ಭಾರತ ಕ್ರಿಕೆಟ್ ತಂಡದ ಆಟಗಾರ, ಸ್ಟುವರ್ಟ್ ಬಿನ್ನಿ ಅಂತರ ರಾಷ್ಟ್ರೀಯ ಹಾಗೂ ಮೊದಲ ದರ್ಜೆ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ’ದೇಶವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರೈನಿಧಿಸಿದ್ದಕ್ಕೆ ಹೆಮ್ಮೆ ಉಂಟು, ನ್ನ ಕ್ರಿಕೆಟ್ ಪಯಣ ಅಪೂರ್ವವಾಗಿತ್ತು, ಇದಕ್ಕಾಗಿ BCCI, ನನ್ನಕುಟುಂಬ ಸೇರಿದಂತೆ ಪ್ರತಿಯೊಬ್ಬರಿಗೂ ಆಭಾರಿಯಾಗಿದ್ದೇನೆ’ ಎಂದು ಸ್ಟುವರ್ಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊದಲ ದರ್ಜೆ ಕ್ರಿಕೆಟ್, ಅಂತರ ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿರುವುದನ್ನು ನಿಮಗೆ ತಿಳಿಸಲು ಇಚ್ಛಿಸುತ್ತೇನೆ’ ಎಂದವರು ಹೇಳಿದ್ದಾರೆ. ಸ್ಟುವರ್ಟ್ ಬಿನ್ನಿ ೨೦೧೪ರಲ್ಲಿ ಟೀಮ್ ಇಂಡಿಯಾಗೆ ಕಾಲಿಟ್ಟಿದ್ದು, ೬ ಟೆಸ್ಟ್ ಪಂದ್ಯ, ೧೪ ಏಕದಿನ ಅಂತರ ರಾಷ್ಟ್ರೀಯ ಪಂದ್ಯ, ೩ ಅಂತರ ರಾಷ್ಟ್ರೀಯ T೨೦ ಪಂದ್ಯ, ೧೫೦ ಐಪಿಎಲ್ ಪಂದ್ಯ, ೧೦೦ಕ್ಕೂ ಅಧಿಕ ದೇಶೀಯ ಕ್ರಿಕೆಟ್ ಟೂರ್ನಿಗಳನ್ನು ಅವರು ಆಡಿದ್ದಾರೆ.
IPL ನಲ್ಲೂ ಸಕ್ರಿಯರಾಗಿದ್ದ ಸ್ಟುವರ್ಟ್ ಮುಂಬೈ ಇಂಡಿಯನ್ಸ್, ಅರ್.ಸಿಬಿ. ಆರ್. ಆರ್. ತಂಡಗಳಲ್ಲಿ ಸಹ ಉತ್ತಮ ಪ್ರದರ್ಶನ ನೀಡಿದ್ದರು.
Discussion about this post