ನವದೆಹಲಿ: ಮುಂದಿನ ಎರಡು ವರ್ಷದಲ್ಲಿ ಎಲೆಕ್ಟ್ರಿಕ್ ವಾಹನಗಳ(ಇವಿ) ಬೆಲೆ ಪೆಟ್ರೋಲ್ ವಾಹನದಷ್ಟೇ ಆಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ವೆಬಿನಾರ್‌ನಲ್ಲಿ ಮಾತನಾಡಿದ ಅವರು, ಈಗಾಗಲೇ ಇವಿಗಳ ಮೇಲೆ ಜಿಎಸ್‌ಟಿ ಕೇವಲ ಶೇ.5ರಷ್ಟಿದ್ದು, ಲಿಥಿಯಂ ಆಯಾನ್ ಬ್ಯಾಟರಿಗಳ ಬೆಲೆಯೂ ಕಡಿಮೆಯಾಗುತ್ತಿದೆ. ಇದಲ್ಲದೆ ಪೆಟ್ರೋಲ್ ಪಂಪ್‌ಗಳು ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಅನುಮತಿಸುವ ನೀತಿಯನ್ನು ಸರ್ಕಾರ ಈಗಾಗಲೇ ರೂಪಿಸಿದೆ. ಎರಡು ವರ್ಷಗಳಲ್ಲಿ ಭಾರತದಾದ್ಯಂತ ಸಾಕಷ್ಟು ಚಾರ್ಜಿಂಗ್ ಪಾಯಿಂಟ್‌ಗಳು ಇರಲಿದೆ ಎಂದು ತಿಳಿಸಿದರು.
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದೆ. ಪೆಟ್ರೋಲ್ ಆಧಾರಿತ ವಾಹನದಲ್ಲಿ ಪ್ರತಿ ಕಿಲೋಮೀಟರ್‌ಗೆ 10 ರೂ., ಡೀಸೆಲ್ ವಾಹನದಲ್ಲಿ 7 ರೂ. ಆದರೆ ಇವಿಗಳಲ್ಲಿ 1 ರೂ. ಆಗುತ್ತದೆ. 2030ರ ವೇಳೆಗೆ ಭಾರತದಲ್ಲಿ ಖಾಸಗಿ ಕಾರು 30%, ವಾಣಿಜ್ಯ ವಾಹನಗಳಿಗೆ 70%, ಬಸ್‌ಗಳಿಗೆ 40% ಮತ್ತು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ 80% ಇವಿ ಮಾರಾಟದ ಗುರಿಯನ್ನು ಹೊಂದಿದೆ. ಪ್ರಸ್ತುತ ದೇಶದಲ್ಲಿ ಕೇವಲ 2-3 ಎಲೆಕ್ಟ್ರಿಕ್ ಕಾರುಗಳ ಬೆಲೆ 15 ಲಕ್ಷ ರೂ.ಗಿಂತ ಕಡಿಮೆಯಿದೆ. ಸಬ್ಸಿಡಿ ನೀಡುವ ಹಿನ್ನೆಲೆಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಬೆಲೆ ಈಗಾಗಲೇ ಅಸ್ತಿತ್ವದಲ್ಲಿರುವ ಪೆಟ್ರೋಲ್ ವಾಹನಗಳಿಗೆ ಸರಿ ಸಮಾನವಾಗಿದೆ ಎಂದರು.
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಎಲೆಕ್ಟ್ರಿಕ್ ಹೈವೇ ವ್ಯವಸ್ಥೆಯನ್ನು ಸ್ಥಾಪಿಸಲು ಸಂಭಾವ್ಯ ಪೈಲಟ್ ಯೋಜನೆಯನ್ನು ಯೋಜಿಸಲಾಗುತ್ತಿದೆ. ಪ್ರದೇಶದಲ್ಲಿ ಹೇರಳವಾಗಿ ಲಭ್ಯವಿರುವ ಸೌರ ಶಕ್ತಿಯ ಶಕ್ತಿಯನ್ನು ಬಳಸಿಕೊಂಡು ವಿದ್ಯುದ್ದೀಕರಿಸಬಹುದು. ಇದಲ್ಲದೇ ಇಂಧನ ಕೇಂದ್ರಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ ಎಂದರು.
ಪ್ರಸ್ತುತ, ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ನವೀಕರಿಸಬಹುದಾದ ಶಕ್ತಿ ಸಾಮರ್ಥ್ಯವನ್ನು ಹೊಂದಿದೆ. ಕಳೆದ ಎರಡು ವರ್ಷಗಳಲ್ಲಿ ಇ-ಸ್ಕೂಟರ್‌ಗಳು, ಇ-ಕಾರ್ಟ್‌ಗಳು, ಇ-ಆಟೋಗಳು, ಇ-ಬೈಸಿಕಲ್‌ಗಳಂತಹ ಸಣ್ಣ ಬ್ಯಾಟರಿ ಚಾಲಿತ ವಾಹನಗಳಿಗೆ ದೇಶವು ಹೆಚ್ಚಿದ ಬೇಡಿಕೆಯನ್ನು ಕಂಡಿದೆ. ಕೋವಿಡ್ ಪೂರ್ವದ ಅವಧಿಗೆ ಹೋಲಿಸಿದರೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮತ್ತು ಎಲೆಕ್ಟ್ರಿಕ್ ಕಾರು ಮಾರಾಟವು ಕ್ರಮವಾಗಿ 145% ಮತ್ತು 190% ರಷ್ಟು ಏರಿಕೆ ಕಂಡಿದೆ. ಇವಿಗಳ ಈ ಎರಡು ವಿಭಾಗಗಳಲ್ಲಿ ಭಾರತವು ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದರು.
Electric vehicles will cost only petrol vehicles
ಇದನ್ನೂ ಓದಿ: Helpline: ಹಿರಿಯ ನಾಗರಿಕರ ಕುಂದುಕೊರತೆ ಪರಿಹರಿಸಲು ಸಹಾಯವಾಣಿ 14567 ಆರಂಭ
ಇದನ್ನೂ ಓದಿ:Solar power: ಮನೆ ಮನೆಗೆ ಸೌರ ವಿದ್ಯುತ್ ಸೌಲಭ್ಯ
Discussion about this post