ಅಬುಧಾಬಿ: ಸೋಮವಾರ ರಾತ್ರಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಆರ್ ಸಿ ಬಿ (Royal challenger’s Bangalore)ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ( Kolkota Night Riders) ತಂಡ ಒಂಬತ್ತು ವಿಕೆಟ್ ಗಳ ರೋಚಕ ಗೆಲವು ಸಧಿಸಿದ್ದು, IPLನಲ್ಲಿ ವಿಶ್ವದಾಖಲೆಗೆ ನಾಂದಿ ಹಾಡಿದೆ.
RCBಯ ೯೩ ರನ್ ಗಳ ಸಾದಾರಣ ಗುರಿ ಬೆನ್ನಟ್ಟಿದ KKR ತಂಡ ಒಂದೆ ವಿಕೆಟ್ ನಷ್ಟದಲ್ಲಿ ಗುರಿ ಮುಟ್ಟಿತು. ಶುಭ ಮನ ಗಿಲ್ (೪೮) ವೆಂಕಟೇಶ್ ಅಯ್ಯರ್ (೪೧) ಜೋಡಿ RCB ಯಿಂದ ಪಂದ್ಯ ಕಿತ್ತುಕೊಂಡಿತ್ತು. ಅಂತಿಮ ಗೆಲುವು ಸಾಧಿಸಲು ಕೇವಲ ೧೧ ರನ್ ಬೇಕಿದ್ದಾಗ ೪೮ ರನ್ ಗಳಿಸಿದ್ದ ಶುಭಮನ್ ಗಿಲ್ ಚಹಲ್ ಎಸೆತಕ್ಕೆ ಔಟ್ ಆಗಿಹೋದರು.
ವೆಂಕಟೇಶ್ ಅಯ್ಯಂಗಾರ್ ಆಗಮಿಸಿ ಗೆಲುವಿನ ಹೆಜ್ಜೆ ದಾಟಿಸಿದರು. ಇದೊಂದು ರೋಚಕ ಗೆಲುವು ಪಡೆದು IPL ಇತಿಹಾಸದಲ್ಲೇ ಅತಿಹೆಚ್ಚು ಎಸೆತಗಳಿರುವಂತೆ ಗೆದ್ದ ತಂಡಗಳ ಪಟ್ಟಿಯಲ್ಲಿKKR ಸ್ಥಾನ ಪಡೆದಿದೆ. ಇನ್ನೂ ಹತ್ತುಓವರ್ ೬೦ ಎಸೆತಗಳಿದ್ದರೂ ಪಂದ್ಯ ಗೆದ್ದಿದ್ದು, ಪಂದ್ಯ ಜಯಿಸಿದ ತಂಡಗಳ ಪಟ್ಟಿಯಲ್ಲಿ ೫ನೇ ಸ್ಥಾನವನ್ನು ಪಡೆದಿದೆ.
ಇದೇ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂಬೈ ಇದ್ದು ಇದೇ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ೨೦೦೮ರಲ್ಲಿ ಮುಂಬೈ ಇನ್ನೂ ೮೭ ಎಸೆತಗಳು ಬಾಕಿ ಇರುವಾಗಲೇ ಪಂದ್ಯ ಗೆದ್ದು ದಾಖಲೆ ಬರೆದಿತ್ತು. ದ್ವಿತೀಯ ಸ್ಥಾನದಲ್ಲಿ ಕೆಟಿಕೆ (Kochi Tuskers Kerala) ಇದ್ದು ೨೦೧೧ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧ ಇಂದೋರ ನಲ್ಲಿ ನಡೆದ ಪಂದ್ಯದಲ್ಲಿ ೭೬ ಎಸೆತಗಳು ಬಾಕಿ ಇರೋವಾಗ್ಲೇ ಪಂದ್ಯ ಗೆದ್ದುಕೊಂಡಿತ್ತು.
ಮೂರನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ಇದ್ದು ೨೦೧೭ರಲ್ಲಿ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಡೆಕ್ಕನ್ ಚಾರ್ಜಸ್ (Deccan Chargers) ವಿರುಧ್ಧ ೭೩ ಎಸೆತಗಳು ಬಾಕಿ ಇರುವಂತೆ ಪಂದ್ಯ ಗೆದ್ದಿತ್ತು. ನಾಲ್ಕನೇ ಸ್ಥಾನದಲ್ಲಿ RCB ಇದ್ದು ೨೦೧೮ರಲ್ಲಿ ಇಂದೋರ್ ನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧRCB 71 ಎಸೆತ ಬಾಕಿ ಇರುವಂತೆ ಪಂದ್ಯ ಗೆದ್ದುಕೊಂಡಿತ್ತು.
Discussion about this post