2020ರಲ್ಲಿ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ದಾಖಲಾದ ಒಟ್ಟು 71,107 ಅಪರಾಧ ಪ್ರಕರಣಗಳಲ್ಲಿ ಸುಮಾರು 73% ಪ್ರಕರಣಗಳು ಗಲಭೆಗೆ ಸಂಬಂಧಿಸಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
ಸಾರ್ವಜನಿಕ ಶಾಂತಿಯ ವಿರುದ್ಧದ ಅಪರಾಧದ ಭಾಗವಾಗಿದ್ದ ಗಲಭೆ ಪ್ರಕರಣಗಳ ಸಂಖ್ಯೆ 2019ರ ವೇಳೆಗೆ 51,606ರಷ್ಟಿತ್ತು. 2020ರಲ್ಲಿ 63,262 ಪ್ರಕರಣಗಳು ದಾಖಲಾಗುವ ಮೂಲಕ ಶೇ 12.4ರಷ್ಟು ಹೆಚ್ಚಳವಾಗಿದೆ.
ಭಾರತೀಯ ಮಹಾನಗರಳಲ್ಲಿ ಅಂತಹ 4,437 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು (2,264) ಗಲಭೆಗೆ ಸಂಬಂಧಿಸಿವೆ. ಮಹಾನಗರಗಳಲ್ಲಿ ಸಾರ್ವಜನಿಕ ಶಾಂತಿಯ ವಿರುದ್ಧದ ಅಪರಾಧಗಳು 2019 ರಲ್ಲಿ 3,893 ಇತ್ತು. 2020ರಲ್ಲಿ ಅವುಗಳ ಸಂಖ್ಯೆ ಶೇ 14ರಷ್ಟು ಹೆಚ್ಚಳವಾಗಿದೆ. ಅಂತಹ 1,032 ಘಟನೆಗಳು ರಾಜಕೀಯ ಸ್ವರೂಪದ್ದಾಗಿದ್ದು 736 ಘಟನೆಗಳು ಜಾತಿ-ಸಂಬಂಧಿತ ಸಂಘರ್ಷಗಳಿಂದ ರೂಪುಗೊಂಡಿದ್ದವು. ಈ ಬಗೆಯ 233 ಘಟನೆಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.
ಆಂದೋಲನ ಅಥವಾ ಮೋರ್ಚಾಗೆ ಸಂಬಂಧಿಸಿದ 1,905 ಗಲಭೆಗಳಲ್ಲಿ, ಕೇರಳ 94% (1,798), ಮಹಾರಾಷ್ಟ್ರದಲ್ಲಿ 23 ಪ್ರಕರಣಗಳು ಮತ್ತು ಗುಜರಾತ್‌ನಲ್ಲಿ 9 ಪ್ರಕರಣಗಳು ದಾಖಲಾಗಿವೆ. ಎಲ್ಲಾ ಕೇಂದ್ರಾಡಳಿತ ಪ್ರದೇಶಗಳ ವಿಚಾರದಲ್ಲಿ ಆಂದೋಲನ/ಮೋರ್ಚಾ ಸಮಯದಲ್ಲಿ ಉಂಟಾದ ಗಲಭೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಒಂದೇ ಒಂದು ಘಟನೆ ವರದಿಯಾಗಿದೆ.
ಕೋಮು ಅಥವಾ ಧಾರ್ಮಿಕ ಅಂಶಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷ 857 ಅಪರಾಧಗಳು ನಡೆದಿವೆ. 2019ಕ್ಕೆ ಹೋಲಿಸಿದರೆ ಈ ಬಗೆಯ ಪ್ರಕರಣಗಳಲ್ಲಿ ಶೇ 96ರಷ್ಟು ಏರಿಕೆಯಾಗಿದೆ; ಆಗ ಅಂತಹ 438 ಪ್ರಕರಣಗಳು ದಾಖಲಾಗಿದ್ದವು. ಕೋಮು ಘಟನೆಗೆ ಸಂಬಂಧಿಸಿದಂತೆ, ದೆಹಲಿಯಲ್ಲಿ 520 ಪ್ರಕರಣಗಳು, ಬಿಹಾರದಲ್ಲಿ 117 ಪ್ರಕರಣಗಳು, ಜಾರ್ಖಂಡ್ ಮತ್ತು ಹರಿಯಾಣದಲ್ಲಿ ತಲಾ 51 ಪ್ರಕರಣಗಳು ದಾಖಲಾಗಿವೆ.
ಕೃಪೆ: ಬಾರ್ ಅಂಡ್ ಬೆಂಚ್
Discussion about this post