ಬೆಂಗಳೂರು: ಕಲಬುರ್ಗಿ ಜಿಲ್ಲೆಯ ಎರಡು ಊರುಗಳಲ್ಲಿ ಮಂಗಳವಾರ ಬೆಳಿಗ್ಗೆ ಭೂಮಿ ಕಂಪಿಸಿದದ್ದು, ಕಳೆದ ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಮೂರನೇ ಭೂಕಂಪ ಇದಾಗಿದೆ. ಈ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ಆರು ಭೂಕಂಪನಗಳು ಸಂಭವಿಸಿರುವುದು ಕಳವಳ ಉಂಟು ಮಾಡಿದೆ.
ಕಲಬುರ್ಗಿ ಬಳಿಯ ಗಡಿಕೇಶ್ವರ ಗ್ರಾಮದಲ್ಲಿ ರ 3.0 ತೀವ್ರತೆಯ ಭೂಕಂಪನ ಬೆಳಗ್ಗೆ 9.55ರ ಸುಮಾರಿಗೆ ಸಂಭವಿಸಿದೆ. ಚಿಂಚೋಳಿ ತಾಲೂಕಿನ ಕುಪನೂರು ಗ್ರಾಮದಲ್ಲಿ 3.5 ತೀವ್ರತೆಯ ಕಂಪನ ಉಂಟಾಗಿದೆ. ಈ ಭೂಕಂಪನಗಳ ಕೇಂದ್ರ ಬಿಂದು ಈ ಗ್ರಾಮಗಳ ಒಂದೂವರೆ ಕಿ.ಮೀ. ಫಾಸಲೆಯಲ್ಲಿ ಕಂಡು ಬಂದಿದೆ. ಗಡಿಕೇಶ್ವರದಲ್ಲಿ ಸೋಮವಾರ ರಾತ್ರಿ ಕೂಡ ಲಘು ಭೂಕಂಪನ ಆಗಿದ್ದು, ಜನರು ದಿಗಿಲುಗೊಂಡು ಮನೆಯಿಂದ ಹೊರಗೋಡಿ ಬಂದರು. ಇದರಿಂದ ಯಾವುದೇ ಹಾನಿ, ಜೀವ ಅಪಾಯ ಉಂಟಾಗಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.
ಅಕ್ಟೋಬರ್ 1 ಮತ್ತು 5ರಂದು ಬಸವಕಲ್ಯಾಣದಲ್ಲಿ ಎರಡು ಭೂಕಂಪನ ಮತ್ತು ಕಲಬುರ್ಗಿಯಲ್ಲಿ ಅ.9, 11 ಮತ್ತು 12ರಂದು ಎರಡು ಸಲ ಭೂಮಿ ಕಂಪಿಸಿದೆ. ಈ ಎಲ್ಲಾ ಭೂಂಕಪನಗಳು ತೀವ್ರವಾಗಿಲ್ಲ. ಆದರೆ, ಸಾಧಾರಣ ಪ್ರಮಾಣಕ್ಕಿಂತ ತುಸು ಅಧಿಕವಾಗಿದೆ. ಪದೇ ಪದೆ ಕಂಪನ ಆಗುತ್ತಿರುವುದರಿಂದ ಭೂವಿಜ್ಞಾನಿಗಳ ಜತೆ ಸಭೆ ನಡೆಸಲಾಗುವುದು ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಹೇಳಿದ್ದಾರೆ.
ಭೂಕಂಪನವು 50ರಿಂದ 60 ಕಿ.ಮೀ. ಪರಿಧಿಯಲ್ಲೇ ಸಂಭವಿಸುತ್ತಿದೆ. ಇಂತಹ ಕಂಪನದಿಂದ ಅಪಾಯ ಉಂಟಾಗುವುದಿಲ್ಲ. ಆದರೂ ಉತ್ತರ ಕರ್ನಾಟಕದಲ್ಲಿ ನಮ್ಮ ತಂಡವನ್ನು ಜಾಗೃತರಾಗಿರಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಉತ್ತರ ಕನರ್ನಾಟಕಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಲಾತೂರ್ನಲ್ಲಿ 1993ರಲ್ಲಿ ಭೀಕರ ಭೂಕಂಪನ ಸಂಭವಿಸಿತ್ತು. ನೂರಾರು ಜನರು ಸಾವನ್ನಪ್ಪಿದ್ದರು.
Karnataka News 4 Earthquakes In 3 Days Six Since October 1 Raises Concern
ಇದನ್ನೂ ಓದಿ: ಕಲಬುರಗಿ-ವಿಜಯಪುರದಲ್ಲಿ ಭೂಕಂಪನ
ಇದನ್ನೂ ಓದಿ: ವಿಜಯಪುರ ಸೇರಿದಂತೆ ಹಲವೆಡೆ ಭೂಕಂಪನ: ಭಯದಿಂದ ತತ್ತರಿಸಿದ ಜನತೆ
Discussion about this post