ಟೋಕಿಯೋ: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಇಂದು ಭಾರತ ಎರಡು ಪದಕ ಬಾಚಿದ್ದು, P4 ಮಿಶ್ರ 50 ಮೀಟರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಚಿನ್ನಕ್ಕೆ ಮತ್ತು ಸಿಂಗ್ರಾಜ್ ಬೆಳ್ಳಿಗೆ ಮುತ್ತಿಕ್ಕಿದ್ದಾರೆ.
ಇಲ್ಲಿನ ಅಸಾಕ ಶೂಟಿಂಗ್ ರೇಂಜ್‌ನಲ್ಲಿ ಶನಿವಾರ ಬೆಳಗ್ಗೆ ನಡೆದ ಮಿಶ್ರ 50 ಮೀಟರ್ SH 1 ಅಂತಿಮ ಸುತ್ತಿನಲ್ಲಿ 19ರ ಪ್ರಾಯದ ಮನೀಷ್ ನರ್ವಾಲ್ 218.2 ಅಂಕಗಳನ್ನು ಪಡೆದು ಪ್ಯಾರಾಲಿಂಪಿಕ್ಸ್ ದಾಖಲೆಯ ಜೊತೆಗೆ ಚಿನ್ನದ ಪದಕವನ್ನು ಗೆದ್ದುಕೊಂಡರು.
ಇದೇ ಸ್ಪರ್ಧೆಯಲ್ಲಿ 216.7 ಪಾಯಿಂಟ್ಸ್ ಪಡೆದು ಎರಡನೇ ಸ್ಥಾನ ಪಡೆದ ಸಿಂಗರಾಜ್ ಬೆಳ್ಳಿ ಪದಕ ಗೆದ್ದಿದ್ದಾರೆ. ರಷ್ಯಾದ ಸೆರ್ಗೆ ಮಾಲಿಶೇವ್ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
50 ಮೀಟರ್ SH 1 ಅಂತಿಮ ಸುತ್ತಿನಲ್ಲಿ ಮನೀಷ್ ನರ್ವಾಲ್ ಆರಂಭಿಕ 10 ಶಾಟ್‌ಗಳಲ್ಲಿ 92.1 ಅಂಕಗಳೊಂದಿಗೆ ಮುನ್ನಡೆ ಸಾಧಿಸಿದ್ದರು. ಆದರೆ, ಅರ್ಹತಾ ಸುತ್ತಿನಲ್ಲಿ 7ನೇ ಸ್ಥಾನ ಪಡೆದಿದ್ದ ಮನೀಷ್ ನರ್ವಾಲ್ 87.2 ಪಾಯಿಂಟ್ಸ್ ಕಲೆ ಹಾಕುವ ಮೂಲಕ ಹಿನ್ನಡೆ ಹೊಂದಿದ್ದರು.
18ನೇ ಶಾಟ್ ಬಳಿಕ ಮನೀಷ್ ನರ್ವಾಲ್ ಅವರು ಅನಿರೀಕ್ಷಿತವಾಗಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದರು. ಆದರೆ, 19 ಹಾಗೂ 20ನೇ ಶಾಟ್‌ಗಳಲ್ಲಿ 19ರ ಪ್ರಾಯದ ಶೂಟರ್ ಕ್ರಮವಾಗಿ 10.8 ಹಾಗೂ 10.5 ಪಾಯಿಂಟ್ಸ್ ಕಲೆ ಹಾಕುವ ಮೂಲಕ ಭಾರತ ದೇಶದ ಸಿಂಗರಾಜ್ ಅವರನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದರು.
ಮೊದಲ ಸ್ಥಾನಕ್ಕಾಗಿ ಸ್ವದೇಶಿ ಶೂಟರ್ ಜೊತೆಗೆ ಸೆಣೆಸಾಟ ನಡೆಸುವ ಮೂಲಕ ಮನೀಶ್ 8.4 ಮತ್ತು 9.1 ಪಡೆದಿದ್ದರು. ಆದರೆ, ಸಿಂಗರಾಜ್ ತಮ್ಮ ಕೊನೆಯ ಎರಡು ಶಾಟ್‌ಗಳಲ್ಲಿ 8.5 ಮತ್ತು 9.4 ಪಡೆದುಕೊಂಡಿದ್ದರು.
Discussion about this post