ಕೌನ್ ಬನೇಗಾ ಕರೋಡ್‌ಪತಿಯ 13ನೇ ಅವೃತ್ತಿಯ ಸೋಮವಾರದಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು ಹೃದಯಸ್ಪರ್ಶಿಯಾಗಿದೆ. ಸೋನಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಜನಪ್ರಿಯ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಜಲಗಾಂವ್ ನಿವಾಸಿ ಭಾಗ್ಯಶ್ರೀ ತಾಯ್ಡೆ “ತಮ್ಮ ಪ್ರೇಮವಿವಾಹಕ್ಕೆ ತಮ್ಮ ತಂದೆಯ ವಿರೋಧವಿದ್ದು ವಿವಾಹವಾದ ನಂತರೆ ಅವರು ತಮ್ಮೊಂದಿಗೆ ಮಾತನಾಡುವುದನ್ನೂ ನಿಲ್ಲಿಸಿಬಿಟ್ಟರಲ್ಲದೆ ಒಮ್ಮೆಯೂ ಭೇಟಿಯಾಗಿಲ್ಲ ಹಾಗೂ ನನ್ನ ಮಗುವನ್ನು ನೋಡಲೂ ಬಂದಿಲ್ಲವೆಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತಾಭ್ ನಿಮ್ಮ ತಂದೆಯವರು ಈ ಕಾರ್ಯಕ್ರಮವನ್ನು ನೋಡುತ್ತಿದ್ದರೂ ನೋಡುತ್ತಿರಬಹುದು, ಅವರಿಗೆ ಇಲ್ಲಿಂದಲೇ ನಿಮ್ಮ ಸಂದೇಶ ತಿಳಿಸಿ ಎಂದು ಹೇಳಿದರು.
ಭಾಗ್ಯಶ್ರೀ ಘಟನೆಯ ವಿವರಣೆ ನೀಡದಿದ್ದರೂ ತುಂಬಿದ ಕಣ್ಣಾಲಿಗಳೊಡನೆ ತಮ್ಮ ತಂದೆಯವರಲ್ಲಿ ಕ್ಷಮೆಯಾಚಿಸಿದರು. ಅಮಿತಾಭ್ ಮುಂದುವರೆದು ನಿಮ್ಮ ತಂದೆಯವರು ಫೋನ್ ಸಂಪರ್ಕದಲ್ಲೇ ಇದ್ದಾರೆ ಅವರೊಂದಿಗೆ ಮಾತನಾಡಿ ಎಂದು ಹೇಳಿದಾಗೆ ಭಾಗ್ಯಶ್ರೀಯವರ ಆಶ್ಚರ್ಯ ಹಾಗೂ ಸಂತೋಷಕ್ಕೆ ಪಾರವೇ ಇರಲಿಲ್ಲ. ಭಾಗ್ಯಶ್ರೀಯವರ ತಂದೆ ಮಗಳೊಂದಿಗೆ ಮಾತನಾಡಿ ಯಾವುದೇ ಆತಂಕವಿಲ್ಲದೇ ಪ್ರಶಾಂತ ಮನಸ್ಸಿನಿಂದ ಆಟವಾಡುವ ಸಲಹೆ ನೀಡಿದ್ದಲ್ಲದೇ ಅಳಿಯನಿಗೂ ಶುಭ ಕೋರಿದರು.
ಈ ಅನಿರೀಕ್ಷಿತ ಘಟನೆಯಿಂದ ಭಾವುಕರಾದ ಭಾಗ್ಯಶ್ರೀ ತಮ್ಮ ಸಂತೋಷ ವ್ಯಕ್ತ ಪಡಿಸಿದ್ದಲ್ಲದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದಲೇ ನಾನು ನನ್ನ ತಂದೆಯೊಂದಿಗೆ ಮಾತನಾಡಲು ಸಾಧ್ಯವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಪೂರ್ವಭಾವಿ ಸಂದರ್ಶನ ನಡೆದಾಗ ಒಂಭತ್ತು ತಿಂಗಳ ಗರ್ಭಿಣಿಯಾಗಿದ್ದುದನ್ನು ನೆನೆದ ಅವರು, ಈ ಕಾರ್ಯಕ್ರಮ ನನ್ನ ಜೀವನದಲ್ಲೇ ಮರೆಯಲಾಗದ ಬಹುಮುಖ್ಯ ಘಟನೆಯೆಂದು ಹೇಳಿದರು. ಉತ್ತಮವಾಗಿ ಆಡಿದ ಭಾಗ್ಯಶ್ರೀ 12.5 ಲಕ್ಷ ರೂಪಾಯಿಗಳನ್ನು ಗೆದ್ದು ಮುಂದಿನ ಪ್ರಶ್ನೆಗೆ ಉತ್ತರಿಸಲಾಗದೆ ನಿವೃತ್ತಿ ಹೊಂದಿದರು.
ಇದು ಅಮಿತಾಭ್ ನಡೆಸಿಕೊಡುತ್ತಿರುವ 12ನೇ ಸರಣಿಯಾಗಿದ್ದು, ಶಾರುಖ್ ಖಾನ್ ನಡೆಸಿಕೊಟ್ಟ ಒಂದು ಸರಣಿಯನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಸರಣಿಗಳನ್ನೂ ಅವರೇ ನಡೆಸಿಕೊಟ್ಟಿದ್ದಾರೆ.
Amitabh Bachchan reunites daughter with her upset father who married the boy of her liking against the wishes of her father
View this post on Instagram
Discussion about this post