ಮೈಕ್ರೋಸಾಫ್ಟ್ ಕಂಪನಿಯ ಷೇರು ಮೌಲ್ಯದಲ್ಲಿ ಏರಿಕೆ ಕಂಡುಬಂದಿದ್ದು, ವಿಶ್ವದ ಅತಿ ಹೆಚ್ಚು ಮೌಲ್ಯವುಳ್ಳ ಕಂಪನಿಯಾಗಿ ಆ್ಯಪಲ್ ಅನ್ನು ಹಿಂದಿಕ್ಕುವತ್ತ ಸಾಗಿದೆ. ಆ್ಯಪಲ್ ಕಂಪನಿ ತ್ರೈಮಾಸಿಕ ಫಲಿತಾಂಶ ಪ್ರಕಟಿಸುವ ಒಂದು ದಿನ ಮೊದಲೇ ಈ ಬೆಳವಣಿಗೆ ನಡೆದಿದೆ.
ಮೈಕ್ರೋಸಾಫ್ಟ್ ಷೇರುಗಳು ಬುಧವಾರ ಶೇಕಡಾ 4.2ರಷ್ಟು ಏರಿಕೆ ಕಂಡು ದಾಖಲೆಯ 323.17 ಡಾಲರ್ ತಲುಪಿವೆ. ಇದರಿಂದ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ 2.426 ಟ್ರಿಲಿಯನ್ ಡಾಲರ್ ತಲುಪಿದೆ. ಆ್ಯಪಲ್‌ನ ಮಾರುಕಟ್ಟೆ ಮೌಲ್ಯ ಸದ್ಯ 2.461 ಟ್ರಿಲಿಯನ್ ಡಾಲರ್ ಎಂಬುದು ಅಂಕಿಅಂಶಗಳಿಂದ ತಿಳಿದು ಬಂದಿರುವುದಾಗಿ ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ, ಆ್ಯಪಲ್ ಷೇರುಗಳು ಶೇಕಡಾ 0.3ರಷ್ಟು ಕುಸಿತ ಕಂಡಿವೆ. ಕಂಪನಿಯ ಪೂರೈಕೆ ಸರಪಳಿ ಬಿಕ್ಕಟ್ಟು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಮೈಕ್ರೋಸಾಫ್ಟ್‌ನ ಷೇರು ಮೌಲ್ಯ ಈ ವರ್ಷ ಒಟ್ಟಾರೆಯಾಗಿ ಶೇ 45ರಷ್ಟು ಏರಿಕೆ ಕಂಡಿದೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ಕ್ಲೌಡ್ ಆಧಾರಿತ ಸೇವೆಗಳಿಗೆ ಬೇಡಿಕೆ ಹೆಚ್ಚಾಗಿರುವುದೂ ಇದಕ್ಕೆ ಕಾರಣ ಎನ್ನಲಾಗಿದೆ. ಆ್ಯಪಲ್‌ನ ಷೇರುಗಳು ಮೌಲ್ಯ ಈ ವರ್ಷ ಒಟ್ಟು ಶೇ 12ರಷ್ಟು ಏರಿಕೆ ಕಂಡಿದೆ.
2020ರಲ್ಲಿ ಆ್ಯಪಲ್‌ನ ಷೇರು ಮಾರುಕಟ್ಟೆ ಮೌಲ್ಯ 2010ರಲ್ಲಿ ಮೈಕ್ರೋಸಾಫ್ಟ್ ಅನ್ನು ಮೀರಿಸಿತ್ತು. ಎರಡೂ ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಮೌಲ್ಯಯುತ ಕಂಪನಿಗಳಾಗಿ ಗುರುತಿಸಿಕೊಂಡಿವೆ.
ಇನ್ನಷ್ಟು ಸುದ್ದಿಗಳು….
Fuel Price: ನಿಯಂತ್ರಣಕ್ಕೆ ಬಾರದ ಪೆಟ್ರೋಲ್-ಡೀಸೆಲ್ ಬೆಲೆ
Auto Fare: ಬೆಂಗಳೂರಿಗರಿಗೆ ಶೀಘ್ರದಲ್ಲೇ ಆಟೋ ಪ್ರಯಾಣ ದರ ಹೆಚ್ಚಳ….?
Parking Fee: ನ.1 ರಿಂದ ಎಂಜಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಶುಲ್ಕ ಜಾರಿ
Discussion about this post