ಚಿಕ್ಕಮಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಂಗಳವಾರವೂ ಮಳೆ ಮುಂದುವರೆಯಲಿದ್ದು ಮೋಡ ಕವಿದ ವಾತಾವರಣ ಅಥವಾ ತುಂತುರು ಮಳೆ ವ್ಯಾಪಕವಾಗಿರಲಿದೆ.
ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು ಉಡುಪಿಯಲ್ಲಿ ಮೋಡ ಕವಿದ ವಾತಾವರಣ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮನ್ಸೂಚನೆ ಇದೆ.
ಕೊಡಗಿನಲ್ಲಿ ಸಾಧಾರಣ ಮಳೆಯ ಮುನ್ಸೂಚನೆಯಿದ್ದು ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಪಾವಗಡ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಧಾರವಾಡ, ಬೆಳಗಾವಿ, ಹಾಗೂ ಬಾಗಲಕೋಟೆ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯಾಗುವ ಮನ್ಸೂಚನೆ ನೀಡಲಾಗಿದೆ.
ಕರ್ನಾಟಕದ ಉಳಿದ ಭಾಗಗಳಲ್ಲಿ ಬಿಸಿಲು ಹಾಗೂ ಆಗಾಗ ಸ್ವಲ್ಪ ಮೋಡ ಕವಿದ ವಾತಾವರಣದ ಮುನ್ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಮುಂಗಾರು ಮಾರುತಗಳು ಪ್ರಬಲವಾಗಿಯೇ ಮುಂದುವರೆದಿದ್ದು ಇದರ ಜೊತೆಗೆ ಅರಬ್ಬಿ ಸಮುದ್ರದಲ್ಲು ವಾಯುಭಾರ ಕುಸಿತದ ಪ್ರಭಾವವೂ ಉಂಟಾಗಲಿದೆ. ಅಕ್ಟೋಬರ್ 13ರ ವೇಳೆಗೆ ವಾಯುಭಾರ ಕುಸಿತವು ಪ್ರಬಲವಾಗುವ ಸಾಧ್ಯತೆಯಿದ್ದು ಇದೇ ವೇಳೆಗೆ ಬಂಗಾಳಕೊಲ್ಲಿಯಲ್ಲೂ ವಾಯುಭಾರ ಕುಸಿತ ಉಂಟಾಗುವ ಮುನ್ಸೂಚನೆಯಿದೆ. ಇದರಿಂದ ಕರ್ನಾಟಕ ಕರಾವಳಿ ಭಾಗದ ಮಳೆಯ ಪ್ರಮಾಣದಲ್ಲಿ ಹೆಚ್ಚಿನ ವ್ಯತ್ಯಾಸವಾಗದಿದ್ದರೂ ದಕ್ಷಿಣ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಮಳೆ ಚುರುಕಾಗುವ ಮುನ್ಸೂಚನೆ ಹವಾಮಾನ ಇಲಾಖೆಯಿಂದ ದೊರೆತಿದೆ.
Rain and cloudy weather to continue for some more time
ಇದನ್ನೂ ಓದಿ: Skin Care: ಬಂತು ಚಳಿಗಾಲ: ಒಣ ಚರ್ಮ, ತುರಿಕೆ ಸಮಸ್ಯೆಗೆ ವಿಟಮಿನ್ ಸಿ ಪರಿಹಾರ
ಇದನ್ನೂ ಓದಿ: Video: ಧಾರಾಕಾರ ಮಳೆಗೆ ನಲುಗಿದ ಹೈದರಾಬಾದ್
Discussion about this post