ಚಿಕ್ಕಮಗಳೂರು: ಮಲೆನಾಡು, ಬಯಲುಸೀಮೆ ಭಾಗದಿಂದ ಕರಾವಳಿಯ ನಗರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾದ ಚಾರ್ಮಾಡಿ ಘಾಟಿನಲ್ಲಿ ರಾತ್ರಿ ವೇಳೆ ಸರ್ಕಾರಿ ಸಾರಿಗೆ ಬಸುಗಳು ಸಂಚಾರ ನಡೆಸಲು ಅನುಮತಿ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡದ ಅನೇಕ ದೇವಾಲಯಕ್ಕೆ ಬರುವಂತಹ ಉತ್ತರ ಕರ್ನಾಟಕ ಭಕ್ತಾದಿಗಳು ರೈಲುಗಳ ಮೂಲಕ ರಾತ್ರಿ ವೇಳೆ ಕಡೂರು ಪಟ್ಟಣಕ್ಕೆ ಬಂದು ಅಲ್ಲಿಂದ ಸಾರಿಗೆ ಬಸ್ ಮುಖಾಂತರ ಧರ್ಮಸ್ಥಳದ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಕಟೀಲು, ಮಂಗಳೂರು ಸೇರಿದಂತೆ ಮುಂತಾದ ಸ್ಥಳಗಳಿಗೆ ಚಾರ್ಮಾಡಿ ರಸ್ತೆ ಮೂಲಕ ರಾತ್ರಿಯ ವೇಳೆ ಸಂಚಾರ ಮಾಡುತ್ತಿದ್ದರು.
ಜೊತೆಗೆ ಚಿತ್ರದುರ್ಗ, ಕಡೂರು, ಚಿಕ್ಕಮಗಳೂರು, ಮೂಡಿಗೆರೆ ಭಾಗದ ಜನರು ವೈದ್ಯಕೀಯ ಚಿಕಿತ್ಸೆ, ಉದ್ಯೋಗದಲ್ಲಿರುವ ಅನೇಕರು ಮಂಗಳೂರು, ಉಡುಪಿಗೆ ರಾತ್ರಿಯಲ್ಲಿ ಬಸ್ ಮೂಲಕ ಸಂಚಾರ ನಡೆಸುತ್ತರೆ
ಆದರೆ ಜಿಲ್ಲಾಡಳಿತವು ಕೆಲ ತಿಂಗಳ ಹಿಂದೆ ಚಾರ್ಮಾಡಿ ಘಾಟ್ ಭಾಗದಲ್ಲಿ ಸುರಿಯುತ್ತಿದ ಭಾರೀ ಮಳೆ ವ್ಯಾಪಕವಾದ ಮಂಜಿನ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ರಾತ್ರಿ ಏಳು ಗಂಟೆಯಿಂದ ಮುಂಜಾನೆ ಐದು ಗಂಟೆಯವರೆಗೆ ತುರ್ತು ವಾಹನಗಳ ಹೊರತುಪಡಿಸಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಯಿತು ನಂತರ ದಿನಗಳಲ್ಲಿ ಜಿಲ್ಲಾಧಿಕಾರಿಗಳು ರಾಜಕೀಯ ವ್ಯಕ್ತಿಗಳು ಮನವಿಗೆ ಸ್ಪಂದಿಸಿ ರಾತ್ರಿಯ ವೇಳೆ ಸಣ್ಣ ವಾಹನಗಳ ಓಡಾಟಕ್ಕೆ ಅನುಮತಿ ನೀಡಿದರು.
ಈಗ ಚಾರ್ಮಾಡಿ ಭಾಗದಲ್ಲಿ ಮಳೆ ಹಾಗೂ ಅತಿಯಾದ ಮಂಜಿನ ಸಮಸ್ಯೆ ಇಲ್ಲವಾಗಿದೆ ಅದರು ಜಿಲ್ಲಾಡಳಿತ ಸಾರಿಗೆ ಬಸುಗಳು ರಾತ್ರಿ ವೇಳೆಯಲ್ಲಿ ಸಂಚರಿಸಲು ಅನುಮತಿ ನೀಡಲು ಮರೆತು ಹೋದ್ದಂತೆ ಕಾಣ್ಣುತ್ತಿದೆ.
ಜಿಲ್ಲಾಡಳಿತದ ಈ ನಡೆಯಿಂದ ದಕ್ಷಿಣ ಕನ್ನಡ ಕಡೆ ಹೋಗುವ ಸಾವಿರಾರು ಪ್ರಯಾಣಿಕರ, ಭಕ್ತಾದಿಗಳು ಕಡೂರು, ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲೆ ರಾತ್ರಿ ಕಳೆಯುತ್ತಾರೆ ಇಲ್ಲವಾದರೆ ದುಬಾರಿ ಹಣ ನೀಡಿ ಬಾಡಿಗೆ ವಾಹನಗಳ ಮೂಲಕ ತೆರಳುತ್ತಾರೆ.
ಈ ಬಗ್ಗೆ ಜಿಲ್ಲಾಡಳಿತಕ್ಕೆ ಕೆ.ಎಸ್.ಆರ್.ಟಿ.ಅಧಿಕಾರಿಗಳು ಮನವರಿಕೆ ಮಾಡಿದರು ಅನುಮತಿ ನೀಡಿಲ್ಲ ಈ ಬಗ್ಗೆ ಜಿಲ್ಲಾಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಬಸ್ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ
Demand for movement of basus
Discussion about this post