ಕಾಬೂಲ್: ವಿಶ್ವ ಬ್ಯಾಂಕ್ ಅಫ್ಘಾನಿಸ್ತಾನಕ್ಕೆ ೨೦೦೨ರಿಂದ ೫.೩ ಬಿಲಿಯನ್ ಡಾಲರ್ ಹಣ ನೀಡಿತ್ತು. ಇತ್ತೀಚೆಗೆ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಅಫ್ಘಾನಿಸ್ತಾನಕ್ಕೆ ಧನಸಹಾಯ ನೀಡಲು ನಿರಾಕರಿಸಿತ್ತು. ಈಗ ವಿಶ್ವಬ್ಯಾಂಕ್ ಕೂಡಾ IMF ಹಾದಿಯನ್ನೇ ಹಿಡಿದಿದ್ದು, ಅಫ್ಘಾನಿಸ್ತಾನಕ್ಕೆ ಆರ್ಥಿಕ ಸಂಕಷ್ಟ ಎದುರಾಗಲಿದೆ.
ತಾಲಿಬಾನಿಗಳ ಅತ್ಯಾಚಾರ, ಅನಾಚಾರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ದೇಶಿಯರು ನರಕಯಾತನೆ ಅನುಭವಿಸುತ್ತಿದ್ದಾರೆ. ವಿಶ್ವದ ಇತರೆ ರಾಷ್ಟ್ರಗಳ ತಮ್ಮ ಪ್ರಜೆಗಳನ್ನು ಸ್ವದೇಶಕ್ಕೆ ಕರೆತರಲು ಎಣಗುತ್ತಿವೆ. ಇದೇ ಸಂದರ್ಭದಲ್ಲಿ ತಾಲಿಬಾನಿಗಳಿಗೆ ವಿಶ್ವಬ್ಯಾಂಕ್ ಆರ್ಥಿಕ ನೆರವಿಗೆ ಕೋಕ್ ನೀಡಿದೆ.
ಯಾವುದೇ ಆರ್ಥಿಕ ನೆರವು ನೀಡಿದರೂ ಸಹ ಅದು ತಾಲಿಬಾನಿಗಳ ವಶವಾಗಲಿರುವುದು ಎಲ್ಲರಿಗೂ ಆತಂಕದ ವಿಚಾರ.
Discussion about this post