ಜೈಪುರ: ಪಾಕ್ ದೇಶದ ಐಎಸ್ ಐಗೆ ಭಾರತೀಯ ಸೈನ್ಯದ ಗೌಪ್ಯ ಮಾಹಿತಿಗಳನ್ನು ರವಾನೆ ಮಾಡುತ್ತಿದ್ದ ಆರೋಪದ ಮೇರೆಗೆ ಗುಪ್ತಚರ ಅಧಿಕಾರಿಗಳು ಭಾರತೀಯ ಅಂಚೆ ಕಚೇರಿ ನೌಕರನೊಬ್ಬನನ್ನು ಬಂಧಿಸಿದ್ದಾರೆ.
ಜೈಪುರ ರೈಲ್ವೆ ನಿಲ್ದಾಣದಲ್ಲಿದ್ದ ಅಂಚೆ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭರತ್ ಗೋಡಾರ (೨೭) ಬಂಧಿತ ವ್ಯಕ್ತಿ. ಈತ ಕಳೆದ ಆರು ತಿಂಗಳಿನಿಂದ ಪಾಕಿಸ್ತಾನಕ್ಕೆ ತಾಯ್ನಾಡಿನ ಸೈನ್ಯದ ಮಾಹಿತಿಯನ್ನು ಒದಗಿಸುವ ದೇಶದ್ರೋಹದ ಕೆಲಸ ಮಾಡಿದ್ದ.
ಪೊಸ್ಟ್ ಆಫೀಸ್ ನಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ಮಾಡ್ತಿದ್ದ ಈತನ ಮೇಲೆ ಅನುಮಾನ ಬಂದು ಮಾಹಿತಿ ಕಲೆ ಹಾಕಿತ್ತು ಗುಪ್ತ ಚರ ಇಲಾಖೆ. ಈಗ ಹನಿಟ್ರ್ಯಾಪ್ ಮೂಲಕ ಈತನನ್ನು ಬಲೆಗೆ ಹಾಕಿಕೊಂಡಿತ್ತು ಪಾಕ್ ಎಂದು ಮೂಲಗಳು ಹೇಳಿವೆ.
Discussion about this post