ಬೆಂಗಳೂರು: ನನ್ನನ್ನು ಕಳುಹಿಸಿಕೊಡಿ, ಅವನನ್ನು ಕರೆದುಕೊಂಡು ಬನ್ನಿ ಎಂದು ಸಹೋದರ ರಾಘವೇಂದ್ರ ರಾಜ್ಕುಮಾರ್ ತಿಳಿಸಿದರು.
ಇದನ್ನೂ ಓದಿ: Corona: ರಾಜ್ಯದಲ್ಲಿ 255 ಮಂದಿಗೆ ಕೊರೋನ ದೃಢ, 7 ಮಂದಿ ಮೃತ್ಯು
ಅವರು ಪುನೀತ್ ರಾಜ್ಕುಮಾರ್ ಅವರಿಗೆ ನುಡಿನಮನ ಅರ್ಪಿಸಲು ಕನ್ನಡ ಚಿತ್ರರಂಗವಲ್ಲದೇ ದಕ್ಷಿಣ ಭಾರತದ ಚಿತ್ರರಂಗದ ಗಣ್ಯಾತಿಗಣ್ಯರು ನಗರದ ಪ್ಯಾಲೇಸ್ ಮೈದಾನದಲ್ಲಿ ನೆರೆದಿದ್ದರು. ಈ ಕಾರ್ಯಕ್ರಮದಲ್ಲಿ ಅತ್ಯಂತ ಭಾವುಕರಾಗಿ ಸಹೋದರ ರಾಘವೇಂದ್ರ ರಾಜ್ಕುಮಾರ್, ತಮ್ಮನನ್ನು ಕಳೆದುಕೊಂಡ ನೋವು ತಡೆದುಕೊಳ್ಳಲಾರದೇ ಭಾವುಕರಾದರು.
‘ಕಳೆದ 20 ದಿನಗಳಿಂದ ನೊಂದು, ನೋವು ತಡೆದು, ನುಂಗಿಕೊಂಡು ಏನಾಯ್ತಪ್ಪಾ ಎಂದು ಮೆಲುಕು ಹಾಕಿದ್ರೆ ಒಬ್ಬ ತಮ್ಮ, ನಮಗೆ ಆತ ಪವರ್. ಆ ಪವರ್ ಹೋದ ಮೇಲೆ ಇನ್ನು ನಾವು ಬಲ್ಬ್ ಏನ್ ಮಾಡುವುದಕ್ಕೆ ಆಗುತ್ತೆ ಎಂದು ಅಂದುಕೊಂಡೆವು.
ಇದನ್ನೂ ಓದಿ: Tamil Nadu: ಚೆನ್ನೈ ಸಹಿತ ವಿವಿಧ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
ಆದರೆ, ಅವನು ಮಲಗಿಕೊಂಡ ದಿನ ಆತನ ಸುತ್ತಮುತ್ತ ರಾಜ್ಯದ ಮೂರು ಶಕ್ತಿಗಳಿದ್ದವು. ಪೊಲೀಸ್, ಸರ್ಕಾರ ಹಾಗೂ ಅಭಿಮಾನಿಗಳೇ ಅವರು. ಈ ನೋವನ್ನು ನಮ್ಮ ತಂದೆ-ತಾಯಿ ಮುಂದೆ ಹೇಳಿಕೊಳ್ಳೋಣ ಅಂದರೆ ಅವರನ್ನು ತೆಗೆದುಕೊಂಡು ಹೋಗಿ ಅಲ್ಲೇ ಮಲಗಿಸಿಬಿಟ್ಟಿದ್ದೇವೆ. ಈ ಸಂದರ್ಭದಲ್ಲಿ ನಾನು ಶಿವಣ್ಣನ ಮುಖ ನೋಡಿದೆ. ಈ ವೇಳೆ ನಮಗೆ ನಾಚಿಕೆಯಾಯಿತು. ನಾವಿಬ್ಬರೂ ಸೇರಿ ಇವನನ್ನು ಕಳಿಸಿಕೊಡಬೇಕೇ? ಎಂಬ ಕೊರಗು ಪ್ರತಿದಿನ ಕಾಡುತ್ತಿದೆ’ ಎಂದು ಕಣ್ಣೀರು ಹಾಕಿದರು.
‘ನಾನು ಅತ್ತರೇ ಅಪ್ಪು ಪತ್ನಿ ಮತ್ತು ಮಕ್ಕಳು ತಡೆದುಕೊಳ್ಳಲ್ಲ ಅಂತಾ ನಾನು ಬಹಿರಂಗವಾಗಿ ಕಣ್ಣೀರು ಹಾಕ್ತಿರಲಿಲ್ಲ. ಆದ್ರೆ, ನನಗೆ ಇವತ್ತು ತಡೆಯೋಕೆ ಆಗಿಲ್ಲ, ಕ್ಷಮಿಸಿ. ಅಪ್ಪ,ಅಮ್ಮ ನಿಧನರಾದಾಗ ನಾನು ಹೇಳಿದ್ದೇ, ನನ್ನ ಆಯುಷ್ಯ ನಿಮ್ಮಿಬ್ಬರಿಗೆ ಇರ್ಲಿ ಅಂತಾ. ಆದ್ರೆ, ಈಗ ನೋಡಿದ್ರೆ ಅವನು ತನ್ನ ಆಯುಷ್ಯ ಕೂಡ ನಮಗೆ ಕೊಟ್ಟು ಹೋಗಿದ್ದಾನೆ. ಹುಟ್ಟುವಾಗ ತಮ್ಮನಾಗಿ ಬಂದ, ಈಗ ಅಪ್ಪನಾಗಿ ಹೋಗಿದ್ದಾನೆ ‘ ಅಂತಾ ಭಾವುಕರಾದರು.
Send me, bring him
Discussion about this post