ದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ 5,326 ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ. ಮಂಗಳವಾರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಕಳೆದ ಹಿಂದಿನ ದಿನಕ್ಕೆ ಹೋಲಿಸಿದರೆ ಒಂದು ಸಾವಿರದಷ್ಟು ಕಡಿಮೆ ಪ್ರಕರಣಗಳು ದಾಖಲಾಗಿವೆ. ಸೋಮವಾರ 6,563 ಪ್ರಕರಣಗಳು ದಾಖಲಾಗಿದ್ದವು.
ಒಮೈಕ್ರಾನ್ ಆತಂಕದ ನಡುವೆಯೂ ಕೊರೊನಾ ವೈರಸ್ ಪ್ರಕರಣಗಳ ಇಳಿಕೆ ಕೊಂಚ ಸಮಾಧಾನ ತಂದಿದೆ. ಇದುವರೆಗೂ 170 ಒಮೈಕ್ರಾನ್ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದ್ದು, 2022ರ ಫೆಬ್ರವರಿಯ ಆರಂಭದಲ್ಲಿ ಒಮೈಕ್ರಾನ್ ತೀವ್ರವಾಗಿ ಹರಡಲಿದೆ ಎಂದು ಅಧ್ಯಯನಗಳು ತಿಳಿಸಿವೆ.
ಭಾರತವು ಇದುವರೆಗೂ 3,47,52,164 ಪ್ರಕರಣಗಳನ್ನು ವರದಿ ಮಾಡಿದ್ದು, 79,097 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 8,043 ಜನರು ಗುಣಮುಖರಾಗಿದ್ದು, 453 ಸಾವುಗಳು ಸಂಭವಿಸಿವೆ. ಆ ಮೂಲಕ ಒಟ್ಟು ದೇಶದ ಕೊರೊನಾ ಸಾವಿನ ಸಂಖ್ಯೆ 4,78,007ಕ್ಕೆ ತಲುಪಿದೆ.
ಕೊರೊನಾದ ಮೂರನೇ ಅಲೆಯು ಮುಂದಿನ ವರ್ಷದ ಫೆಬ್ರವರಿಯಲ್ಲಿ ಉತ್ತುಂಗಕ್ಕೇರುವ ನಿರೀಕ್ಷೆಯಿದೆ ಎಂದು ‘ರಾಷ್ಟ್ರೀಯ ಕೊವಿಡ್ 19 ಸೂಪರ್ ಮಾಡೆಲ್’ ಸಮಿತಿ ತಿಳಿಸಿದೆ. ಆದರೆ ಈ ಅಲೆಯು ಎರಡನೇ ಅಲೆಗಿಂತ ಸೌಮ್ಯವಾಗಿರುತ್ತದೆ ಎಂದು ಅದು ಉಲ್ಲೇಖಿಸಿದೆ.
ಸಮಿತಿಯ ಮುಖ್ಯಸ್ಥ ವಿದ್ಯಾಸಾಗರ್, “ಭಾರತದಲ್ಲಿ ಒಮೈಕ್ರಾನ್‌ನ ಮೂರನೇ ಅಲೆ ಅಪ್ಪಳಿಸಲಿದೆ. ಆದರೆ ಈಗ ದೇಶದಲ್ಲಿ ದೊಡ್ಡ ಪ್ರಮಾಣದ ರೋಗನಿರೋಧಕ ಶಕ್ತಿ ಇರುವುದರಿಂದ ಇದು ಎರಡನೇ ತರಂಗಕ್ಕಿಂತ ಸೌಮ್ಯವಾಗಿರುತ್ತದೆ” ಎಂದು ಹೇಳಿದ್ದಾರೆ.
Decrease in new cases
Discussion about this post