ಮೈಸೂರು: ವಿಶ್ವವಿಖ್ಯಾತ ಮೈಸೂರ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಭಾನುವಾರ ಅರಮನೆಯಿಂದ ಮರಳಿ ಕಾಡಿನಲ್ಲಿರುವ ತಮ್ಮ ಶಿಬಿರಗಳಿಗೆ ತೆರಳಿದವು. ಗಜಪಡೆಗೆ ಅರಮನೆ ಆವರಣದಲ್ಲಿ ಸಾಂಪ್ರದಾಯಿಕವಾಗಿ ಬೀಳ್ಕೊಡುಗೆ ನೀಡಲಾಯಿತು.
ಆನೆಗಳಿಗೆ ಮುನ್ನಾ ಸ್ನಾನ ಮಾಡಿಸಿದ ಮಾವುತರು ಕಾವಾಡಿಗಳು. ಅಭಿಮನ್ಯು ಅಶ್ವತ್ಥಾಮ, ಗೋಪಾಲಸ್ವಾಮಿ, ಧನಂಜಯ, ಕಾವೇರಿ, ಚೈತ್ರಾ, ಲಕ್ಷ್ಮಿ, ವಿಕ್ರಮ ಆನೆಗಳನ್ನು ಒಟ್ಟಿಗೆ ನಿಲ್ಲಿಸಿದರು. ಬಳಿಕ ಅರಮನೆ ಮಂಡಳಿಯಿಂದ ಸಾಂಪ್ರದಾಯಿಕ ಪೂಜೆಯನ್ನು ಸಲ್ಲಿಸಲಾಯಿತು.
ಬಳಿಕ ಎಲ್ಲರೂ ಒಟ್ಟಾಗಿ ಆನೆಗಳ ಮುಂದೆ ನಿಂತು ಗ್ರೂಪ್ ಫೋಟೋಗೆ ಫೋಸ್ ನೀಡಿದರು. ಬಳಿಕ ಗಜಪಡೆಯ ಮಾವುತರು, ಕಾವಾಡಿಗಳಿಗೆ ಗೌರವ ಧನವನ್ನು ವಿತರಿಸಲಾಯಿತು. ಡಿಸಿಎಫ್ ಕರಿಕಾಳನ್, ಅರಮನೆ ಮಂಡಳಿಯ ಉಪ ನಿರ್ದೇಶಕ ಸುಬ್ರಹ್ಮಣ್ಯ ಅವರು ಗಜಪಡೆ ಹಾಗೂ ಅದರ ಮಾವುತರಿಗೆ ಬಿಳ್ಕೋಡಿಗೆ ನೀಡಿದರು.
ಬಳಿಕ ಆನೆಗಳನ್ನು ಲಾರಿಗೆ ಹತ್ತಿಸಿಕೊಂಡು, ಕಾಡಿನಲ್ಲಿರುವ ಅವುಗಳ ಶಿಬಿರಗಳಿಗೆ ಕರೆದುಕೊಂಡು ಹೋಗಲಾಯಿತು. ದಸರಾವನ್ನು ಈ ಬಾರಿ ಕೊರೋನಾ ನಡುವೆ ಯಶಸ್ವಿಯಾಗಿ ನಡೆಸಿಕೊಟ್ಟ ಸಮಾಧಾನ, ತೃಪ್ತಿಯೊಂದಿಗೆ ಗಜಪಡೆಯ ಮಾವುತರು ಹಾಗೂ ಕಾವಾಡಿಗಳು ತಮ್ಮ ಕುಟುಂಬದೊಂದಿಗೆ ತಮ್ಮಮ್ಮ ಊರುಗಳಿಗೆ ತಮ್ಮ ಆನೆಗಳೊಂದಿಗೆ ತೆರಳಿದರು. ಮಾರ್ಗ ಉದ್ದಕ್ಕೂ ದಸರಾ ಆನೆಗಳನ್ನು ನೋಡಿದ ಜನರು ಕೈ ಬೀಸಿ ವಿಸ್ ಮಾಡಿ ಹರ್ಷ ವ್ಯಕ್ತಪಡಿಸಿದರು.
Discussion about this post