ಎರಡು ವರ್ಷದ ಹಿಂದೆ ನಿವೃತ್ತಿ ಘೋಷಿಸಿ, ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಉಳಿದಿದ್ದ ಎಡಗೈ ಸ್ಪೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಮತ್ತೆ ಕ್ರಿಕೆಟ್ ರಂಗಕ್ಕೆ ವಾಪಸಾಗುವ ಸುಳಿವು ನೀಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ, ನಮ್ಮ ಗುರಿಗಳನ್ನು ದೇವರು ತೀರ್ಮಾನ ಮಾಡುತ್ತಾನೆ.
ಸಾರ್ವಜನಿಕರ ಒತ್ತಾಯದ ಮೇರೆಗೆ ಫೆಬ್ರವರಿ ತಿಂಗಳಲ್ಲಿ ಮತ್ತೆ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನೀವು ತೋರಿಸುತ್ತಿರುವ ನಿರ್ಮಲ ಪ್ರೀತಿ ಹೀಗೆ ಮುಂದುವರಿಯಲಿ. ಭಾರತ ಕ್ರಿಕೆಟ್ ತಂಡದ ಸಂಕಷ್ಟದ ಸಮಯದಲ್ಲಿ ಬೆಂಬಲ ನೀಡಿ ಎಂದು ಯುವರಾಜ್ ಟ್ವಿಟರ್ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಯುವರಾಜ್ ಸಿಂಗ್ ರ ಈ ಹೇಳಿಕೆಯು ಕ್ರಿಕೆಟ್ ವಲಯದಲ್ಲಿ ಸುದೀರ್ಘ ಚರ್ಚೆಗೆ ಗ್ರಾಸವಾಗಿದೆ. ಆದರೆ, ಹೇಗೆ, ಯಾವಾಗ, ಯಾವ ರೀತಿ ಕ್ರಿಕೆಟ್ ರಂಗಕ್ಕೆ ಮರಳುತ್ತೇನೆ ಎಂಬುದನ್ನು ಯುವರಾಜ್ ಸಿಂಗ್ ಸ್ಪಷ್ಟಪಡಿಸಿಲ್ಲ.
ಇದರ ಜೊತೆಗೆ ಯುವರಾಜ್ ಸಿಂಗ್ ಸಾರ್ವಜನಿಕ ಒತ್ತಾಯದ ಮೇರೆಗೆ ಎಂದು ಬರೆದುಕೊಂಡು, ಇಂಗ್ಲೆಂಡ್ ವಿರುದ್ಧ 150 ರನ್ ಗಳನ್ನು ಭಾರಿಸಿದ ವೀಡಿಯೋ ಕ್ಲಿಪಿಂಗ್ ಅನ್ನು ಶೇರ್ ಮಾಡಿ, ಮತ್ತೆ ಫ್ರೆಬ್ರವರಿಗೆ ವಾಪಸ್ಸಾಗುತ್ತೇನೆ ಎಂದು ಹೇಳಿದ್ದಾರೆ.
ಎರಡು ವಿಶ್ವಕಪ್ ಪಂದ್ಯಾವಳಿಗಳನ್ನು ಆಡಿರುವ ಯುವರಾಜ್ ಸಿಂಗ್, 2011ರಲ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಒಟ್ಟು 40 ಟೆಸ್ಟ್ ಹಾಗೂ 304 ಒನ್ ಡೇ, 58 ಟಿ.20 ಪಂದ್ಯಗಳನ್ನಾಡಿದ್ದಾರೆ. 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ವಿದಾಯ ಹೇಳಿದ್ದಾರೆ.
Cricketer Youraj Sing come back to Cricket again?
Discussion about this post