ಶಿಖರ್ ಧವನ್-ಅಯೆಷಾ ಮುಖರ್ಜಿಯನ್ನು ೨೦೧೨ ರಲ್ಲಿ ವರಿಸಿದ್ದರು. ಆಗಲೇ ಅಯೆಷಾ ಧವನ್ ಗಿಂತ ಹತ್ತು ವರ್ಷ ದೊಡ್ಡವರಾಗಿದ್ದರು. ಇಬ್ಬರದು ಪ್ರೇಮ ವಿವಾಹ. ಇವರಿಬ್ಬರಿಗೂ ಈಗ ಜೋರಾವರ್ ಎಂಬ ಮಗ ಕೂಡಾ ಇದ್ದಾನೆ.
ಈಗ ಧವನ್ ಆಸ್ಟ್ರೇಲಿಯಾ ಮೂಲದ ಪತ್ನಿಗೆ ವಿಚ್ಛೇಧನ ನೀಡಿದ್ದಾರೆ ಎಂಬ ವದಂತಿ ಹಬ್ಬಿದೆ. ಇದಕ್ಕೆ ಪೂರಕವಾಗಿ ಪತ್ನಿ ಸಹ ಭಾವನಾತ್ಮಕ ವಿಡಿಯೋ ಹಾಕಿದ್ದು, ಅದು ಸಾಕಷ್ಟು ವೈರಲ್ ಆಗಿತ್ತು. ಮೊದಲ ಪತ್ನಿಯಿಂದ ದೂರ ಬಂದಿದ್ದ ಅಯೆಷಾಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಒಂಬತ್ತು ವರ್ಷಗಳ ಧವನ್-ಅಯೆಷಾ ದಾಂಪತ್ಯ ಆರಾಮಾಗೇ ಇತ್ತು.
ಕಳೆದ ಒಂದು ವರ್ಷದಿಂದ ಸ್ವಲ್ಪ ದೂರವೇ ಇದ್ದ ಜೋಡಿ ಈಗ ದೂರವಾಗಿದೆ. ಇನ್ಸ್ಟಾ ಗ್ರಾಂ ಖಾತೆಯಿಂದ ಧವನ್ ಚಿತ್ರಗಳನ್ನು ಅಯೆಷಾ ಕಿತ್ತು ಹಾಕಿದ್ದರು. ಸಾಮಾಜಿಕ ಜಾಲತಾಣದಲ್ಲಿ ತಾನು ಎರಡು ಭಾರಿ ವಿಚ್ಛೇಧನ ಪಡೆದಿದ್ದೇನೆ ಎಂದು ಅಯೇಷಾ ಬರೆದುಕೊಂಡಿದ್ದಾರೆ.
ಎರಡನೇ ಬಾರಿಯ ವಿಚ್ಛೇಧನ ಅವರಲ್ಲಿ ಮೂಡಿಸಿರುವ ದಿಗಿಲುಗಳನ್ನು ಸಹ ಅವರು ಬರೆದುಕೊಂಡಿದ್ದಾರೆ. ವಿಚ್ಚೇಧನದ ಬಗ್ಗೆ ಟೀಮ್ ಇಂಡಿಯಾ ಆಟಗಾರ ಧವನ್ ಯಾವುದೇ ಮಾಹಿತಿ ನೀಡಿಲ್ಲ.
Discussion about this post