ರಕ್ತದೊತ್ತಡ ಏರುವಿಕೆ, ಕಬ್ಬು ಶೇಖರಣೆ, ಮಾನಸಿಕ ಒತ್ತಡ, ವಿಪರೀತ ದೈಹಿಕ ಶ್ರಮ, ರಕ್ತನಾಳ ಮತ್ತು ಉಸಿರಾಟದ ಸಮಸ್ಯೆ ಅಥವಾ ಬಹು ವಿವಿಧ ಕಾಯಿಲೆಗಳು ಹೃದಯಾಘಾತಕ್ಕೆ ಕಾರಣ. ಇದರೊಟ್ಟಿಗೆ ಚಳಿಗಾಲದಲ್ಲಿ ಹೃದಯಾಘಾತ ಹೆಚ್ಚು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚಳಿಗಾಲವು ಪಾರ್ಶ್ವವಾಯು, ಹೃದಯ ವಿಫಲತೆಗೆ, ಹೃದಯದ ರಕ್ತನಾಳದ ಸಮಸ್ಯೆಗೆ ಕಾರಣ ಆಗುತ್ತದೆ. ಇದರಿಂದ ಅರ್ಹೆಥ್ಮಿಯಾ ಮತ್ತು ಹಲವು ಅಸ್ವಸ್ಥೆ ಕಾಣಬಹುದು. ಇದಕ್ಕೆ ಶರೀರದ ಉಷ್ಣತೆ ಕಡಿಮೆ ಆಗುವುದು ಕಾರಣ. ಈ ರೀತಿಯ ಆಗುವುದರಿಂದ ಹೃದಯದ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ.
ಸ್ವೀಡನ್ನಲ್ಲಿ ವಾಸಿಸುವ 2.74 ಲಕ್ಷ ಮಂದಿಯ ಆರೋಗ್ಯದ ಮಾಹಿತಿಯನ್ನು ವಿಶ್ಲೇಷಿಸಲಾಗಿದ್ದು; ಹೃದಯಾಘಾತದ ಸಮಸ್ಯೆ ಕಾಡುವ ಅಪಾಯ ಇವರಲ್ಲಿತ್ತು ಎಂದು ಗೊತ್ತಾಗಿದೆ. ಸ್ವೀಡನ್ನಲ್ಲಿ 2018ರಲ್ಲಿ ತಾಪಮಾನ ಶೂನ್ಯಕ್ಕಿಂತ ಕೆಳಗಿಳಿದು, ಮರಗಟ್ಟುವ ಕೊರೆತ ಉಂಟಾಗಿದ್ದಾಗ ಹೃದಯಾಘಾತದ ಅಪಾಯ ಶೇ. 31ರಷ್ಟು ಹೆಚ್ಚಾಯಿತು ಎಂದು ವೈದ್ಯಕಿಯ ಮಾಸಪತ್ರಿಕೆ ‘ಜೆಎಎಂಎ ಕಾಡಿರ್ಯಾಲಜಿ’ಯಲ್ಲಿ ಪ್ರಕಟವಾದ ಅಧ್ಯಯನದ ವರದಿ ತಿಳಿಸಿದೆ.
ಅತಿಯಾದ ಚಳಿಯ ವಾತಾವರಣದಿಂದ ಅಂದರೆ ತಾಪಮಾನ ಶೂನ್ಯಕ್ಕಿಂತ 15 ಡಿಗ್ರಿ ಸೆಲ್ಶಿಯಸ್ ಕಡಿಯಾದರೆ ಪಾರ್ಶ್ವ ವಾಯು ಬಡಿಯುವ ಅಪಾಯ ಶೇ.80 ಇದೆ. ತಾಪಮಾನ ವಿಪರೀತ ತಗ್ಗುವಿಕೆಯಿಂದ ರಕ್ತನಾಳ ಬಿಗಿಯಾಗುತ್ತದೆ. ದೇಹವನ್ನು ಬೆಚ್ಚಗಿಡಲು ರಕ್ತ ವೇಗವಾಗಿ ಮುನ್ನುಗ್ಗಲು ಯತ್ನಿಸುತ್ತದೆ. ಹೀಗಾಗಿಯೇ ಚಳಿಗಾಲದಲ್ಲಿ ರಕ್ತದೊತ್ತಡ ಬೇರೆ ಋತುಮಾನಕ್ಕಿಂತ ತುಸು ಹೆಚ್ಚಿರುತ್ತದೆ. ಈ ರಕ್ತದ ವೇಗ ಮಿತಿಮೀರಿದರೆ ಆಗ ಹೃದಯಾಘಾತಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ.
ಹೃದಯಾಘಾತವು ಚಳಿಗಾಲದಲ್ಲಿ ಶೇ. 33ರಷ್ಟು ಅಧಿಕ ಎಂದು ಇನ್ನೊಂದು ಅಧ್ಯಯನ ಹೇಳಿದೆ. ಅಪಧಮನಿಗಳು ಚಳಿಗಾಲದಲ್ಲಿ ಸಂಕುಚಿತವಾಗುತ್ತವೆ. ಇದರಿಂದ ರಕ್ತದ ಪರಿಚಲನೆ ಕಡಿಮೆ ಆಗಿ ಹೃದಯದ ಸ್ನಾಯು ಸೆಳೆತಕ್ಕೆ ಒಳಗಾತ್ತದೆ. ಇದರಿಂದಲೂ ಹೃದಯಾಘಾತ ಆಗಬಹುದು ಎಂದು ಆರ್ಎಂಎಲ್ ಆಸ್ಪತ್ರೆಯ ಹೃದ್ರೋಗ ತಜ್ಞ ತರುಣ್ ಕುಮಾರ್ ಅಭಿಪ್ರಾಯ ಪಡುತ್ತಾರೆ.
ಇದನ್ನೂ ಓದಿ: ಚಳಿಗಾಲಕ್ಕೆ ಒಳ್ಳೆಯದು ಈ ಐದು ತರಕಾರಿ, ಹಣ್ಣು, ಸೊಪ್ಪು
Discussion about this post