ಬೆಂಗಳೂರು, ನವೆಂಬರ್ 14, 2021: ಭಾರತದಲ್ಲಿ ಸುಮಾರು 7.7 ಕೋಟಿಗೂ ಹೆಚ್ಚಿನ ಸಂಖ್ಯೆಯ ಜನರು ಮಧುಮೇಹದಿಂದ ನರಳುತ್ತಿದ್ದು ಇದರ ಜೊತೆಯಲ್ಲೇ ತಡೆಯಲು ಸಾಧ್ಯವಿರುವ ಮಧುಮೇಹ-ಸಂಬಂಧಿ ದೃಷ್ಟಿನಾಶದ ಸಮಸ್ಯೆ ಯವಜನರಲ್ಲಿ ಹೆಚ್ಚು-ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ತೀವ್ರ ಆತಂಕಕ್ಕೆ ಎಡೆ ಮಾಡಿದೆಯೆಂದು ವಿಶೇಷಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಡಯಾಬಿಟಿಕ್ ರೆಟಿನೋಪಾತಿ ಎಂದು ಕರೆಯಲಾಗುವ ಈ ಸಮಸ್ಯೆಯು ಇಂದಿನ ಯುವ-ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದೊಂದು ದೀರ್ಘಕಾಲಿಕ ಹಾಗೂ ಕಾಲಕ್ರಮೇಣ ಹೆಚ್ಚುತ್ತಾ ಹೋಗುವ ಸಮಸ್ಯೆಯಾಗಿದ್ದು ಉದ್ಯೋಗನಿರತ ಯುವಕರಲ್ಲಿ ದೃಷ್ಟಿದೋಷಗಳಿಗೆ ಹಾಗೂ ದೃಷ್ಟಿನಾಶಕ್ಕೂ ಕಾರಣವಾಗುತ್ತಿದೆ. ಮಕ್ಕಳು ಹಾಗೂ ಹದಿವಯಸ್ಸಿನವರಲ್ಲಿ ಹತ್ತು ವರ್ಷಕ್ಕೂ ಹೆಚ್ಚಿನ ಅವಧಿಯ ಮಧುಮೇಹದ ಸಮಸ್ಯೆಯಿದ್ದಲ್ಲಿ (ಟೈಪ್1 ಮಧುಮೇಹ) ಇದು ಇನ್ನೂ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ.
ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು 1 ಕೋಟಿಗೂ ಹೆಚ್ಚಿನ ಸಂಖ್ಯೆಯ ಜನರು ಕಣ್ಣಿನ ಅಕ್ಷಿಪಟಲದ ದೋಷಗಳಿಂದ ನರಳುತ್ತಿದ್ದು ಮಧುಮೇಹ ಹೊಂದಿರುವ ಪ್ರತಿ ಮೂರು ಜನರಲ್ಲಿ ಒಬ್ಬರಿಗೆ ಮಧುಮೇಹದಿಂದ ಉಂಟಾಗುವ ಕಣ್ಣಿನ ಅಕ್ಷಿಪಟಲದ ಸಮಸ್ಯೆ (ಡಯಾಬಿಟಿಕ್ ರೆಟಿನೋಪತಿ) ಹೊಂದಿದ್ದಾರೆನ್ನುವ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.
ತೀವ್ರ ಏರುಗತಿಯಲ್ಲಿರುವ ಮಧುಮೇಹದಿಂದಾಗಿ ಪ್ರತಿ ಮೂರು ಮಧುಮೇಹಿಗಳಲ್ಲಿ ಒಬ್ಬರ ದೃಷ್ಟಿದೋಷಕ್ಕೆ ಮಧುಮೇಹವೇ ಮುಖ್ಯ ಕಾರಣವಾಗಿದೆಯೆಂದು ಅಂದಾಜಿಸಲಾಗಿದ್ದು ಯುವ ಉದ್ಯೋಗಿಗಳಲ್ಲಿ ದೃಷ್ಟಿನಾಶಕ್ಕೂ ಕಾರಣವಾಗಿದೆಯೆಂದು ಸೆಂಟರ್ ಆಫ್ ಸೈಟ್ ಸಮೂಹದ ವೈದ್ಯಕೀಯ ನಿರ್ದೇಶಕ ಹಾಗೂ ಅಧ್ಯಕ್ಷ ಮಹಿಪಾಲ್ ಸಚ್‌ದೇವ್ ಅಭಿಪ್ರಾಯ ಪಟ್ಟಿದ್ದಾರೆ. ಸುಮಾರು ಶೇಕಡಾ 7 ರಿಂದ 10ರಷ್ಟು ಯುವ ಮಧುಮೇಹಿಗಳು ಮುಂದುವರೆದು ಡಯಾಬಿಟಿಕ್ ರೆಟಿನೋಪತಿಯನ್ನು ಹೊಂದುವುದಲ್ಲದೇ ಸರಿಯಾದ ಚಿಕಿತ್ಸೆ ಪಡೆಯದಿದ್ದಲ್ಲಿ ಅವರಲ್ಲಿ ಶೇಕಡಾ 2 ರಿಂದ 4 ಜನರು ಅಂಧರಾಗುವ ಅಪಾಯವೂ ಇದೆಯೆಂದು ವಿಟ್ರಿಯೋರೆಟಿನಲ್ ಸಂದರ್ಶಕ ಶಸ್ತ್ರಚಿಕಿತ್ಸಕ ಡಾ. ಆದಿತ್ಯ ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
ದೀರ್ಘಾವಧಿಯ ಯುವ ಮಧುಮೇಹಿಗಳಲ್ಲಿ ಅಕ್ಷಿಪಟಲದ ಮಧುಮೇಹದಿಂದುಂಟಾದ ಮಾಕ್ಯುಲಾದ ಊತದ ಪರಿಸ್ಥಿತಿ ಉದ್ಭವಿಸಿದರೆ ಹಾನಿಗೊಳಗಾದ ರಕ್ತನಾಳಗಳು ಊದಿಕೊಂಡು ಮಾಕ್ಯುಲಾದೊಳಕ್ಕೆ ರಕ್ತ ಹರಿದು ದೃಷ್ಟಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆಂದು ಬೆಂಗಳೂರಿನ ನಾರಾಯಣ ನೇತ್ರಾಲಯ ಕಣ್ಣಿನ ವಿದ್ಯಾಸಂಸ್ಥೆಯ ಹಿರಿಯ ವಿಟ್ರಿಯೋರೆಟಿನಲ್ ಸಲಹೆಗಾರ್ತಿ ಡಾ. ಚೈತ್ರಾ ಜಯದೇವ್ ತಿಳಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಮಧುಮೇಹಕ್ಕೆ ತುತ್ತಾದವರು ದೀರ್ಘಾವಧಿಯ ಇನ್ಸುಲಿನ್ ಬಳಕೆಯ ಕಾರಣ ಇನ್ಸುಲಿನ್ ಪ್ರತಿರೋಧದ ಮಟ್ಟ ಹೆಚ್ಚಿಸಿಕೊಂಡು ರಕ್ತದಲ್ಲಿನ ಹೆಚ್ಚಾದ ಸಕ್ಕರೆಯ ದೋಷಕ್ಕೀಡಾಗುವ ಸಂಭವವಿರುತ್ತದೆ. ಇದರಿಂದ ಸೂಕ್ಷ್ಮ ಹಾಗೂ ಸ್ಥೂಲ ರಕ್ತ ಪರಿಚಲನೆಯ ಸಮಸ್ಯೆಗಳಿಗೆ ಈಡಾಗುತ್ತಾರೆಂದು ಡಾ. ಚೈತ್ರಾ ತಿಳಿಸಿದ್ದಾರೆ.
ಡಯಾಬಿಟಿಕ್ ರೆಟಿನೋಪತಿ ಪ್ರಾರಂಭವಾದವರಲ್ಲಿ ಕೇವಲ ಶೇಕಡಾ 11ರಷ್ಟು ಮಂದಿ ಮಾತ್ರವೇ ಇದರಿಂದ ಗುಣಮುಖರಾಗುವ ಸಾಧ್ಯತೆಯಿದ್ದು ಉಳಿದವರು ಮುಂದಿನ ಹಂತದ ಸಮಸ್ಯೆಗಳಿಗೆ ಈಡಾಗುವುದು ಖಚಿತವಾದದ್ದರಿಂದ ಇದರ ಸೂಕ್ತ ಆರೈಕೆಯನ್ನು ಯಾವ ಕಾರಣಕ್ಕೂ ಉದಾಸೀನ ಮಾಡುವಂತಿಲ್ಲ.
ಹೀಗಾಗಿ, ಯುವಜನರಲ್ಲಿ ಮಧುಮೇಹ ಸಮಸ್ಯೆಗಳ ಯಾವುದೇ ಸೂಚನೆಗಳಿಲ್ಲದಿದ್ದರೂ ನಿಯಮಿತ ತಪಾಸಣೆಯು ಬಹಳ ಮುಖ್ಯವಾದ ಅವಶ್ಯಕತೆಯಾಗಿದೆ. ಒಂದು ವೇಳೆ ಮಧಮೇಹದ ಕೌಟುಂಬಿಕ ಇತಿಹಾಸ, ಸ್ಥೂಲಕಾಯ, ಚಟುವಟಿಕೆಗಳಿಲ್ಲದ ಜೀವನಶೈಲಿ, ಅಥವಾ ದೀರ್ಘಾವಧಿಯ ಸ್ಟಿರಾಯ್ಡ್‌ಗಳನ್ನು ಬಳಕೆ ಮಾಡುತ್ತಿದ್ದಲ್ಲಿ ಕಾಲ-ಕಾಲಕ್ಕೆ ಮಧುಮೇಹ ತಪಾಸಣೆಗೊಳಪಡುವುದು ಕಡ್ಡಾಯವಾಗಿವಾಗಿದೆ.
Risk of Blindness has increased in diabetic young working adults
ಇದನ್ನೂ ಓದಿ: ಆರೋಗ್ಯಕರ ಜೀರ್ಣಕ್ರಿಯೆ ನಿಮ್ಮದಾಗಬೇಕೇ? ಹಾಗಾದೆರೆ ಇಲ್ಲಿವೆ ಆಯುರ್ವೇದದ 9 ಸುಲಭೋಪಾಯಗಳು
ಇದನ್ನೂ ಓದಿ: Ayurveda Day :ಆಯುಷ್ ಕ್ಷೇಮ ಕೇಂದ್ರಗಳ ಮೂಲಕ ಆರೋಗ್ಯವಂತರನ್ನಾಗಿಸುವುದು ಕೇಂದ್ರದ ಆಶಯ
Discussion about this post