ಬೆಂಗಳೂರು: ತಂಬಾಕು ಉತ್ಪನ್ನಗಳ ಕೊಳ್ಳುವ, ಅವುಗಳನ್ನು ಬಳಸಲು ಇರುವ ವಯಸ್ಸಿನ ಕಾನೂನು ನಿರ್ಬಂಧವನ್ನು 18 ವರ್ಷದಿಂದ 21 ವರ್ಷಕ್ಕೆ ಏರಿಸಬೇಕು ಎಂದು ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ. ಈ ರೀತಿ ವಯೋಮಾನವನ್ನು ಏರಿಸುವುದರಿಂದ ಯುವ ಜನತೆಯನ್ನು ತಂಬಾಕು ಚಟದಿಂದ ರಕ್ಷಿಸಿದಂತಾಗುತ್ತದೆ ಎಂದು ಆಯೋಗ ಹೇಳಿದೆ.
ಆಯೋಗದ ಅಧ್ಯಕ್ಷೆ ಪ್ರಿಯಾಂಕ ಕಾನುಗೋ ಅವರು, ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳ ಕಾಯ್ದೆ ಅಂದರೆ, ಕೋಟ್ಪಾ 2003ರ ಕಾಯ್ದೆಗೆ ತಿದ್ದುಪಡಿತರುವ ಅನಿವಾರ್ಯ ಈಗ ಬಂದಿದೆ. ಸರ್ಕಾರ ಆದಷ್ಟು ಬೇಗ, 18ರಿಂದ 21ಕ್ಕೆ ವಯೋಮಾನ ಏರಿಕೆಯನ್ನು ಮಾಡಲೇಬೇಕು ಎಂದು ಅಭಿಪ್ರಾಯಪಟ್ಟಿದೆ.
ಸರ್ಕಾರವು ಹೊಸ ತಿದ್ದುಪಡಿಯಲ್ಲಿ ಬಿಡಿಬಿಡಿಯಾಗಿ ಅಥವಾ ಒಂದೊಂದೇ ಸಿಗರೇಟ್ ಮಾರಾಟ ಮಾಡುವುದನ್ನುಸಂಪೂರ್ಣವಾಗಿ ನಿಷೇಧಿಸಬೇಕು. ಇದರಿಂದ ಯುವಕರನ್ನು ತಂಬಾಕು ಉತ್ಪನ್ನಗಳಿಂದ ದೂರ ಇಟ್ಟಂತಾಗುತ್ತದೆ. ಮುಖ್ಯವಾಗಿ, ಒಂದೊಂದೇ ಸಿಗರೇಟ್ ಸೇದುವ ಮೂಲಕ ಸಿಗರೇಟ್ ವ್ಯಸನಿಗಳಾಗುವುದನ್ನು ತಪ್ಪಿಸಬಹುದು ಎಂದು ರಾಷ್ಟ್ರೀಯ ಕಾನೂನು ಶಾಲೆ ಆಯೋಜಿಸಿದ್ದ ವೆಬಿನಾರ್ನಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಒಬ್ಬ ವ್ಯಕ್ತಿ 21 ವರ್ಷದ ತನಕ, ಸಿಗರೇಟಿನಂಥ ದುಶ್ಚಟದಿಂದ ದೂರ ಉಳಿದರೆ, ಮುಂದೆ ಜೀವನದಲ್ಲಿ ಎಂದೂ ಕೂಡ ಆತ, ಅವಳು ಯಾವುದೇ ಕಾರಣಕ್ಕೂ ತಂಬಾಕಿನ ಸಹವಾಸಕ್ಕೆ ಹೋಗುವುದಿಲ್ಲ ಎನ್ನುವುದನ್ನು ವಿಜ್ಞಾನವೇ ದೃಢಪಡಿಸಿದೆ.
ಕರ್ನಾಟಕದ ತಂಬಾಕ ಉತ್ಪನ್ನಗಳ ನಿಯಂತ್ರಣ ಮಂಡಳಿಯ ನಿರ್ದೇಶಕ ಡಾ. ಸೆಲ್ವರಾಜನ್ ಪ್ರಕಾರ, 21ನೇ ವಯಸ್ಸು ಅನ್ನೋದು ಬಹಳ ಮುಖ್ಯ. ಈ ಹಂತದಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ದುರಭ್ಯಾಸವನ್ನು ಬಿಡಿಸಬಹುದು. ಆದರೆ, ಇತ್ತೀಚೆಗೆ ಕಡಿಮೆ ವಯೋಮಾನದವರು ಕೂಡ ಸಿಗರೇಟ್ ಸೇವನೆ ಮಾಡೋದನ್ನು ಕಲಿಯುತ್ತಿರುವುದು ದುರಂತ ಎಂದಿದ್ದಾರೆ.
Increase minimum legal age buy tobacco age from 18to 21
ಇದನ್ನೂ ಓದಿ: Heart attack: ಯುವ ಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ತಡೆಯುವುದು ಹೇಗೆ ?
Discussion about this post