ಆರೋಗ್ಯದಲ್ಲಿ ಕಾಡುವ ಸಾಕಷ್ಟು ಸಮಸ್ಯೆಗಳಿಗೆ ಹಿರಿಯರು ಹೇಳುವ ಮನೆಮದ್ದುಗಳೇ ಸಾಕು. ಅದರಲ್ಲಿ ಅಶ್ವಗಂಧ ಪ್ರಮುಖವಾದದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅತ್ಯುತ್ತಮ ಸಸ್ಯವಾದ ಈ ಅಶ್ವಗಂಧದಲ್ಲಿ ಏನೆಲ್ಲಾ ಲಾಭಗಳಿವೆ ಗೊತ್ತಾ?
- ಸಕ್ಕರೆ ಮಟ್ಟ ಕಡಿಮೆ: ಇದರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
- ನಿದ್ರೆ: ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಅಶ್ವಗಂಧ ಸೇವನೆ ಹೆಚ್ಚು ಪ್ರಯೋಜನಕಾರಿಯಾಗಲಿದೆ.
- ಒತ್ತಡ ನಿವಾರಣೆ: ಮಾನಸಿಕ ಖಿನ್ನತೆ ಹಾಗೂ ಒತ್ತಡದಲ್ಲಿರುವವರಿಗೆ ಆರೋಗ್ಯ ಸುಧಾರಿಸುವಲ್ಲಿ ಸಹಕಾರಿಯಾಗಲಿದೆ.
- ರೋಗ ನಿರೋಧಕ ಶಕ್ತಿ: ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಯಾಗಿ ಬಳಸಲಾಗುತ್ತಿದೆ.
- ಗಾಯ ಗುಣಪಡಿಸಲಿದೆ: ಅಶ್ವಗಂಧದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಮತ್ತು ಅತಿಸೂಕ್ಷ್ಮಜೀವಿ ನಿರೋಧಕ ಗುಣಗಳಿವೆ ಹಾಗೂ ಇವು ಗಾಯಗಳನ್ನು ಮಾಗಿಸಲು ಸಹಾಯ ಮಾಡುತ್ತದೆ.
- ಮೆದುಳು ಸವೆತ: ಮೆದುಳಿನಲ್ಲಿನ ಜೀವಕೋಶಗಳನ್ನು ಆಕ್ಟೀವ್ ಆಗಿಸಿ,ಮರೆವಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
- ತ್ವಚೆಗೆ ಆರೋಗ್ಯ: ಅಶ್ವಗಂಧ ಬಳಸುವುದರಿಂದ ಮುಖದಲ್ಲಿ ಕಾಂತಿ ಹೆಚ್ಚಾಗಿ, ತ್ವಚೆ ಆರೋಗ್ಯವಾಗಿರಲು ಸಹಕಾರಿಯಾಗಲಿದೆ.
- ಕೊಲೆಸ್ಟ್ರಾಲ್: ಅಶ್ವಗಂಧದ ಬಳಕೆಯಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಿ ಹೃದಯ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತದೆ.
Ashwagandha
Discussion about this post