Spiritual News: ಸಜ್ಜನರ ಸಂಗ ಹೆಜ್ಜೇನು ಸವಿದಂತೆ, ದುರ್ಜನರ ಸಂಗ ಹೆಜ್ಜೇನು ಕಚ್ಚಿದಂತೆ ಅಂತಾ ಹಿರಿಯರು ಹೇಳಿದ್ದನ್ನ ನಾವು ಕೇಳಿದ್ದೇವೆ. ಇದೇ ರೀತಿ ಚಾಣಕ್ಯರು ಕೂಡಾ ಎಂಥವರ ಸಂಗ ಮಾಡಿದರೆ ಮೃತ್ಯುವಿಗೆ ಆಹ್ವಾನ ಮಾಡಿದಂತೆ ಎಂಬ ಬಗ್ಗೆ ಚಾಣಕ್ಯ ನೀತಿಯಲ್ಲಿ (Chanakya neeti) ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ.
ಚಾಣಕ್ಯರ ಪ್ರಕಾರ ದುಷ್ಟಳಾದ ಪತ್ನಿ, ದುರ್ಗುಣವಿರುವ ಸ್ನೇಹಿತ, ಎದುರುತ್ತರ ಕೊಡುವ ಸೇವಕ, ದಡ್ಡನಾದ ಶಿಷ್ಯ ಮತ್ತು ಸರ್ಪಗಳು ಓಡಾಡುವ ಮನೆಯಲ್ಲಿ ವಾಸಿಸುವವನು ಮೃತ್ಯುವಿಗೆ ಆಮಂತ್ರಣ ನೀಡಿದಂತೆ ಎಂದು ಚಾಣಕ್ಯರು ಹೇಳುತ್ತಾರೆ. ಈ ಮಾತನ್ನು ವಿಸ್ತರಿಸಿ ಹೇಳುವುದಾದರೆ, ದುಷ್ಟ ಬುದ್ಧಿ ಹೊಂದಿದ ಹೆಣ್ಣು ಎಂದಿಗೂ ತನ್ನ ಪತಿಯನ್ನ, ಅವರ ಕುಟುಂಬಸ್ಥರನ್ನ ಉತ್ತಮವಾಗಿ ನೋಡಿಕೊಳ್ಳುವುದಿಲ್ಲ. ಪತ್ನಿಯ ದುರ್ಬುದ್ಧಿಯಿಂದ ಪತಿ ಅವಮಾನ ಅನುಭವಿಸಬೇಕಾಗುತ್ತದೆ. ದುಃಖದಲ್ಲಿಯೇ ಜೀವನ ಕಳೆಯಬೇಕಾಗುತ್ತದೆ. ಮನೆಯ ವಾತಾವರಣ ಅಕ್ಷರಶಃ ನರಕಸದೃಷವಾಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.
ಇನ್ನು ದುರ್ಗುಣವಿರುವ ಮನುಷ್ಯನೊಂದಿಗೆ ಗೆಳೆತನ ಮಾಡಿದರೆ, ನಮಗೂ ದುರ್ಗುಣ ಅಂಟಿಕೊಳ್ಳುತ್ತದೆ. ಅಡ್ಡದಾರಿ ಹಿಡಿಯಲು ಅವನು ಪ್ರೇರೇಪಿಸುತ್ತಾನೆ. ದುಷ್ಚಟಗಳನ್ನು ಹಿಡಿಸಿಬಿಡುತ್ತಾನೆ. ಹೀಗೆ ದುಷ್ಚಟಗಳ ದಾಸನಾದ ಮನುಷ್ಯ ಮೃತ್ಯುವಿಗೆ ಆಹ್ವಾನ ನೀಡುತ್ತಾನೆಂದು ಚಾಣಕ್ಯರು ಹೇಳುತ್ತಾರೆ.
ಇನ್ನು ಮೂರನೇಯದಾಗಿ ಎದುರುತ್ತರ ಕೊಡುವ ಸೇವಕ ಮತ್ತು ದಡ್ಡನಾದ ಶಿಷ್ಯನಿಂದ ದೂರವಿರಬೇಕೆಂದು ಚಾಣಕ್ಯರು ಹೇಳುತ್ತಾರೆ. ಯಾಕಂದ್ರೆ ಸೇವಕನಾದವನು ನಮ್ಮ ಮಾತು ಕೇಳಬೇಕೇ ವಿನಃ, ನಾವು ಸೇವಕನ ಮಾತು ಕೇಳುವುದಲ್ಲ. ನಮ್ಮ ಆಜ್ಞೆಗೆಲ್ಲ ಎದುರುತ್ತರ ನೀಡುವ ಸೇವಕ ಕೆಲಸಕ್ಕೆ ಅನರ್ಹನಾಗಿರುತ್ತಾನೆ. ಮತ್ತು ಇಂಥ ಸೇವಕನನ್ನು ಕೆಲಸಕ್ಕಿರಿಸಿಕೊಂಡರೆ, ಒಡೆಯ ಸ್ಥಿತಿ ಅದೋಗತಿಯಾಗುತ್ತದೆ. ಇದೇ ರೀತಿ ಓರ್ವ ಪಂಡಿತ ಓರ್ವ ಉತ್ತಮ ಶಿಷ್ಯನಿಗೆ ತನ್ನ ವಿದ್ಯೆಯನ್ನೆಲ್ಲ ಧಾರೆ ಎರೆಯಬೇಕೇ ಹೊರತು, ಎಷ್ಟು ಕಲಿಸಿದರೂ ಕಲಿಯದ ದಡ್ಡನಿಗಲ್ಲ. ವಿದ್ಯೆ ಕಲಿಯಲು ಇಚ್ಛಿಸದ, ಶತಮೂರ್ಖರಿಗೆ ವಿದ್ಯೆ ಕಲಿಸಲು ಹೋದರೆ, ಪಂಡಿತನ ಸಮಯ ವ್ಯರ್ಥವಾಗುತ್ತದೆ.
ಇನ್ನು ಕೊನೆಯದಾಗಿ ಸರ್ಪಗಳು ಓಡಾಡುವ ಮನೆಯಲ್ಲಿ ಯಾರು ಓಡಾಡುತ್ತಾರೋ, ಅವರಿಗೆ ಸಾವು ಕಟ್ಟಿಟ್ಟ ಬುತ್ತಿ. ಇದರ ಅರ್ಥ, ಈ ಮೇಲಿನ ಜನರ ಸಹವಾಸ ಮಾಡುವುದು ವಿಷ ಸರ್ಪಗಳ ಸಹವಾಸ ಮಾಡಿದಂತೆ. ಇಂಥವರ ಸಹವಾಸದಿಂದ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದಂತೆ ಆಗಿ, ಸಾವೇ ಮೇಲೂ ಎನ್ನುವಂತಾಗುತ್ತದೆ ಜೀವನ ಎನ್ನುತ್ತಾರೆ ಚಾಣಕ್ಯರು.
Chanakya Neeti: ಇಂಥ ಜಾಗದಲ್ಲಿ ಯಾವುದೇ ಕಾರಣಕ್ಕೂ ಉಳಿದುಕೊಳ್ಳಬಾರದಂತೆ
ಸಾಮಾನ್ಯ ಯುವಕನನ್ನು ಮೌರ್ಯ ಸಾಮ್ರಾಜ್ಯದ ಚಕ್ರವರ್ತಿಯನ್ನಾಗಿ ಮಾಡಿದ ಚಾಣಕ್ಯರ ಚಾಣಾಕ್ಷತನದ ರೋಚಕ ಕಥೆ
ಚಾಣಕ್ಯರ ಜಾತಕ ನೋಡಿ ಜ್ಯೋತಿಷಿಗಳು ಹೇಳಿದ್ದೇನು? ಹಲ್ಲು ಮುರಿದುಕೊಂಡು ಭವಿಷ್ಯ ಬದಲಿಸಿಕೊಂಡ ಕೌಟಿಲ್ಯ
Discussion about this post