ಜೊಹಾನ್ಸ್‌ಬರ್ಗ್: ಒಮಿಕ್ರಾನ್ (ಕೊರೊನಾ ವೈರಸ್‌ನ ರೂಪಾಂತರ ತಳಿ) ಭೀತಿಯ ಮಧ್ಯೆಯೂ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ ಎಂದು ಆಫ್ರಿಕಾ ಕ್ರಿಕೆಟ್ ಸಂಸ್ಥೆ (ಸಿಎಸ್‌ಎ) ಶನಿವಾರ ದೃಢಪಡಿಸಿದೆ.
ಈ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜತೆ ಮಾತುಕತೆ ನಡೆಸಿರುವುದಾಗಿಯೂ ಅದು ಹೇಳಿದೆ.
ಭಾರತ ತಂಡವು ಒಂದು ವಾರ ತಡವಾಗಿ ಬರಲಿದೆ. ಮೂರು ಟೆಸ್ಟ್ ಹಾಗೂ ಮೂರು ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡುವುದು ನಿಶ್ಚಿತ. ಟ್ವೆಂಟಿ–20 ಪಂದ್ಯಗಳನ್ನು ಮುಂದೂಡಲಾಗಿದೆ. ಟ್ವೆಂಟಿ–20 ಸರಣಿಯ ವೇಳಾಪಟ್ಟಿಯನ್ನು ಜನವರಿಯಲ್ಲಿ ಸಿದ್ಧಪಡಿಸಲಾಗುತ್ತದೆ ಎಂದು ಸಿಎಸ್‌ಎ ತಿಳಿಸಿದೆ.
ಈ ಹಿಂದಿನ ವೇಳಾಪಟ್ಟಿಯಂತೆ ಭಾರತ–ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಡಿಸೆಂಬರ್ 17ರಿಂದ ಆರಂಭವಾಗಬೇಕಿತ್ತು. ಆದರೆ ಒಮಿಕ್ರಾನ್ ರೂಪಾಂತರ ತಳಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿತ್ತು. ಜತೆಗೆ ಟೀಮ್ ಇಂಡಿಯಾ ಪ್ರವಾಸ ಮುಂದೂಡಿಕೆಗೆ ಕಾರಣವಾಗಿದೆ.
ಇದನ್ನೂ ಓದಿ: 10 wickets: 10 ವಿಕೆಟ್ ಪಡೆದ ಕಿವೀಸ್ ಸ್ಪಿನ್ನರ್ ಎಜಾಜ್ ಪಟೇಲ್

























Discussion about this post