ಟೋಕಿಯೊ: ಪ್ಯಾರಾಲಿಂಪಿಕ್ಸ್ ೨೦೨೦ನಲ್ಲಿ ಚಿನ್ನ ಗೆದ್ದಿದ್ದ ಚತುರೆ ಈಗ ಮತ್ತೊಂದು ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಮಹಿಳೆಯರ ೫೦ ಮೀಟರ್ ರೈಫಲ್ ೩ ಪೊಸಿಶನ್ಸ್ ಎಸ್ ಎಚ್ ೧ (50 MITERS RIFLE 3 POSITIONS H S 1)ವಿಭಾಗದ ಶೂಟಿಂಗ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗೆದ್ದು, ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಅವನಿ ಶೂಟಿಂಗ್ FINALS ಪಂದ್ಯದಲ್ಲಿ ೪೧೫ ಸ್ಕೋರ್ ಮಾಡಿದ್ದರು. ಇದಕ್ಕೂ ಮೊದಲು ೧೦ ಮೀಟರ್ ಏರ್ ರೈಫಲ್ ಶೂಟಿಂಗ್ ನಲ್ಲಿ ೨೪೯.೬ ಸ್ಕೋರ್ ಮಾಡಿ ವಿಶ್ವದಾಖಲೆ ನಿರ್ಮಿಸಿ ಚಿನ್ನ ತಮ್ಮದಾಗಿಸಿಕೊಂಡಿದ್ದರು.
ಹೈಜಂಪ್ ನಲ್ಲಿ ಪ್ರವೀಣ್ ಕುಮಾರ್ ಬೆಳ್ಳಿ ಸಾಧನೆ
ಇಂದು (ಶುಕ್ರವಾರ) ಬೆಳಿಗ್ಗೆ ಹೈಜಂಪ್ ಟಿ೬೪ ವಿಭಾಗದಲ್ಲಿ ಭಾರತದ ಪ್ರವೀಣ್ ಕುಮಾರ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. ಪ್ರವೀಣ್ ಅವರು ಹೈ ಜಂಪ್ ನಲ್ಲಿ ೨.೦೭ ಮೀಟರ್ ಜಿಗಿದು ಏಷ್ಯಾದಲ್ಲೇ ಹೊಸ ದಾಖಲೆ ನಿರ್ಮಿಸಿದ್ದಾರೆ.
Discussion about this post