ಧರ್ಮಶಾಲಾ, ನವೆಂಬರ್ 15, 2021: ಇಂದು ಬೆಳಿಗ್ಗೆ ಸುಮಾರು 11:14ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು ಕಂಪನದ ಕೇಂದ್ರವು ಇಲ್ಲಿಂದ ಮಾಯುವ್ಯಕ್ಕೆ ಸುಮಾರು 74 ಕಿ.ಮೀ. ದೂರದಲ್ಲಿ ಭೂಮಿಯಿಂದ 5 ಕಿ.ಮೀ. ಆಳದಲ್ಲಿ ಸ್ಥಿತವಾಗಿತ್ತೆಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರವು ತಿಳಿಸಿದೆ.
ರಿಕ್ಟರ್ ಮಾಪಕದಲ್ಲಿ 3.4ರ ತೀವ್ರತೆ ದಾಖಲಾಗಿದೆಯೆಂದು ವರದಿ ತಿಳಿಸಿದ್ದು ಈ ಭೂಕಂಪನದಿಂದ ಇಲ್ಲಿಯವರೆಗೂ ಯಾವದೇ ಪ್ರಾಣಹಾನಿಯಾಗಲೀ ಅಥವಾ ಅಸ್ತಿಪಾಸ್ತಿಗಳ ಹಾನಿಯಾಗಲೀ ವರದಿಯಾಗಿಲ್ಲ.
ಇದಕ್ಕೂ ಮೊದಲು ಕಳೆದ ನವೆಂಬರ್ 9ರ ಮಂಗಳವಾರ ಕೂಡ ಹಿಮಾಚಲ ಪ್ರದೇಶದ ಕಿನ್ನೌರ್ ಎಂಬಲ್ಲಿಯೂ ಭೂಕಂಪ ಸಂಭವಿಸಿದ್ದು ಅದು ರಿಕ್ಟರ್ ಮಾಪಕದಲ್ಲಿ 4.4ರ ತೀವ್ರತೆಯನ್ನು ಹೊಂದಿತ್ತೆಂದೂ ಕೇಂದ್ರವು ತಿಳಿಸಿತ್ತು.
ನೆನ್ನೆಯಷ್ಟೇ ಆಂಧ್ರದ ವಿಶಾಖಪಟ್ಟಣಂನಲ್ಲೂ ಸಹ ಲಘು ಭೂಕಂಪನದ ವರದಿಯಾಗಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದ್ದು ಅದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 1.8 ಇತ್ತು.
Earthquake of Magnitude:3.4, Occurred on 15-11-2021, 11:14:21 IST, Lat: 32.86 & Long: 76.11, Depth: 5 Km ,Location: 74km NNW of Dharamshala, Himachal Pradesh, India for more information download the BhooKamp App https://t.co/10OaqPMQZg pic.twitter.com/9mFS6JrWlN
— National Center for Seismology (@NCS_Earthquake) November 15, 2021
Mild Earthquake Recorded in Himachal Pradesh with the epicenter located 74 km northwest of Dharmashala
ಇದನ್ನೂ ಓದಿ: Bhoomi development Society : ಭೂಮಿ ಸಂಸ್ಥೆಗೆ ಸಸ್ಯ ತಳಿ ಸಂರಕ್ಷಣಾ ರಾಷ್ಟ್ರೀಯ ಪುರಸ್ಕಾರ
ಇದನ್ನೂ ಓದಿ: Land Consumption : ಭೂ ಕಬಳಿಕೆ ಹುನ್ನಾರ: ಅಧಿಕಾರಿಗಳಿಂದ ಅನಧೀಕೃತ ಶೆಡ್‌ಗಳ ತೆರವು
Discussion about this post