವಾಗ್ಲೂ ಗಂಗೆಯಲ್ಲಿ ಸ್ನಾನ ಮಾಡಿದ್ರೆ, ಪಾಪ ನಾಶವಾಗುತ್ತದಾ..? ಇಲ್ಲವಾ..? ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..
ಒಮ್ಮೆ ಓರ್ವ ಋಷಿ ಮುನಿ ಹೀಗೆ ಯೋಚಿಸತೊಡಗಿದರು. ಎಲ್ಲ ಪಾಪಿಗಳು ಗಂಗೆಯಲ್ಲಿ ಸ್ನಾನ ಮಾಡುತ್ತಾರೆ. ಹಾಗಾಗಿ ಪಾಪಗಳೆಲ್ಲಾ, ಗಂಗೆಯಲ್ಲಿ ಸೇರುತ್ತದೆ. ಹಾಗಾದ್ರೆ ಗಂಗೆಯೂ ಪಾಪಿಯಾಗುತ್ತಾಳಾ ಅಂತಾ ಯೋಚಿಸತೊಡಗಿದರು. ಇದಕ್ಕೆ ಉತ್ತರ ಪಡೆಯಬೇಕು ಎಂದು ಋಷಿಗಳು ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾಳೆ. ಬ್ರಹ್ಮ ಪ್ರತ್ಯಕ್ಷನಾಗಿ ತನ್ನನ್ನು ನೆನಪಿಸಿಕೊಳ್ಳಲು ಕಾರಣವೇನು ಎಂದು ಕೇಳುತ್ತಾರೆ.
ಆಗ ಋಷಿಗಳು, ಪಾಪ ಕಳೆಯಲು ಗಂಗೆಯಲ್ಲಿ ಎಲ್ಲರೂ ಸ್ನಾನ ಮಾಡುತ್ತಾರೆ. ಹಾಗಾಗಿ ಗಂಗೆಯಲ್ಲಿ ಎಲ್ಲ ಪಾಪ ಹೋಗುತ್ತದೆ.. ಹಾಗಾದ್ರೆ ಗಂಗೆಯೂ ಪಾಪಿಯಾ ಎಂದು ಕೇಳುತ್ತಾರೆ. ಆಗ ಬ್ರಹ್ಮದೇವ, ಇದನ್ನು ಗಂಗೆಯಲ್ಲಿಯೇ ಕೇಳೋಣ ಬಾ ಎನ್ನುತ್ತಾರೆ. ಇಬ್ಬರೂ ಗಂಗೆಯಲ್ಲಿ ಈ ಬಗ್ಗೆ ಕೇಳಿದಾಗ, ನಾನೇಕೆ ಪಾಪಿಯಾಗುತ್ತೇನೆ. ನಾನು ಆ ನೀರನ್ನೆಲ್ಲ ಸಮುದ್ರಕ್ಕೆ ಸೇರಿಸುತ್ತೇನೆ ಎನ್ನುತ್ತಾಳೆ.
ಬ್ರಹ್ಮ ಮತ್ತು ಋಷಿ ಸೇರಿ, ಸಾಗರ ದೇವನಲ್ಲಿ ಹೋಗಿ, ಗಂಗೆಯ ಪಾಪದ ನೀರೆಲ್ಲ ನಿಮ್ಮ ಬಳಿ ಬರುತ್ತದೆ. ಹಾಗಾದ್ರೆ ನೀವು ಪಾಪಿನಾ ಎಂದು ಕೇಳುತ್ತಾರೆ. ಆಗ ಸಾಗರ ದೇವ ಹೇಳುತ್ತಾನೆ, ನಾನೇಕೆ ಪಾಪಿಯಾಗಲಿ..? ನಾನು ಆ ನೀರನ್ನೆಲ್ಲ ಮೋಡದ ಬಳಿ ಕಳುಹಿಸುತ್ತೇನೆ ಎನ್ನುತ್ತಾರೆ. ಮೋಡ ಬಳಿಯೂ ಈ ಪ್ರಶ್ನೆ ಕೇಳಿದಾಗ, ಅದಕ್ಕೆ ಉತ್ತರಿಸಿದ ಮೋಡ, ನನ್ನ ಬಳಿ ಇರುವ ನೀರು ಮಳೆಯಾಗಿ, ಮನುಷ್ಯನ ಬಳಿ ಹೋಗುತ್ತದೆ.
ಆ ಮಳೆಯಿಂದ ಮನುಷ್ಯ ಅನ್ನವನ್ನು ಬೆಳೆಯುತ್ತಾನೆ. ಆ ಅನ್ನವನ್ನ ಸರಿಯಾದ ಸಮಯದಲ್ಲಿ ತಿನ್ನುವವನು, ಸರಿಯಾದ ರೀತಿಯಲ್ಲಿ ತಿನ್ನುವವನು ಉತ್ತಮನಾಗಿರುತ್ತಾನೆ. ಸರಿಯಾದ ಸಮಯದಲ್ಲಿ ಅನ್ನ ಉಣ್ಣದೇ, ಸರಿಯಾದ ರೀತಿಯಲ್ಲಿ ಅನ್ನ ಉಣ್ಣದವ ಪಾಪಿಯಾಗುತ್ತಾನೆ. ಸರಿಯಾದ ಸಮಯ ಅಂದ್ರೆ ಶಾಂತವಾಗಿರುವ, ನೆಮ್ಮದಿಯಿಂದಿರುವ ಸಮಯ. ಸರಿಯಾದ ರೀತಿ ಎಂದರೆ, ನಿಯತ್ತಾಗಿ ದುಡಿದ ಹಣದಿಂದ ಖರೀದಿಸಿ ತಿನ್ನುವ ಅನ್ನ.
ಹಾಗಾಗಿ ಅನ್ನ ಉಣ್ಣುವಾಗ, ಕೋಪ ಮಾಡದೇ, ಯಾರ ಬಗ್ಗೆಯೂ ಮನಸ್ಸಿನಲ್ಲಿ ಅಸೂಯೆ ಇರದೇ ಊಟ ಮಾಡಬೇಕು. ಆ ಅನ್ನವನ್ನ ನಿಯತ್ತಾಗಿ ಸಂಪಾದಿಸಿದ ಹಣದಿಂದ ಕೊಂಡುಕೊಂಡದ್ದಾಗಿರಬೇಕು. ಹಾಗಾಗಿ ಗಂಗೆಯಲ್ಲಿ ಸ್ನಾನ ಮಾಡಿದರಷ್ಟೇ ಪಾಪ ನಾಶವಾಗುವುದಿಲ್ಲ. ನಾವು ನಡೆಸುವ ಜೀವನ ಉತ್ತಮವಾಗಿ, ನ್ಯಾಯಯುತವಾಗಿದ್ರೆ ಕೂಡ ಪಾಪ ನಾಶವಾಗುತ್ತದೆ.
========================
ಶಿವ ಭಕ್ತರಿಗೆಲ ಭೃಗು ಋಷಿ ನೀಡಿದ ಶಾಪ ಎಂಥದ್ದು ಗೊತ್ತಾ..?
ಶಿವ ಶಿವನೆಂದರೆ ಭಯವಿಲ್ಲಾ, ಶಿವನಾಮಕೆ ಸಾಟಿ ಬೇರಿಲ್ಲಾ ಅನ್ನುವ ಹಾಗೆ, ಶಿವ ಭಕ್ತರು ಸದಾ ಶಿವನ ಧ್ಯಾನ ಮಾಡುತ್ತಾರೆ. ಆದ್ರೆ ಪುರಾಣ ಕಥೆಗಳ ಪ್ರಕಾರ, ಭೃಗು ಋಷಿ ಶಿವಭಕ್ತರಿಗೆ ಶಾಪ ನೀಡಿದ್ದರಂತೆ. ಹಾಗಾದ್ರೆ ಭೃಗು ಋಷಿ ಶಿವಭಕ್ತರಿಗೆ ನೀಡಿದ ಶಾಪ ಎಂಥದ್ದು..? ಯಾವ ಕಾರಣಕ್ಕೆ ಅವರು ಶಾಪ ನೀಡಿದ್ದರು. ಅವರ ಶಾಪ ತಟ್ಟಿದೆಯಾ..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..
ಒಮ್ಮೆ ದಕ್ಷ ಪ್ರಜಾಪತಿ ಲೋಕ ಕಲ್ಯಾಣಕ್ಕಾಗಿ ಯಜ್ಞ ಮಾಡುತ್ತಿದ್ದ. ಯಜ್ಞಕ್ಕೆ ದೇವಾನುದೇವತೆಗಳನ್ನು ಆಹ್ವಾನಿಸಿದ್ದ. ಈ ವೇಳೆ ಯಜ್ಞಕ್ಕೆ ಶಿವ ಮತ್ತು ಪಾರ್ವತಿ ಕೂಡ ಬಂದಿದ್ದರು. ಆದ್ರೆ ಶಿವ ದಕ್ಷ ರಾಜನಿಗೆ ವಂದಿಸಲಿಲ್ಲ. ಹಾಗಾಗಿ ಕೋಪಗೊಂಡ ದಕ್ಷರಾಜ, ನೀನು ಇನ್ನುಮುಂದೆ ಯಾವ ಯಜ್ಞದಲ್ಲೂ ಭಾಗವಹಿಸುವಂತಿಲ್ಲ ಎಂದು ಶಾಪ ನೀಡಿದ.
ಇದನ್ನು ಕೇಳಿದ ನಂದಿಗೆ ಕೋಪ ಬಂದು, ಯಾರು ಮಹಾದೇವನಿಗೆ ಈ ರೀತಿ ಶಾಪ ನೀಡಿ, ಅವಮಾನಿಸಿದ್ದಾರೋ, ಅವರ ಮುಖ ಮೇಕೆಯ ಮುಖವಾಗಲಿ ಎಂದು ಶಾಪ ನೀಡಿದ. ನಂದಿಯ ಶಾಪ ಕೇಳಿ ಭೃಗು ಋಷಿ ಕೋಪಗೊಂಡರು. ಅವರು ಕೂಡ, ಶಿವನ ಭಕ್ತರಿಗೆ ಶಾಪ ನೀಡಿದರು. ಯಾರು ಶಿವನ ಪರಮ ಭಕ್ತರಾಗಿರುತ್ತಾರೋ, ಅಂಥವರು ಸ್ಮಶಾನದಲ್ಲೇ ವಾಸಿಸಲಿ, ಅವರು ದೇಹಕ್ಕೆ ವಿಭೂತಿ ಬಳಿದುಕೊಂಡೇ ಇರಲಿ, ಹಸಿ ಮಜ್ಜೆ ಮಾಂಸಗಳೇ ಅವರ ಆಹಾರವಾಗಲಿ. ಅವರು ಜಟಾಧಾರಿಗಳಾಗಿರಲಿ. ಅವರು ವೇದ ಶಾಸ್ತ್ರಗಳ ವಿರುದ್ಧವಿರುತ್ತಾರೆಂದು ಶಾಪ ನೀಡುತ್ತಾರೆ.
ಹಾಗಾಗಿಯೇ ಅಘೋರಿಗಳು ಯಾವಾಗಲೂ ಸ್ಮಶಾನದಲ್ಲೇ ವಾಸಿಸೋದು. ಶಿವನಾಮಸ್ಮರಣೆ ಮಾಡುತ್ತ, ದೇಹಕ್ಕೆ ವಿಭೂತಿ ಬಳಿದುಕೊಂಡು, ಮಜ್ಜೆ ಮಾಂಸಗಳನ್ನೇ ತಿನ್ನುತ್ತಾರೆ. ಇವರಿಗೆ ಕುಟುಂಬದ ಜೊತೆ ಸಂಪರ್ಕವಿರುವುದಿಲ್ಲ. ಜಟಾಧಾರಿಗಳಾದ ಇವರು, ಭಂಗಿ ಸೇದುತ್ತ, ಶಿವನನ್ನು ಪೂಜಿಸುತ್ತಾರೆ. ಆದರೆ ಇದನ್ನು ಅವರು ಶಾಪವೆಂದು ಪರಿಗಣಿಸದೇ, ಭಕ್ತಿ ಮಾಡುವ ರೀತಿ ಎಂದು ಜೀವಿಸುತ್ತಾರೆ.
=========================
ಪವನಪುತ್ರ ಹನುಮಾನನಿಗೆ ಆಯುಧವಾಗಿ ಗಧೆ ಸಿಕ್ಕಿದ್ದು ಹೇಗೆ..?
ಪವನಪುತ್ರ ಹನುಮಾನ್ ಹಲವರ ಇಷ್ಟದೇವರು. ಹನುಮನನ್ನು ನೆನೆದರೆ, ಸಕಲ ಕಷ್ಟಗಳನ್ನು ಬಗೆಹರಸುತ್ತಾನೆ. ಶಕ್ತಿ ಕೊಡುತ್ತಾನೆಂಬ ನಂಬಿಕೆ ಇದೆ. ಹಾಗಾಗಿ ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು, ದೊಡ್ಡವರ ತನಕ ಹನುಮನನ್ನು ಎಲ್ಲರೂ ಇಷ್ಟಪಡುತ್ತಾರೆ. ಇನ್ನು ಹನುಮನ ಆಯುಧ ಯಾವುದು ಎಂದರೆ, ಗಧೆ. ಹಾಗಾದ್ರೆ ಹನುಮನಿಗೆ ಈ ಗಧೆ ಹೇಗೆ ಸಿಕ್ಕಿತು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಬಾಲ್ಯದಲ್ಲಿ ಹನುಮಂತ ಸೂರ್ಯನನ್ನೇ ಹಣ್ಣೆಂದು ತಿನ್ನಲು ಹೋದ. ಹನುಮಂತನೇನಾದ್ರೂ ಸೂರ್ಯನನ್ನು ತಿಂದ್ರೆ, ಇಡೀ ವಿಶ್ವವೇ ಕತ್ತಲೆಯಾಗುತ್ತದೆ ಎಂದು ಇಂದ್ರ, ತನ್ನ ವಜ್ರಾಯುಧದಿಂದ ಹನುಮನ ಬೆನ್ನಿಗೆ ಹೊಡೆದ. ಇದರಿಂದ ಹನುಮಂತ ನೆಲಕ್ಕೆ ಬಿದ್ದ. ಆಗ ಕೋಪಗೊಂಡ ವಾಯು, ಇಡೀ ಲೋಕದಲ್ಲಿ ಬೀಸುತ್ತಿದ್ದ ಗಾಳಿಯನ್ನು ತಡೆದ. ಆಗ ಪ್ರಾಣಿ ಪಕ್ಷಿಗಳೆಲ್ಲ ಉಸಿರಾಡಲು ಆಗದೇ, ಒದ್ದಾಡತೊಡಗಿದವು.
ಆಗ ದೇವತೆಗಳು ವಾಯುನಲ್ಲಿ ಬಂದು, ದಯವಿಟ್ಟು ಗಾಳಿ ಬೀಸುವಂತೆ ಮಾಡಿ ಎಂದು ಬೇಡಿಕೊಂಡರು. ಆಗ ವಾಯು, ಹಾಗಾದ್ರೆ ನನ್ನ ಪುತ್ರನನ್ನು ಮೊದಲಿನಂತೆ ಮಾಡಿ ಎಂದ. ಆಗ ನಾರದರು ಪವಿತ್ರ ಜಲದಿಂದ ಹನುಮಂತ ಆರೋಗ್ಯನಾಗುವಂತೆ ಮಾಡಿದರು. ಇದಾದ ಬಳಿಕ ದೇವತೆಗಳು ಹನುಮನಿಗೆ ಹಲವು ಆಯುಧಗಳನ್ನು ನೀಡಿದರು. ಅದರಲ್ಲಿ ಕುಬೇರನು ಹನುಮನಿಗೆ ಗಧೆಯನ್ನು ನೀಡಿದ.
ಅಲ್ಲದೇ, ಈ ಗಧೆಯನ್ನು ಹಿಡಿದು ಯಾವ ಯುದ್ಧಕ್ಕೆ ಹೋದರೂ, ಆ ಯುದ್ಧದಲ್ಲಿ ಹನುಮಂತ ಸೋಲಲು ಸಾಧ್ಯವೇ ಇಲ್ಲ. ಬರೀ ಗೆಲುವೇ ಸಾಧಿಸುತ್ತಾನೆಂದು ವರವೂ ನೀಡಿದ ಕುಬೇರ. ಅಲ್ಲದೇ, ಹನುಮಂತ ಹೇಗೆ ತನ್ನ ದೇಹದ ಗಾತ್ರವನ್ನು ಸಣ್ಣದು, ದೊಡ್ಡದು ಮಾಡಬಲ್ಲನೋ, ಅದೇ ರೀತಿ ಗಧೆಯನ್ನು ಕೂಡ ತನ್ನ ದೇಹದ ಗಾತ್ರಕ್ಕೆ ತಕ್ಕಂತೆ, ಬೆಳೆಸಬಹುದಾಗಿತ್ತು.
===============
ಗಣೇಶನನ್ನು ಏಕದಂತ ಎಂದು ಏಕೆ ಕರೆಯುತ್ತಾರೆ..? ಹಲ್ಲು ತುಂಡಾಗಲು ಕಾರಣವೇನು..?
ಯಾವುದೇ ಕಾರ್ಯಕ್ರಮವಿರಲಿ, ಮೊದಲು ವಿಘ್ನ ನಿವಾರಕನನ್ನು ನೆನೆದೇ, ನಂತರ ಉಳಿದವರ ಪೂಜೆ ಮಾಡಲಾಗತ್ತೆ. ಇಂಥ ಮಹಾ ಗಣಪತಿಯ ಒಂದು ಹಲ್ಲು ಅರ್ಧ ತುಂಡಾಗಿತ್ತು. ಹಾಗಾಗಿಯೇ ಅವನನ್ನು ಏಕದಂತ ಎಂದು ಕರೆಯಲಾಗುತ್ತಿತ್ತು. ಹಾಗಾದ್ರೆ ಯಾಕೆ ಗಣೇಶನನ್ನು ಏಕದಂತ ಎಂದು ಕರೆಯಲಾಗತ್ತೆ..? ಅರ್ಧ ಹಲ್ಲು ಮುರಿಯಲು ಕಾರಣವೇನು..?
ಒಮ್ಮೆ ಶಿವ ಧ್ಯಾನ ಮಾಡುವಾಗ, ಅವನ ಧ್ಯಾನವನ್ನು ಯಾರೂ ಭಂಗ ಮಾಡಬಾರದು ಎಂದು ಗಣೇಶನನ್ನು ಕರೆಯುತ್ತಾನೆ. ಕರೆದು, ಪುತ್ರ ಗಣೇಶ, ನಾನು ಕೊಂಚ ಹೊತ್ತು ಧ್ಯಾನ ಮಾಡಬೇಕೆಂದಿದ್ದೇನೆ. ನನ್ನ ಧ್ಯಾನವನ್ನು ಯಾರೂ ಭಂಗ ಮಾಡದಂತೆ ನೀನು ತಡೆಯಬೇಕು. ನನ್ನನ್ನು ಯಾರೇ ಭೇಟಿಯಾಗಲು ಬಂದರೂ, ಅವರನ್ನು ಬಾಗಿಲಲ್ಲೇ ಹಿಡಿದಿಡಬೇಕು. ಅವರು ನನ್ನ ಧ್ಯಾನ ಮುಗಿದ ಬಳಿಕವೇ, ಭೇಟಿಯಾಗಬೇಕು ವಿನಃ ನನ್ನ ಧ್ಯಾನಕ್ಕೆ ಅವರ್ಯಾರೂ ಭಂಗ ತರಬಾರದು. ಹಾಗೆ ಮಾಡದಂತೆ ನೀನು ಅವರನ್ನು ತಡೆಯಬೇಕು ಎಂದು ಆದೇಶಿಸುತ್ತಾರೆ.
ಶಿವ ಧ್ಯಾನದಲ್ಲಿ ಮಗ್ನನಾದ ಮೇಲೆ, ಗಣೇಶ ಬಾಗಿಲ ಬಳಿ ನಿಂತು, ಯಾರೂ ಧ್ಯಾನ ಭಂಗ ಮಾಡದಂತೆ ಕಾಯುತ್ತಿರುತ್ತಾನೆ. ಅಷ್ಟೊತ್ತಿಗೆ, ಅಲ್ಲಿಗೆ ಪರಶುರಾಮನ ಆಗಮನವಾಗುತ್ತದೆ. ಶಿವನನ್ನು ಭೇಟಿಯಾಗಲು, ಕೈಲಾಸಕ್ಕೆ ಧಾವಿಸಿ ಬರುತ್ತಿದ್ದ ಪರಶುರಾಮನನ್ನು ಗಣೇಶ ತಡೆ ಹಿಡಿಯುತ್ತಾನೆ. ಆಗ ಕೋಪಗೊಂಡ ಪರಶುರಾಮ ಯಾಕೆ ನನ್ನನ್ನು ತಡೆಯುತ್ತಿರುವೆ ಎಂದು ಕೇಳುತ್ತಾನೆ.
ಆಗ ಗಣೇಶ, ನಾನು ಶಿವನ ಪುತ್ರ ಗಣೇಶ. ಅವರು ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಅವರ ಧ್ಯಾನವನ್ನು ಯಾರೂ ಭಂಗ ಮಾಡದಂತೆ ನೋಡಿಕೋ ಎಂದು ನನ್ನಲ್ಲಿ ಹೇಳಿದ್ದಾರೆ. ಹಾಗಾಗಿ ನಾನು ಇಲ್ಲಿ ಬಾಗಿಲು ಕಾಯುತ್ತಿರುವೆ. ನಿಮ್ಮನ್ನು ಒಳಗೆ ಬಿಡಲಾಗುವುದಿಲ್ಲ ಎಂದು ಹೇಳುತ್ತಾನೆ. ಅಲ್ಲಿ ಪರಶುರಾಮ ಮತ್ತು ಗಣೇಶನ ಮಧ್ಯೆ ಯುದ್ಧವಾಗುತ್ತದೆ. ಪರಶುರಾಮ ತನ್ನ ಪರಶುವನ್ನು ಗಣೇಶನ ಬಳಿ ಎಸೆಯುತ್ತಾರೆ. ಗಣೇಶನ ಒಂದು ಹಲ್ಲು ಮುರಿಯುತ್ತದೆ.
ಗಣೇಶ ಹಲ್ಲು ಮುರಿದುಕೊಂಡು ಒದ್ದಾಡುವುದನ್ನು ನೋಡಿದ ಪಾರ್ವತಿಗೆ ಕೋಪ ಬರುತ್ತದೆ. ಆಕೆ ಉಗಹ್ರಸ್ವರೂಪಿಯಾಗುತ್ತಾಳೆ. ಆಗ ಪ್ರತ್ಯಕ್ಷನಾದ ಶಿವ, ಪರಶುರಾಮನ ಅವತಾರಿಯಾದ ಶ್ರೀವಿಷ್ಣು, ಗಣೇಶನ ಹಲ್ಲನ್ನು ಕಡಿದು, ಅವನ ಸಾಮರ್ಥ್ಯ, ಧೈರ್ಯವನ್ನ ಲೋಕಕ್ಕೆ ತೋರಿಸಿದ್ದಾರೆ. ಇಂದಿನಿಂದ ಗಣೇಶ ಏಕದಂತನೆಂದು ಕರೆಯಲ್ಪಡುವನು ಎಂದು ಹೇಳುತ್ತಾರೆ. ಹೀಗೆ ಗಣೇಶನಿಗೆ ಏಕದಂತ ಎಂಬ ಹೆಸರು ಬರುತ್ತದೆ.
===============
ಗಣೇಶನ ಪೂಜೆಯಲ್ಲಿ ತುಳಸಿ ಬಳಸದಿರಲು ಕಾರಣವೇನು..?
ಗಣೇಶನಿಗೆ ನೀವು ಲಾಡು, ಪಂಚಕಜ್ಜಾಯ, ಕಡುಬು ಹೀಗೆ ಹಲವು ನೈವೇದ್ಯ ಮಾಡುವುದನ್ನು ನೋಡಿರುತ್ತೀರಿ. ಅಲ್ಲದೇ, ಹಲವು ಹೂವುಗಳಿಂದ ಅಲಂಕಾರ ಮಾಡಿರುವುದನ್ನೂ ನೋಡಿರುತ್ತೀರಿ. ಗರಿಕೆ ಹಾಕಿ ಆರಾಧಿಸುವುದನ್ನೂ ನೀವು ನೋಡಿರುತ್ತೀರಿ. ಆದರೆ ಗಣೇಶನಿಗೆ ಎಂದಿಗೂ ಯಾರೂ ತುಳಸಿ ಹಾಕಿದ್ದನ್ನು ನೀವು ನೋಡಿರುವುದಿಲ್ಲ. ಹಾಗಾದ್ರೆ ಗಣೇಶನಿಗೆ ಏಕೆ ತುಳಸಿ ಬಳಸುವುದಿಲ್ಲ ಅಂತಾ ತಿಳಿಯೋಣ ಬನ್ನಿ..
ಯಾವುದೇ ಪೂಜೆ ಮಾಡುವಾಗ, ಶುಭಕಾರ್ಯ ಮಾಡುವಾಗ ಪ್ರಪ್ರಥಮವಾಗಿ ನಾವು ಗಣೇಶನಿಗೆ ಪೂಜೆ ಸಲ್ಲಿಸುತ್ತೇವೆ. ಏಕೆಂದರೆ ವಿಘ್ನನಿವಾರಕನಿಗೆ ಪೂಜೆ ಮಾಡಿದರೆ, ಆ ಕೆಲಸದಲ್ಲಿ ಅಡೆತಡೆ ಬರುವುದಿಲ್ಲವೆಂಬ ನಂಬಿಕೆ ಇದೆ. ಹಾಗಾಗಿಯೇ ಗಣೇಶನನ್ನು ಪ್ರಥಮ ಪೂಜಿತನೆಂದೇ ಕರೆಯಲಾಗುತ್ತದೆ.
ಇನ್ನು ನಾವು ತುಳಸಿಯನ್ನು ಏಕೆ ಗಣೇಶನ ಪೂಜೆಗೆ ಬಳಸೋದಿಲ್ಲ ಎನ್ನುವುದಕ್ಕೆ 1 ಕಥೆಯೇ ಇದೆ. ಅದೇನೆಂದರೆ, ತುಳಸಿ ಮತ್ತು ಗಣೇಶನ ಜಗಳದ ಕಥೆ.
ಧರ್ಮರಾಜನ ಮಗಳಾಗಿದ್ದ ತುಳಸಿ ಅಂದರೆ ವೃಂದಾದೇವಿ ಗಂಗಾನದಿ ತೀರಕ್ಕೆ ಬರುತ್ತಾಳೆ. ಅಲ್ಲಿ ಗಣೇಶ ತಪಸ್ಸು ಮಾಡುತ್ತಿರುತ್ತಾನೆ. ವಿಷ್ಣುವಿನ ಪೂಜೆಗೆ ಬಂದಿದ್ದ ವೃಂದಾ ಗಣೇಶನಿಗೆ ಮನಸೋಳುತ್ತಾಳೆ. ಮದುವೆಯಾದರೆ ಇವನನ್ನೇ ಆಗಬೇಕು ಎಂದು ತಪಸ್ಸು ಮಾಡುತ್ತಿದ್ದ ಗಣೇಶನ ಮುಖಕ್ಕೆ ನೀರು ಚುಮಕಿಸಿ, ಗಣೇಶನ ತಪಸ್ಸು ಭಂಗ ಮಾಡುತ್ತಾಳೆ.
ಅಲ್ಲದೇ ತನ್ನ ಪರಿಚಯ ಮಾಡಿ, ತನನ್ನು ವಿವಾಹವಾಗುವಂತೆ ವೃಂದಾ ಗಣೇಶನಲ್ಲಿ ಕೇಳಿಕ“ಳ್ಳುತ್ತಾಳೆ. ಆದರೆ ತಾನು ಬ್ರಹ್ಮಚಾರಿಯಾಗಿರಬೇಕು ಎಂಬ ಕಾರಣಕ್ಕೆ, ನಾನು ನಿನ್ನನ್ನು ಮದುವೆಯಾಗಲಾರೆ ಎಂದು ಗಣೇಶ ತುಳಸಿಯನ್ನು ವಿವಾಹವಾಗಲು ನಿರಾಕರಿಸುತ್ತಾನೆ.
ಇದರಿಂದ ವೃಂದಾಳಿಗೆ ಕೋಪ ಬರುತ್ತದೆ. ಆಗ ಗಣೇಶನನ್ನು ಕುರಿತು ನಿನಗೆ 2 ಮದುವೆಯಾಗಲಿ ಎಂದು ವೃಂದಾ ಶಾಪ ನೀಡುತ್ತಾಳೆ. ಆಗ ನೀನು ನಾನು ಬ್ರಹ್ಮಚಾರಿ ಎಂದು ಹೇಳಿದರೂ ಕೇಳದೇ, 2 ಮದುವೆಯಾಗಲಿ ಎಂದು ಶಾಪ ನೀಡಿರುವೆ. ಹಾಗಾಗಿ ನಿನ್ನ ಮದುವೆ ರಾಕ್ಷಸನ ಜತೆಯಾಗಲಿ ಎಂದು ಗಣೇಶ ಮರುಶಾಪ ನೀಡುತ್ತಾನೆ.
ಆಗ ವಂದಾಳಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಕ್ಷಮೆ ಕೇಳುತ್ತಾಳೆ. ಆಗ ಗಣೇಶ ನೀನು ಮುಂದಿನ ಜನ್ಮದಲ್ಲಿ ತುಳಸಿಯಾಗಿ, ಪವಿತ್ರ ಗಿಡವಾಗುತ್ತಿಯಾ. ಭೂಲೋಕದಲ್ಲಿ ನಿನ್ನನ್ನು ಪೂಜಿಸಲಾಗುತ್ತದೆ ಎನ್ನುತ್ತಾರೆ. ಅಲ್ಲದೇ ಶ್ರೀಕೃಷ್ಣ ಮತ್ತು ವಿಷ್ಣುಪೂಜೆಯಲ್ಲಿ ನಿನಗೆ ಪ್ರಥಮ ಆದ್ಯತೆ ಇರುತ್ತದೆ. ಆದರೆ ನನ್ನ ಪೂಜೆಯೃಲ್ಲಿ ನೀನು ನಿಷಿದ್ಧವೆನ್ನುತ್ತಾರೆ. ಹೀಗಾಗಿಯೇ ಗಣೇಶನ ಪೂಜೆಯಲ್ಲಿ ತುಳಸಿ ಬಳಸುವುದಿಲ್ಲ.
=======================
ಶ್ರೀಕೃಷ್ಣನ ಮುಕುಟದ ಮೇಲೆ ನವಿಲುಗರಿ ಇರಲು ಕಾರಣವೇನು..?
ನೀವು ಹಿಂದೂ ದೇವರುಗಳಲ್ಲಿ ಯಾವ ದೇವರು ಸುಂದರನೆಂದು ನೋಡಿದಾಗ, ನಿಮಗೆ ಅಲಂಕಾರ ಪ್ರಿಯನಾದ ಕೃಷ್ಣನೇ ನೆನಪಿಗೆ ಬರಬಹುದು. ಆಭರಣ ಧರಿಸಿ, ಪಿತಾಂಬರ, ಹಾರ, ಕೊಳಲು ಇವೆಲ್ಲವೂ ಶ್ರೀಕೃಷ್ಣ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದರೆ ಅವನ ಅಂದವನ್ನು ದುಪ್ಪಟ್ಟು ಮಾಡುವ ವಸ್ತು ಅಂದ್ರೆ ಅದು ನವಿಲುಗರಿ. ಹಾಗಾದ್ರೆ ಶ್ರೀಕೃಷ್ಣನ ಮುಕುಟದ ಮೇಲೆ ನವಿಲುಗರಿ ಇರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಶ್ರೀಕೃಷ್ಣ ತನ್ನ ಮುಕುಟದಲ್ಲಿ ನವಿಲುಗರಿ ಧರಿಸುವುದಕ್ಕೂ, ಶ್ರೀರಾಮನ ಅವತಾರಕ್ಕೂ ಸಂಬಂಧವಿದೆ. ತ್ರೇತಾಯುಗದಲ್ಲಿ ನವಿಲಿಗೆ ನೀಡಿದ ಮಾತಿನ ಪ್ರಕಾರ, ದ್ವಾಪರ ಯುಗದಲ್ಲಿ ಶ್ರೀರಾಮ ಶ್ರೀಕೃಷ್ಣನಾಗಿ ಜನಿಸಿ, ತಮ್ಮ ಮುಕುಟಕ್ಕೆ ನವಿಲುಗರಿ ಧರಿಸುತ್ತಾರೆ.
ವನವಾಸ ಸಂದರ್ಭದಲ್ಲಿ ರಾಮ, ಲಕ್ಷ್ಮಣ, ಸೀತೆ ನಡೆದು ಬರುತ್ತಿದ್ದಾಗ, ಸೀತೆಗೆ ಬಾಯಾರಿಕೆಯಾಗುತ್ತದೆ. ಆದರೆ ಸಮೀಪದಲ್ಲಿ ಎಲ್ಲಿಯೂ ನೀರು ಸಿಗುವುದಿಲ್ಲ. ಆಗ ಶ್ರೀರಾಮ, ಪ್ರಕೃತಿ ಮಾತೆಯನ್ನು ಕುರಿತು, ನದಿ ಹರಿಯುವ ಜಾಗವನ್ನು ತೋರಿಸು ಎಂದು ಮನವಿ ಮಾಡುತ್ತಾರೆ.
ಶ್ರೀರಾಮನ ಮನವಿ ಕೇಳಿ, ಇಂಥ ಪುಣ್ಯ ಕಾರ್ಯ ಮಾಡುವ ಅವಕಾಶ ನನಗೆ ಸಿಕ್ಕಿತಲ್ಲವೆಂದು ನವಿಲ“ಂದು ಬಂದು, ನಾನು ನನ್ನ ಗರಿಯನ್ನು ಚೆಲ್ಲುತ್ತ ನಡೆಯುತ್ತೇನೆ. ಅದನ್ನು ಕಂಡು ನೀವೂ ನನ್ನನ್ನು ಹಿಂಬಾಲಿಸಿ, ನಾನು ನಿಮ್ಮನ್ನು ನದಿಯೆಡೆಗೆ ಕರೆದ`ಯ್ಯುತ್ತೇನೆ ಎಂದು ನವಿಲು ಹೇಳುತ್ತದೆ.
ನವಿಲು ಹೇಳಿದಂತೆಯೇ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆ ನವಿಲನ್ನು ಹಿಂಬಾಲಿಸುತ್ತಾರೆ. ನವಿಲು ಹಾರುವ ಕಾರಣ, ಇವರೆಲ್ಲ ಎಲ್ಲಿ ದಾರಿ ತಪ್ಪುತ್ತಾರೋ ಎಂದು ನವಿಲು ತನ್ನ ಗರಿಯನ್ನು ಬಿಚ್ಚಿ, ನೆಲ್ಲಕ್ಕೆ ಹಾಕುತ್ತ ಹಾರುತ್ತದೆ. ನವಿಲು ಗಿ ತಾನಾಗಿಯೇ ಬಿಚ್ಚಿದರೆ ಏನಾಗುವುದಿಲ್ಲ. ಆದರೆ ತಾನಾಗಿಯೇ ನವಿಲು ಗರಿಯನ್ನು ಬಿಚ್ಚಿದ್ದರಿಂದ ಗರಿಯೆಲ್ಲ ಉದುರಿ, ನವಿಲಿನ ಪ್ರಾಣ ಪಕ್ಷಿ ಹಾರುವ ಸಮಯ ಬರುತ್ತದೆ. ಅಷ್ಟರಲ್ಲೇ ನದಿಯೂ ಸಮೀಪಿಸುತ್ತದೆ. ಸೀತೆ ನೀರು ಕುಡಿದು ದಾಹ ತಣಿಸಿಕ“ಳ್ಳುತ್ತಾಳೆ.
ಬಳಿಕ ನವಿಲಿನ ಪರಿಸ್ಥಿತಿ ಕಂಡು ಎಲ್ಲರೂ ಮರುಕಪಡುತ್ತಾರೆ. ಆಗ ಶ್ರೀರಾಮ ನವಿಲನ್ನು ಕುರಿತು, ಸೀತೆಯ ದಾಹ ತಣಿಸಲು ನೀನು ನಿನ್ನ ಗರಿಯನ್ನೇ ತೆಗೆದು ಜೀವತ್ಯಾಗ ಮಾಡಿರುವೆ. ನಿನ್ನ ಈ ಋಣವನ್ನು ನಾನು ಮುಂದಿನ ಅವತಾರದಲ್ಲಿ ತೀರಿಸುತ್ತೇನೆ ಎನ್ನುತ್ತಾರೆ. ಹಾಗಾಗಿಯೇ ಶ್ರೀಕೃಷ್ಣ ನವಿಲಿನ ಋಣ ತೀರಿಸಲು, ದ್ವಾಪರ ಯುಗದಲ್ಲಿ ಮುಕುಟದ ಮೇಲೆ ನವಿಲು ಗರಿಯನ್ನಿರಿಸಿಕ“ಳ್ಳುತ್ತಾರೆ.
Discussion about this post