ಟೋಕಿಯೋ: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಜಾವೆಲಿನ್ (F೬೪) ಪಂದ್ಯದಲ್ಲಿ ಸುಮಿತ್ ಆಂಟಿಲ್ ಚಿನ್ನ ಗೆದ್ದಿದ್ದಾರೆ. ಭಾರತಕ್ಕೆ ಎರಡನೇ ಚಿನ್ನ ಇದಾಗಿದ್ದು, ಒಟ್ಟು ಏಳನೇ ಪದಕ ಇದಾಗಿದೆ.
ಸುಮಿತ್ ತನ್ನದೇ ವಿಶ್ವದಾಖಲೆಯನ್ನು ಒಂದಲ್ಲಾ, ಎರಡಲ್ಲಾ ಮೂರು ಭಾರಿ ಮುದಿದಿದ್ದಾರೆ. ಈ ಸಂದರ್ಭದಲ್ಲಿ ಪ್ರತಿ ಆಟಗಾರನಿಗೆ ಆರು ಪ್ರಯತ್ನಗಳನ್ನು ನೀಡಲಾಗುತ್ತದೆ.
ಪ್ರಥಮ ಪ್ರಯತ್ನದಲ್ಲಿ ೬೬.೯೫ ಮೀಟರ್ ದೂರ ಜಾವಲಿನ್ ಎಸೆದರು. ಇದರ ಮೂಲಕ ೨೦೧೯ರಲ್ಲಿ ದುಬೈನಲ್ಲಿ ನಿರ್ಮಿಸಿದ ತನ್ನ ವಿಶ್ವ ದಾಖಲೆಯನ್ನು ತಾವೇ ಮುರಿದರು.
ಎರಡನೆಯ ಪ್ರಯತ್ನದಲ್ಲಿ ೬೮.೦೮ ಮೀಟರ್ ಎಸೆತದೊಂದಿಗೆ ಹೊಸ ವಿಶ್ವ ದಾಖಲೆ ನಿರ್ಮಿಸಿದರು.
ಮೂರು ಮತ್ತು ನಾಲ್ಕನೆ ಪ್ರಯತ್ನಗಳ ಎಸೆತಗಳು ವಿಶ್ವದಾಖಲೆಗಿಂತ ಸ್ವಲ್ಪ ಹಿಂದಿದ್ದವು.
ಐದನೇ ಪ್ರಯತ್ನದಲ್ಲಿ ೬೮.೫೫ ಮೀಟರ್ ಎಸೆತದೊಂದಿಗೆ ಅವರು ಮೂರನೇ ಬಾರಿಗೆ ವಿಶ್ವ ದಾಖಲೆ ನಿರ್ಮಿಸಿದರು. ಚಿನ್ನದ ಚೋರ ಸುಮಿತ್ ಆಂಟಿಲ್ ಅವರಿಗೆ ಭಾರತೀಯರು ಸೊಶಿಯಲ್ ಮೀಡಿಯಾದಲ್ಲಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Discussion about this post