ಮುಂಬೈ : ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ರಾಜೀನಾಮೆ ಹಿನ್ನೇಲೆ ಟೀಂ ಇಂಡಿಯಾದ ಆಟಗಾರರಾ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ ಪೂಜಾರ ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ವಿರುದ್ದವೇ ಬಿಸಿಸಿಐ ಕಾರ್ಯದರ್ಶಿ ಜೈಶಾ ಅವರಿಗೆ ದೂರು ನೀಡಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.
ವಿರಾಟ್ ಕೊಯ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾದಲ್ಲಿ ALL IS WELL ಅನ್ನೋ ಒಂದೊಂದಾಗಿಯೇ ಬಯಲಾಗುತ್ತಿದೆ. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ದ ಟೀಂ ಇಂಡಿಯಾ ಸೋಲನ್ನು ಕಂಡಿತ್ತು. ಈ ಸೋಲು ಕ್ರಿಕೆಟ್ ಪ್ರಿಯ ಭಾರತೀಯರಿಗೆ ಬೇಸರವನ್ನುಂಟು ಮಾಡಿತ್ತು. ವಿಶ್ವ ಕ್ರಿಕೆಟ್ ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್ ಆಗುತ್ತೆ ಅನ್ನೋ ನಿರೀಕ್ಷೆಯಲ್ಲಿತ್ತು. ಆದ್ರೆ ಟೀಂ ಇಂಡಿಯಾ ಆಟಗಾರರ ಕೆಟ್ಟ ಆಟಕ್ಕೆ ಭಾರತೀಯರು ನಿರಾಸೆ ಅನುಭವಿಸಿದ್ದರು.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಸೋಲಿಗೆ ಇದೀಗ ನಾಯಕ ವಿರಾಟ್ ಕೊಯ್ಲಿ ವರ್ತನೆಯೇ ಕಾರಣವಾಗಿತ್ತಾ ಅನ್ನೋ ಅನುಮಾನ ಮೂಡುತ್ತಿದೆ.
ಇದಕ್ಕೆ ಪೂರಕವಾಗಿ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರರಾದ ಅಜಿಂಕ್ಯಾ ರೆಹಾನೆ ಹಾಗೂ ಚೇತೇಶ್ವರ ಪೂಜಾರ ಅವರು ವಿರಾಟ್ ಕೊಯ್ಲಿಯಿಂದಾಗಿ ತಮಗೆ ಆಗಿರುವ ಕಠಿಣ ವರ್ತೆನೆಯ ಬಗ್ಗೆಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) (BCCI) ಗೌರವ ಕಾರ್ಯದರ್ಶಿ ಜಯ್ ಶಾ ಅವರಿಗೆ ದೂರು ನೀಡಿದ್ದಾರೆ.
ಸದರಿ ಘಟನೆ ದೊಡ್ಡ ಸಮಸ್ಯೆಗೆ ಕಾರಣವಾಗಿತ್ತು. ಇಬ್ಬರು ಆಟಗಾರರು ಅಂದು ಜೈಶಾ ಅವರನ್ನು ಕರೆಯಿಸಿಕೊಂಡಿದ್ದರು. ನಂತರ ಬಿಸಿಸಿಐ (BCCI) ಮಧ್ಯಪ್ರವೇಶ ಮಾಡಿದೆ. ಮಾತ್ರವಲ್ಲ ಈ ಕುರಿತು ಹಲವು ಆಟಗಾರರ ಬಳಿಯಲ್ಲಿಯೂ ಬಿಸಿಸಿಐ ಪ್ರತಿಕ್ರಿಯೆಯನ್ನು ಕೇಳಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವಿಶ್ವಕಪ್ ಬೆನ್ನಲ್ಲೇ ಟಿ20 ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ವಿರಾಟ್ ಕೊಯ್ಲಿ ಈಗಾಗಲೇ ಘೋಷಣೆಯನ್ನು ಮಾಡಿದ್ದಾರೆ. ಆದರೆ ಯುಎಇನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯ ನಂತರದ ಕೊಯ್ಲಿ ಏಕದಿನ ನಾಯಕತ್ವದ ಭವಿಷ್ಯದ ಬಗ್ಗೆಯೂ ಸ್ಪಷ್ಟನೆಯನ್ನು ನೀಡಲಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ (INDIAN EXPRESS) ವರದಿ ಮಾಡಿದೆ.
Discussion about this post