ನವದೆಹಲಿ: ಟೋಕಿಯೋ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ನಲ್ಲಿ ಭಾನುವಾರ ಪದಕ ಗೆದ್ದ ಕನ್ನಡಿಗ ಸುಹಾಸ್ ಯತಿರಾಜ್ (೩೨) ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ಟರ್ ಮೂಲಕ ಅಭಿನಂದಿಸಿದ್ದಾರೆ.
ಸುಹಾಸ್ ಅವರನ್ನು ಸೇವೆ ಮತ್ತು ಕ್ರೀಡೆಯ ಸಂಗಮ ಎಂದು ಸಹ ಮೋದಿ ಬಣ್ಣಿಸಿದ್ದಾರೆ. ಗೌತಮ ಬುದ್ಧನಗರದ ಜಿಲ್ಲಾಧಿಕಾರಿಯಾಗಿರುವ ಸುಹಾಸ್ ಯತಿರಾಜ್, ಪುರುಷರ ಬ್ಯಾಡ್ಮಿಂಟನ್ (SL4) ಫೈನಲ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು ಸಹ ಫ್ರಾನ್ಸ್ ದೇಶದ ಲೂಕಾಸ್ ಮಜೂರ್ ಎದುರು ಸೋಲು ಕಂಡರು.
ಮಜೂರ್ ಎದುರು ೬೨ ನಿಮಿಷಗಳ ಸೆಣೆಸಾಟದಲ್ಲಿ, ೨೧-೧೫, ೧೭-೨೧, ೧೫-೨೧ ಅಂತರದಲ್ಲಿ ಸೋಲು ಕಂಡಿದ್ದರು ಸಹ ಉತ್ತಮ ಪ್ರಯತ್ನದ ಹೋರಾಟ ನಡೆಸಿದ್ದರು.
Discussion about this post