ಸಿಡ್ನಿ: ರಾಹುಲ್ ದ್ರಾವಿಡ್ ಅವರು ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆ ಅಲಂಕರಿಸಿರುವುದು ಅಚ್ಚರಿ ಮೂಡಿಸಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ, ಖ್ಯಾತ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಸರಣಿಯೊಂದಿಗೆ ಮುಖ್ಯ ಕೋಚ್ ಆಗಿ ದ್ರಾವಿಡ್ ಅವಧಿ ಆರಂಭಗೊಂಡಿದ್ದು, ಮೊದಲ ಟ್ವೆಂಟಿ-20 ಪಂದ್ಯದಲ್ಲೇ ಭಾರತವು 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಇದರ ಬೆನ್ನಲ್ಲೇ ದ್ರಾವಿಡ್ ಅವರು ಕೋಚ್ ಹುದ್ದೆ ಅಲಂಕರಿಸಿರುವ ಬಗ್ಗೆ ಪಾಂಟಿಂಗ್ ಪ್ರತಿಕ್ರಿಯಿಸಿದ್ದಾರೆ.
ಓದಿ: ದ್ರಾವಿಡ್ ಕೋಚಿಂಗ್ ಶೈಲಿಯ ಬಗ್ಗೆ ಈಗಲೇ ಏನೂ ಹೇಳಲಾಗದು: ಆರ್.ಅಶ್ವಿನ್
‘ದಿ ಗ್ರೇಡ್ ಕ್ರಿಕೆಟರ್ಸ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು, ‘ದ್ರಾವಿಡ್ ಅವರು ಆ ಜವಾಬ್ದಾರಿ ವಹಿಸಿಕೊಂಡಿರುವುದು ನನ್ನಲ್ಲಿ ಅಚ್ಚರಿ ಮೂಡಿಸಿದೆ. 19 ವರ್ಷದ ಒಳಗಿನವರ ತಂಡದ ಕೋಚ್ ಆಗಿ ಅವರು ಎಷ್ಟು ಸಂತಸದಿಂದ ಇದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಕೌಟುಂಬಿಕ ಜೀವನದ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ ಸಣ್ಣ ವಯಸ್ಸಿನ ಮಕ್ಕಳಿದ್ದಾರೆ ಎಂಬುದರ ಅರಿವಿದೆ. ಹೀಗಾಗಿ ನನಗೆ ಅಚ್ಚರಿಯಾಯಿತು ಅಷ್ಟೆ. ಆದರೆ ಟೀಂ ಇಂಡಿಯಾಕ್ಕೆ ಸರಿಯಾದ ಕೋಚ್ ದೊರೆತಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿರುವುದಂತೂ ನಿಜ’ ಎಂದು ಹೇಳಿದ್ದಾರೆ.
ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ತಮ್ಮನ್ನೂ ಸಂಪರ್ಕಿಸಲಾಗಿತ್ತು. ಆದರೆ, ಅದನ್ನು ತಿರಸ್ಕರಿಸಿದ್ದಾಗಿಯೂ ಅವರು ತಿಳಿಸಿದ್ದಾರೆ.
‘ಮುಖ್ಯ ಕೋಚ್ ವಿಚಾರವಾಗಿ ಐಪಿಎಲ್ ಟೂರ್ನಿ ಸಂದರ್ಭದಲ್ಲಿ ಹಲವರ ಜತೆ ಚರ್ಚಿಸಿದ್ದೆ. ಆದರೆ ಅಷ್ಟು ಸಮಯ ಹೊಂದಿಸುವುದು ನನ್ನಿಂದಾಗದು ಎಂದು ಹೇಳಿದ್ದೆ’ ಎಂದು ಅವರು ಹೇಳಿದ್ದಾರೆ.
ಪಾಂಟಿಂಗ್ ಅವರು ಐಪಿಎಲ್‌ನಲ್ಲಿ 2021ರ ಅವಧಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ICC: ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷತೆಯ ಜೊತೆಗೆ ಮತ್ತೊಂದು ದೊಡ್ಡ ಪದವಿಯನ್ನೂ ಅಲಂಕರಿಸಲಿರುವ ಸೌರವ್ ಗಂಗೂಲಿ
India win big: ಟಿ20 ಸರಣಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು
ಟೀಂ ಇಂಡಿಯಾದಲ್ಲಿ ಹೊಸ ಸಂಸ್ಕೃತಿ ಹುಟ್ಟುಹಾಕಲಿದ್ದಾರೆ ದ್ರಾವಿಡ್ ಎಂದ ರಾಹುಲ್: ಏನದು?
Discussion about this post