- ಡ್ರಾವಿಡ್, ರಿಚರ್ಡ್ಸ್ ಸಾಧನೆ ಹಿಂದಿಕ್ಕಿದ ದಾಖಲೆ
- ಇಂಗ್ಲೆಂಡ್ ನಲ್ಲಿ ೯ ಶತಕದ ಸಾಧನೆ
- ಏಕದಿನ ಟೆಸ್ಟ್ ನಲ್ಲಿ ಐತಿಹಾಸಿಕ ಸಾಧನೆ
ಲಂಡನ್: ಇಂಗ್ಲೇಂಡ್ ವಿರುದ್ಧ ೪ ನೇ ಟೆಸ್ಟ್ ಪಂದ್ಯಾವಳಿಯಲ್ಲಿ, ಟೀಂ ಇಂಡಿಯಾದ ಆರಂಭಿಕ ಆಟಗಾರ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ. ಆ ಮೂಲಕ ವಿದೇಶಿ ನೆಲದಲ್ಲಿ ಏಳು ವರ್ಷಗಳ ಬಳಿಕ ಶತಕದ ಸಾಧನೆ ಮಾಡಿದ್ದಾರೆ.
ಓವನ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ 256 ಎಸೆತಗಳನ್ನು ಎದುರಿಸಿದ್ದು, 14 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 127 ರನ್ ಗಳಿಸಿದ್ದಾರೆ. ಏಕದಿನ ಸರಣಿಯಲ್ಲಿ ಐತಿಹಾಸಿಕ ಸಾಧನೆಯನ್ನು ಮಾಡಿದ್ದ ರೋಹಿತ್ ಶರ್ಮಾ ಸುಮಾರು ಏಳು ವರ್ಷಗಳ ನಂತರ ವಿದೇಶದಲ್ಲಿ ಶತಕದ ಜಯಭೇರಿ ಬಾರಿಸಿದ್ದಾರೆ.
Discussion about this post