ವಿಜಯಪುರ: ಶನಿವಾರ ಸೆ.೪ರ ನಡುರಾತ್ರಿ ೧೧.೪೭ ಮತ್ತು ೧೧.೪೮ ಕ್ಕೆ ಸತತ ಎರಡು ಭಾರಿ ದೊಡ್ಡ ಪ್ರಮಾಣದ ಭೂಕಂಪನ ಉಂಟಾಗಿದೆ. ಭೂಮಿ ಕಂಪಿಸಿದ ಸಮಯ ಭಯಭೀತ ಜನರು ಮನೆಯಿಂದ ಹೊರಗೆ ಓಡಿ ಹೋಗಿದ್ದಾರೆ.
ಕಳೆದ ತಿಂಗಳು ಆಗಸ್ಟ್ ನಲ್ಲೂ ಸಹ ಇದೇ ರೀತಿ ಪ್ರಸಂಗ ನಡೆದಿತ್ತು ಎಂಬುದನ್ನು ಕನ್ನಡ ನಾಡಿ ವರದಿ ಮಾಡಿತ್ತು. ವಿಜಯಪುರ ಜಿಲ್ಲೆಯ ತ್ರಿಕೂಟಾ, ಬಸವನ ಬಾಗೇವಾಡಿ, ಕೊಲ್ಹಾರ,ನಿಡಗುಂದಿ, ಮನಗೂಳಿ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿ ಆಗಾಗ ಇಂಥ ಅನುಭವಗಳು ಆಗುತ್ತಿವೆ.
ಭೂವಿಜ್ಞಾನಿಗಳು ಈ ಕುರಿತು ಹೆಚ್ಚಿನ ಅಧ್ಯಯನ ನಡೆಸಿ, ಜನತೆಯ ಭಯ ನಿವಾರಿಸುವ ಅಗತ್ಯವಿದೆ.
Discussion about this post