ನವದೆಹಲಿ: ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಮುಖ್ಯ ಆರ್ಥಿಕ ತಜ್ಞೆಯ ಮಹತ್ವದ ಹುದ್ದೆಯಲ್ಲಿರುವ ಭಾರತ ಮೂಲದ ಗೀತಾ ಗೋಪಿನಾಥ್ ಈ ಹುದ್ದೆಯಿಂದ ಈ ತಿಂಗಳು ವಿಮುಕ್ತಿಗೊಂಡು ತಮ್ಮ ಮೂಲ ಉದ್ಯೋಗವಾದ ಹಾರ್ವಾರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗಕ್ಕೆ ವಾಪಸಾಗಲಿದ್ದಾರೆ.
ಪ್ರತಿ ಮೂರು ತಿಂಗಳಿಗೊಮ್ಮೆ ಬಿಡುಗಡೆಯಾಗುವ ಐಎಂಎಫ್‌ನ ಜಾಗತಿಕ ಆರ್ಥಿಕ ಮುನ್ನೋಟದ ವರದಿಯನ್ನು ಸಿದ್ಧ ಪಡಿಸುವ ಹೊಣೆಯನ್ನು ಗೀತಾ ನಿಭಾಯಿಸುತ್ತಿದ್ದಾರೆ. ಇದಕ್ಕಾಗಿ ಪ್ರತಿಯೊಂದು ದೇಶದ ಮತ್ತು ಪ್ರಾದೇಶಿಕದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ದರವನ್ನು ಅವರ ತಂಡ ಅಧ್ಯಯನ ಮಾಡುತ್ತದೆ.
ಮೂರು ವರ್ಷಗಳಿಂದ ಅನುಪಮ ಸೇವೆ ಸಲ್ಲಿಸಿದ ಗೀತಾ ಅವರನ್ನು ಐಎಂಎಫ್ ನಿದರ್ದೇಶಕ ಕ್ರಿಸ್ಟಲಿನಾ ಜಾಜರ್ಜೀವಾ ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಮುಖ್ಯ ಆರ್ಥಿಕ ತಜ್ಞರ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಗೀತಾ. ಕೊರೊನಾ ಜಾಡ್ಯದ ವೇಳೆ ಸವಾಲಾಗಿದ್ದ ಜಿಡಿಪಿಯನ್ನು ನಿಖರವಾಗಿ ವಿಶ್ಲೇಷಣೆ ಮಾಡಿದ್ದಾರೆ ಎಂದು ಹೊಗಳಿದ್ದಾರೆ. ಅಂತರರಾಷ್ಟ್ರೀಯ ಹಣಕಾಸು ವಿಷಯದ ಬಗ್ಗೆ ಗೀತಾ ಅವರಿಗೆ ಇರುವ ಅಪಾರ ಜ್ಞಾನ ಹಾಗೂ ಕಿರು ಅರ್ಥಿಕ ವ್ಯವಸ್ಥೆಯಲ್ಲಿ ಅವರಿಗೆ ಇರುವ ಅನುಭವವು ಕೊರೊನಾ ಬಿಕ್ಕಟ್ಟಿನ ವೇಳೆ ಐಎಫ್‌ಐಎಗೆ ಮಹತ್ತರ ಅನುಕೂಲವನ್ನು ಮಾಡಿಕೊಟ್ಟಿತು ಎಂದು ಹೇಳಿದ್ದಾರೆ.
ಜಾಗತಿಕ ಲಸಿಕಾ ಅಭಿಯಾನದಲ್ಲೂ ಗೀತಾ ಮಹತ್ವದ ಪಾತ್ರ ವಹಿಸಿದ್ದಾರೆ. ಜಾಗತಿಕ ಹವಾಮಾನ ಬದಲಾವಣೆಯಿಂದ ಆರ್ಥಿಕತೆ ಮೇಲಾಗುವ ಪರಿಣಾಮವನ್ನು ಚೆನ್ನಾಗಿ ವಿಶ್ಲೇಷಿಸಿದ್ದಾರೆ ಎಂದು ಜಾಜರ್ಜೀವಾ ಮೆಚ್ಚುಗೆ ಮಾತನ್ನಾಡಿದ್ದಾರೆ. 2018ರ ಅಕ್ಟೋಬರ್‌ನಲ್ಲಿ ಐಎಂಎಫ್‌ಗೆ ನೇಮಕವಾದ ಗೀತಾಗೆ ಎರಡು ವರ್ಷದ ಅವಧಿ ಗೊತ್ತು ಮಾಡಲಾಗಿತ್ತು. ಹಾರ್ವಾಡ್ ವಿಶ್ವವಿದ್ಯಾಲಯ ಒಂದು ವರ್ಷ ರಜೆ ವಿಸ್ತರಣೆ ಮಾಡಿದ ಕಾರಣ ಅವರು ಮೂರು ವರ್ಷ ಸೇವೆ ಸಲ್ಲಿಸುವಂತೆ ಆಯಿತು.
1971ರಲ್ಲಿ ಕೋಲ್ಕತ್ತದಲ್ಲಿ ಜನಿಸಿದ ಗೀತಾ, ಪೋಷಕರು ಕೇರಳ ಮೂಲದವರು. ಗೀತಾರ ತಂತೆ ಗೋಪಿನಾಥ್ ಉದ್ಯೋಗದ ನಿಮಿತ್ತ ಬೇರೆ ಬೇರೆ ಕಡೆ ನೆಲೆಸಿದ್ದರಿಂದ ಅವರು ಮೈಸೂರಿನ ನಿರ್ಮಲಾ ಕಾನ್ವೆಂಟ್‌ನಲ್ಲಿ ಪ್ರಾಥಮಿಕ ಶಿಕ್ಷಣ ಕಲಿತರು. ನಂತರ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ ಗೀತಾ, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಉನ್ನತ ವ್ಯಾಸಂಗಕ್ಕೆ ಅಮೆರಿಕಕ್ಕೆ ತೆರಳಿದ ಅವರು, ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಪಿಎಚ್,ಡಿ ಪದವಿ ಗಳಿಸಿದರು. ನಂತರ ಅವರು ಹಾವಾFಡ್F ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರೊಫೆಸರ್ ಆದರು.
Geetha Gopinath to Move out of International Monetary Fund
ಇದನ್ನೂ ಓದಿ: ಉತ್ತರಾಖಂಡದ ಮೇಘಸ್ಫೋಟ, ಸತ್ತವರ ಸಂಖ್ಯೆ 47ಕ್ಕೆ ಏರಿಕೆ
ಇದನ್ನೂ ಓದಿ: Viral Vide: ಜಾಹ್ನವಿ ಕಪೂರ್‌ಗೆ ಅಪ್ಪ ಅಂದ್ರೆ ಅದೆಷ್ಟು ಪ್ರೀತಿ: ವೈರಲ್ ಆಯ್ತು ಮಗಳ ಕಾಳಜಿ
Discussion about this post