ಶಿವಮೊಗ್ಗ: ಖಾಸಗಿ ಸಹಭಾಗಿತ್ವದಲ್ಲಿ ೭೫ ಕ್ರೀಡಾಪಟುಗಳ ದತ್ತು ಪಡೆಯಲು ಸಿಎಂ ಬಸವರಾಜ ಬೊಮ್ಮಾಯಿಯವರು ನಿರ್ಧಾರ ಕೈಗೊಂಡಿರುವುದಾಗಿ ಕ್ರೀಡಾಸಚಿವ ಕೆ. ಸಿ.ನಾರಾಯಣ ಗೌಡ ತಿಳಿಸಿದರು.
ಶಿವಮೊಗ್ಗದಲ್ಲಿ ಈ ವಿಷಯ ತಿಳಿಸಿ ಮಾತನಾಡಿದ ಅವರು ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳನ್ನು ಪೊಲೀಸ್ ಇಲಾಖೆ ಸೇರಿದಂತೆ ಕ್ರೀಡಾ ತರಭೇತುಧಾರ ಹುದ್ದೆ ಗಳಿನೇಮಿಸಿಕೊಳ್ಳಲಾಗುವುದು ಎಂದರು.
ಸರ್ಕಾರಿ ಹುದ್ದೆಗಳಲ್ಲಿ ಶೇ. ೨ ಕ್ರೀಡಾಪಟುಗಳಿಗೆ ಅವಕಾಶ ಒದಗಿಸಲು ಮನವಿ ಮಾಡಿದ್ದು, ಜಿಂದಾಲ್ ಸಂಸ್ಥೆ ೩೦ ಕ್ರೀಡಾಪಟುಗಳನ್ನು ದತ್ತು ಪಡೆಯಲು ಆಸಕ್ತಿ ತೋರಿಸಿದೆ ಎಂದರು.
ಶಿವಮೊಗ್ಗ, ಮಂಡ್ಯದಲ್ಲಿ ಖೇಲೋ ಇಂಡಿಯಾ ಯೋಜನೆಯಡಿ ತಲಾ ೭೦-೭೫ ಕೋಟಿ ವೆಚ್ಚದಲ್ಲಿ ವಿಶೇಷ ತರಭೇತಿ ಕೇಂದ್ರಗಳನ್ನು ಆರಂಭಿಸಲಾಗುವುದು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಸದರಿ ಕೇಂದ್ರ ನಿರ್ಮಿಸಲಾಗುವುದು ಎಂದರು.
Discussion about this post