ಭಾರತದ ಒಲಿಂಪಿಕ್ಸ್ ಕ್ರೀಡಾಪಟು ನೀರಜ್ ಚೋಪ್ರಾ ಅವರು ಪಾಣಿಪತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಜ್ವರದಿಂದ ಕುಸಿದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ಬಂದ ಕುವರನಿಗೆ ಹಲವಾರು ಕಡೆ ಆಹ್ವಾನಿಸಿ, ಪ್ರೋತ್ಸಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕರೆಯಲಾಗಿತ್ತು.
ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನೀರಜ್ ಗೆ ಕಾರ್ ರಾಲಿ ಮಾಡಿ ಸ್ವಾಗತ ಕೋರಿದ್ದರು. ಇದರಿಂದ ಸುಮಾರು ಆರು ಗಂಟೆಗಳ ಕಾಲ ಪ್ರಯಾಣಿಸಿ ಪಾಣಿಪತ್ ತಲುಪಿದ್ದರು. ಮಂಗಳವಾರ (ಆಗಸ್ಟ್ ೧೭) ಅತಿಯಾದ ಜ್ವರದಿಂದ ಪಾಣಿಪತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಮಾರಂಭ ಬಿಟ್ಟು ನಡೆಯಬೇಕಾಯಿತು.
ಕೆಲವು ದಿನಗಳ ಹಿಂದಷ್ಟೇ ಕೋವಿಡ್ ಟೆಸ್ಟ್ ಮಾಡಿಸಿದ್ದು ನೆಗೆಟಿವ್ ವರದಿ ಬಂದಿರುತ್ತದೆ. ದೇಶದ ವಿವಿದೆಡೆ ಸಮಾರಂಭಗಳಲ್ಲಿ ಭಾಗವಹಿಸಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
Discussion about this post