ನವದೆಹಲಿ: ಭಾರತಕ್ಕೆ ಮರಳಿದ ಪ್ಯಾರಾಲಿಂಪಿಕ್ಸ್ ಪದಕ ವಿಜೇತರನ್ನು ಸನ್ಮಾನಿಸುವ ಸಂದರ್ಭದಲ್ಲಿ ಕ್ರೀಡಾ ಸಚಿವ ದೇವೇಂದ್ರ ಬಜಾರಿಯಾ ಅವರು ಕ್ರಿಕೆಟ್ ನಷ್ಟೇ ಜನಪ್ರಿಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಗೆದ್ದು ಬಂದ ಜಾವೆಲಿನ್ ಎಸೆತಗಾರರಾದ ಸುಮಿತ್ ಆಂಟಿಲ್ ಮತ್ತು ದೇವೇಂದ್ ಬಜಾರಿಯಾ ಅವರನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸನ್ಮಾನಿಸಿದರು.
ಒಲಿಂಪಿಕ್ಸ್ ನಲ್ಲಿ ಚಿನ್ನದ ಚೋಪ್ರಾನಂತೆಯೇ ಪ್ಯಾರಾಲಿಂಪಿಕ್ಸ್ ಸುಮಿತ್, ಬಜಾರಿಯಾ, ಸುಂದರ್ ಸಿಂಗ್ ಗುರ್ಜರ್ ಅವರು ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚು ಜಯಿಸಿದ್ದರು. ಇದೇ ವೇಳೆ ಡಿಸ್ಕಸ್ ಥ್ರೋ, ಹೈಜಂಪ್ ನಲ್ಲಿ ಪದಕ ಗೆದ್ದ ಯೋಗೇಶ್ ಕಥುನಿಯ ಮತ್ತು ಶರದ್ ಕುಮಾರ್ ಅವರಿಗೂ ಸನ್ಮಾನಿಸಲಾಯಿತು.
Discussion about this post