ಬೆಂಗಳೂರು: ದೇಶದ ಒಟ್ಟು ಜನಸಂಖ್ಯೆಯ ಕೇವಲ 21 ಪ್ರತಿಶತ ಜನರು ಎರಡೂ ಕೋವಿಡ್ ಲಸಿಕೆಗಳನ್ನು ಪಡೆದಿರುವಾಗ ನೂರು ಕೋಟಿ ಲಸಿಕೆ ಹಾಕಿದ ಸಾಧನೆಯನ್ನು ಯಾವ ಪುರುಷಾರ್ಥಕ್ಕಾಗಿ ಬಿಜೆಪಿ ಸಂಭ್ರಮಿಸುತ್ತಿದೆ ಎಂದು ಶುಕ್ರವಾರ ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದರು. ತಮ್ಮ ಸರಣಿ ಟ್ವೀಟ್‌ಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ “ಇಲ್ಲಿಯವರೆಗೆ ದೇಶದಲ್ಲಿ ಕೇವಲ 290 ಮಿಲಿಯನ್ ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದು 420 ಮಿಲಿಯನ್ ಜನರು ಕೇವಲ ಒಂದೇ ಒಂದು ಡೋಸ್ ಲಸಿಕೆ ಪಡೆದಿದ್ದಾರಲ್ಲದೆ ಉಳಿದ 620 ಮಿಲಿಯನ್ ಜನರಿಗೆ ಲಸಿಕೆಯನ್ನೇ ಹಾಕಿಲ್ಲ ಎಂದು ಚುಚ್ಚಿದ್ದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಇದಕ್ಕೆ ಉತ್ತರಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಇಲ್ಲಿಯವರೆಗೆ ದೇಶದ 31 ಪ್ರತಿಶತ ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದು, ಇಡೀ ವಿಶ್ವದಲ್ಲೇ 7 ಬಿಲಿಯನ್ ಲಸಿಕೆಗಳನ್ನು ನೀಡಲಾಗಿದ್ದು ಅದರಲ್ಲಿ ಭಾರತ ದೇಶವೊಂದರಲ್ಲೇ 1 ಬಿಲಿಯನ್ ಲಸಿಕೆಗಳನ್ನು ನೀಡಲಾಗಿದೆಯೆಂದರು. ಇದು ನಿಮಗೆ ಹೆಮ್ಮೆ ಪಡುವ ವಿಷಯವಲ್ಲವೇ ಎಂದು ಸಿದ್ಧರಾಮಯ್ಯನವರನ್ನು ಪ್ರಶ್ನಿಸಿದರು.
ಕೇಂದ್ರ ಸಚಿವರು ಮುಂದುವರೆದು ಮಾತನಾಡುತ್ತಾ ಕೆಲವು ಅಭಿವೃದ್ಧಿ ಹೊಂದದ ರಾಷ್ಟ್ರಗಳಲ್ಲೂ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರು ಹಿಂಜರಿಯುತ್ತಿದ್ದು ನಮ್ಮ ನಾಯಕರು ಸತತವಾಗಿ ಜನಸಾಮಾನ್ಯರಿಗೆ ತಿಳುವಳಿಕೆ ನೀಡಿ ಲಸಿಕೆ ಹಾಕಿಸಿಕೊಳ್ಳು ಪ್ರೋತ್ಸಾಹ ನೀಡಿದ್ದರಿಂದಾಗಿ ನಾವು ಈ ಸಾಧನೆ ಮಾಡಲು ಸಾಧ್ಯವಾಗಿದೆಯೆಂದರು. ಅಷ್ಟೇ ಅಲ್ಲದೇ, ಬೇರೆ ದೇಶಗಳ ಮೇಲೆ ಅವಲಂಬಿತರಾಗಿ ನಮ್ಮ ದೇಶದಲ್ಲೇ ಲಸಿಕೆಯನ್ನು ತಯಾರಿಸಿಕೊಂಡಿದ್ದು ಕೂಡ ಒಂದು ದೊಡ್ಡ ಸಾಧನೆಯೇ ಎಂದೂ ಅವರು ಹೇಳಿದರು.
ಅಕ್ಟೋಬರ್ 21ರಂದು ನೂರು ಕೋಟಿ ಲಸಿಕೆಗಳನ್ನು ಹಾಕಿದ ಸಾಧನೆ ಮಾಡಿದ್ದ ಭಾರತ ಚೀನಾ ದೇಶದ ನಂತರ ಈ ಸಾಧನೆ ಮಾಡಿದ ಎರಡನೇ ದೇಶವಾಗಿತ್ತು. ಇಲ್ಲಿಯವರೆಗೆ ಅಧಿಕೃತ ವರದಿಗಳ ಪ್ರಕಾರ ಒಟ್ಟು 1,013,028,411 ಲಸಿಕೆಗಳನ್ನು ದೇಶದಲ್ಲಿ ನೀಡಿದ್ದು ಇದರಲ್ಲಿ 712,413,356 ಜನರು ತಮ್ಮ ಪ್ರಥಮ ಲಸಿಕಯನ್ನು ಪಡೆದುಕೊಂಡಿದ್ದು ಉಳಿದ 300,615,055 ಜನರು ಎರಡೂ ಡೋಸ್ ಲಸಿಕೆಗಳನ್ನು ಪಡೆದುಕೊಂಡಿದ್ದಾರೆ.
Pralhad Joshi asks Ex-CM Siddharamaiah is he proud of India or not after his jibe on one hundred crore vaccinations
ಇದನ್ನೂ ಓದಿ: ಗುಜರಾತ್ ನೂತನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್
ಇದನ್ನೂ ಓದಿ: ಇಬ್ಬರು ಧೀಮಂತ ನಾಯಕರ ತ್ಯಾಗ-ಬಲಿದಾನ ಸ್ಮರಿಸಬೇಕಾದ ದಿನ: ಸಿದ್ದರಾಮಯ್ಯ
Discussion about this post