Horoscope: ಈ ಪ್ರಪಂಚದಲ್ಲಿ ಒಬ್ಬೊಬ್ಬರದ್ದು ಒಂದೊಂದು ಸ್ವಭಾವ. ಕೆಲವರು ಸಿಡುಕಿನ ಸ್ವಭಾವದವರು. ಇನ್ನು ಕೆಲವರು ಸದಾ ನಗು ನಗುತ್ತಲಿರುವರು. ಮತ್ತೆ ಕೆಲವರು ಸದಾ ಎಲ್ಲರ ತಪ್ಪು ಕಂಡು ಹಿಡಿಯುತ್ತವರು. ಕೆಟ್ಟವರು, ಒಳ್ಳೆಯವರು, ಹೊಟ್ಟೆಕಿಚ್ಚಿನ ಸ್ವಭಾವದವರು, ದಾನಿಗಳು, ಕರುಣಾಳುಗಳು, ಹೀಗೆ ಹಲವು ರೀತಿಯ ಜನರಿದ್ದಾರೆ. ಅವರೆಲ್ಲ ಬೇರೆ ಬೇರೆ ನಕ್ಷತ್ರ, ರಾಶಿ, ತಿಂಗಳಿನಲ್ಲಿ ಜನಿಸಿದವರಾಗಿರುತ್ತಾರೆ. ಹಾಗಾಗಿ ನಾವಿವತ್ತು ಮಾರ್ಚ್ ತಿಂಗಳಲ್ಲಿ ಹುಟ್ಟಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋದನ್ನ ಹೇಳಲಿದ್ದೇವೆ.
ಮೊದಲನೇಯದಾಗಿ ಮಾರ್ಚ್‌ನಲ್ಲಿ ಹುಟ್ಟಿದವರ ಉತ್ತಮ ಸ್ವಭಾವವನ್ನ ತಿಳಿಯೋಣ ಬನ್ನಿ..
- ಮಾರ್ಚ್ ತಿಂಗಳಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವದವರಾಗಿರುತ್ತಾರೆ. ಸಾಧಾರಣವಾಗಿದ್ದರೂ ಕೂಡ, ಸಮಾಜದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುತ್ತಾರೆ.
- ಇನ್ನು ಉತ್ತಮವಾಗಿ ಮಾತನಾಡುವ ಇವರು ತಮ್ಮ ಮಾತಿನಿಂದಲೇ ಇತರರನ್ನು ಆಕರ್ಷಿಸುತ್ತಾರೆ. ಇದೇ ಕಾರಣಕ್ಕೆ ಇವರ ಗೆಳೆಯರ ಬಳಗ ದೊಡ್ಡದೇ ಇರುತ್ತದೆ.
- ಅಲ್ಲದೇ ವಾದ ಮಾಡುವ ಸ್ವಭಾವ ಇವರದ್ದಾಗಿದ್ದು, ಪ್ರತೀ ಬಾರಿ ಎದುರಿನವರನ್ನು ತಮ್ಮ ಮಾತಿನಿಂದಲೇ ಸೋಲಿಸಿಬಿಡುತ್ತಾರೆ. ಅಥವಾ ಎದುರಿನವರ ಬಾಯಿ ಮುಚ್ಚಿಸಿಬಿಡುತ್ತಾರೆ.
- ಒಳ್ಳೆಯ ಊಟ ಮಾಡುವುದು, ಊರೂರು ಸುತ್ತುವುದೆಂದರೆ ಇವರಿಗೆ ಬಲು ಇಷ್ಟ. ಇದ್ದ ದುಡ್ಡಿನಲ್ಲೇ ಐಶರಾಮಿ ಜೀವನ ಮಾಡಬಯಸುವ ಜನರಿವರು ಎನ್ನಬಹುದು.
- ಇನ್ನು ಇವರಿಗೆ ಯಾವುದಾದರೂ ಕೆಲಸವನ್ನು ಕೊಟ್ಟಾಗ, ಆ ಕೆಲಸ ಮಾಡುವ ಮನಸ್ಸು ಅವರಿಗಿದ್ದರೆ, ಪಟಪಟನೇ ಅಚ್ಚುಕಟ್ಟಾಗಿ ಆ ಕೆಲಸ ಮಾಡಿ ಕೊಡುತ್ತಾರೆ. ಆದ್ರೆ ನೀವು ಹೇಳಿದ ಕೆಲಸ ಮಾಡಲು ಅವರಿಗೆ ಇಷ್ಟವಿಲ್ಲದಿದ್ದರೆ, ಖಡಾಖಂಡಿತವಾಗಿ ಅದನ್ನು ನಿರಾಕರಿಸುತ್ತಾರೆ.
- ಇನ್ನು ಮೂಢನಂಬಿಕೆ, ಭಾಗ್ಯದ ಮೇಲೆಲ್ಲ ನಂಬಿಕೆ ಇಡದ ಇವರು, ತಮ್ಮ ಕೆಲಸದ ಮೇಲೆ ನಂಬಿಕೆ ಇಡುತ್ತಾರೆ. ಬುದ್ಧಿವಂತಿಕೆಯಿಂದ ಕಷ್ಟಪಟ್ಟು, ದುಡಿದು ಯಶಸ್ಸು ಗಳಿಸುತ್ತಾರೆ. ಆದ್ರೆ ಇವರು ಜೀವನದಲ್ಲಿ ಒಳ್ಳೆಯ ದುಡ್ಡು ಸಂಪಾದಿಸಿದರೂ ಕೂಡ ಅದನ್ನು ಉಳಿತಾಯ ಮಾಡಲಾಗುವುದಿಲ್ಲ. ಇದಕ್ಕೆ ಕಾರಣ ಇವರ ಖರ್ಚಿನ ಸ್ವಭಾವವಾಗಿರುತ್ತದೆ.
- ಬೇರೆಯವರ ದುಡ್ಡಿಗೆ ಆಸೆ ಪಡದ ಇವರು, ತಾವು ದುಡಿದ ಹಣದಿಂದಲೇ ಉತ್ತಮ ಜೀವನ ನಡೆಸಲು ಪ್ರಯತ್ನಿಸುತ್ತಾರೆ.
- ಇನ್ನು ಮಾರ್ಚ್ ತಿಂಗಳಿನಲ್ಲಿ ಜನಿಸಿದವರ ಉತ್ತಮವಲ್ಲದ ಸ್ವಭಾವ ಏನೆಂದು ನೋಡುವುದಾದರೆ..
- ಈ ಮೊದಲೇ ಹೇಳಿದಂತೆ ಉತ್ತಮವಾಗಿ ಮಾತನಾಡುವ ಇವರು ಮಾತಿನ ಮಲ್ಲರಾಗಿದ್ದರೂ, ಕೆಲವೊಮ್ಮೆ ಇವರ ಮಾತಿನಿಂದ ಬೇರೆಯವರಿಗೆ ಬೇಸರವಾಗುತ್ತದೆ. ಅಲ್ಲದೇ, ಇವರು ಇವರ ಮಾತಿನಿಂದಲೇ ಪೇಚಿಗೆ ಸಿಲುಕಿಕೊಳ್ಳುತ್ತಾರೆ.
- ಯಶಸ್ಸಿನ ಮೆಟ್ಟಿಲು ಹತ್ತುವ ಭರದಲ್ಲಿರುವ ಇವರು ಗಳಿಸಿದ್ದ ಹಣವನ್ನು ಖರ್ಚು ಮಾಡುವ ವೇಳೆ ತಮ್ಮ ಗುರಿಯನ್ನ ಮರೆತರೂ ಮರೆಯಬಹುದು.
- ಇನ್ನು ಗಾಸಿಪ್ ಸ್ಪ್ರೆಡ್ ಮಾಡಿ ಮಜ ತೆಗೆದುಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ. ಕೆಲವೊಮ್ಮೆ ಸುಳ್ಳಿನ ಸಹಾಯವನ್ನೂ ಪಡೆದುಕೊಳ್ಳುತ್ತಾರೆ. ಅಲ್ಲದೇ ತಾಳ್ಮೆ ಕಳೆದುಕೊಂಡರೆ, ಆಲಸ್ಯ ತೋರಿದರೇ ನೀವು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುವುದಿಲ್ಲ.
- ಇನ್ನು ಮಾರ್ಚ್ ತಿಂಗಳಲ್ಲಿ ಜನಿಸಿದವರ ಮೇಲೆ ಗುರು ಬ್ರಹಸ್ಪತಿಯ ಆಶೀರ್ವಾದವಿರುತ್ತದೆ. ಇವರು, ಲೇಖಕರು, ನಿರೂಪಕರು, ಬ್ಯಾಂಕ್ ನೌಕರರು, ನಟನಾ ವೃತ್ತಿಯಲ್ಲಿ ಬೇಗ ಯಶಸ್ಸು ಕಾಣುತ್ತಾರೆ.
- 3,5,7, ಮತ್ತು 9 ಇವರ ಲಕ್ಕಿ ನಂಬರ್ ಆಗಿದ್ದು, ಹಸಿರು, ಹಳದಿ, ಮತ್ತು ತಿಳಿ ಗುಲಾಬಿ ಬಣ್ಣ ಲಕ್ಕಿ ಬಣ್ಣದವಾಗಿದೆ. ರವಿವಾರ, ಬುಧವಾರ ಮತ್ತು ಶುಕ್ರವಾರ ಅದೃಷ್ಟದ ದಿನಗಳಾಗಿದೆ.
Discussion about this post