ಮೈಸೂರು: ವಿಶ್ವವಿಖ್ಯಾತ ದಸರೆಗಾಗಿ ಅರಮನೆಗೆ ಆಗಮಿಸಿದ ಗಜಪಡೆಯನ್ನು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಸ್ವಾಗತಿಸಲಾಯ್ತು.
ಗಜಪಡೆಯ ಮುಂದಾಳು ನಾಯಕ ಅಭಿಮನ್ಯು ನೇತೃತ್ವದಲ್ಲಿ ಎಂಟು ಆನೆಗಳ ಗಜಪಡೆ ಅರಮನೆಗೆ ಎಂಟ್ರಿ ಕೊಟ್ಟವು.
ಆನೆಗೆ ಮೆಚ್ಚಿನ ತಿನಿಸಾದ ಕಬ್ಬು, ಬೆಲ್ಲ, ತೆಂಗು ನೀಡಿ ಪೂಜೆ-ಪುರಸ್ಕಾರ ಸಲ್ಲಿಸಿ, ಪುಷ್ಪಾರ್ಚನೆ ನಡೆಸುವ ಮುಖಾಂತರ ಮೆಚ್ಚುಗೆಯ ಸ್ವಾಗತ ನೀಡಲಾಯಿತು.
ಅರಮನೆ ಆಡಳಿತ ಮಂಡಳಿ ಅಗತ್ಯ ತಯಾರಿ ನಡೆಸಿದ್ದು, ಇದಕ್ಕಾಗಿ ಅರಮನೆ ಬ್ಯಾಂಡ್, ಮಂಗಳ ವಾದ್ಯ, ಪೂರ್ಣ ಕುಂಭ ಸೇರಿದಂತೆ ಸಾಂಪ್ರದಾಯಿಕ ಸ್ವಾಗತದಿಂದ ಆನೆಗಳಿಗೆ ನೋಡುಗರಿಗೆ ಕಣ್ಮನ ಸೆಳೆಯಿತು.
ವರ್ಷಕ್ಕೊಮ್ಮೆ ಗಜಪಡೆ ಆಗಮಿಸುವುದು, ದಸರಾ ಜಂಬೂ ಸವಾರಿಗಾಗಿ. ಹೀಗೆ ತಾಯಿ ಚಾಮುಂಡಿಯನ್ನು ಹೊರಲು, ದಸರೆಗೆ ಶೋಭೆ ತರಲು ಆಗಮಿಸುವ ಗಜಪಡೆಗೆ ಭೂರಿ ಭೋಜನ ಉಣಪಡಿಸುವುದು ಎಂದಿನಂದೆ ಸಂಪ್ರದಾಯ.
Discussion about this post