ವ್ಯಾಟಿಕನ್: ಪ್ರಧಾನಿ ಮೋದಿ ವ್ಯಾಟಿಕನ್ ನಗರಕ್ಕೆ ತೆರಳಿ, ಅಲ್ಲಿ ಕ್ರೈಸ್ತರ ಪರಮೋಚ್ಛ ಧರ್ಮಗುರು, ವಿಶ್ವದ ಶಾಂತಿದೂತ ಪೋಪ್ ಫ್ರಾನ್ಸಿಸ್ ನ್ನು ಭೇಟಿಯಾದರು. ಭಾರತಕ್ಕೆ ಬರುವಂತೆ ಅವರಿಗೆ ಆಮಂತ್ರಣ ನೀಡಿದರು.
ಇವರಿಬ್ಬರ ಮಧ್ಯೆ ೨೦ ನಿಮಿಷಗಳ ಮಾತುಕತೆ ನಿಗದಿಯಾಗಿತ್ತು. ಆದರೆ ಸುಮಾರು ೧ ತಾಸು ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ ಮತ್ತು ಪೋಪ್ ಫ್ರಾನ್ಸಿಸ್ ಅವರು ಇಂದು, ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ಹೋರಾಡುವ ಬಗ್ಗೆ, ಬಡತನ ನಿರ್ಮೂಲನ ಮಾಡಲು ಇರುಬಹುದಾದ ವಿಧಾನಗಳ ಕುರಿತಾಗಿ ಚರ್ಚಿಸಿದ್ದಾರೆ.
ಈ ಭೂಮಿ ಮೇಲೆ ಇನ್ನಷ್ಟು ಉತ್ತಮವಾಗಿ ಜೀವನ ನಡೆಸುವ ಕ್ರಮಗಳ ಬಗ್ಗೆಯೂ ವ್ಯಾಪಕವಾಗಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಅಂದಿನ ಪೋಪ್ ಜಾನ್ ಪೌಲ್- II ಅವರನ್ನು ಭೇಟಿ ನೀಡಿದ್ದರು. ಅದಾದ ಮೇಲೆ ಪೋಪ್ ಭೇಟಿ ಈಗಲೇ ಆಗಿದೆ. ಹಾಗೇ, ಪ್ರಧಾನಿ ಮೋದಿ ಮತ್ತು ಪೋಪ್ ಫ್ರಾನ್ಸಿಸ್ ಅವರ ಮೊದಲ ಭೇಟಿಯಾಗಿದೆ.
ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನಾನಿಂದು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿ, ವಿವಿಧ ವಿಷಯಗಳನ್ನು ಚರ್ಚಿಸುವ ಅವಕಾಶ ಸಿಕ್ಕಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ: e Paper – October 31, 2021
ಇದನ್ನೂ ಓದಿ: suicide: ಕಾಫಿನಾಡಿನಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿ ಆತ್ಮಹತ್ಯೆ
PM Modi meets Pope Francis
Discussion about this post