ಕನ್ನಡನಾಡಿ ಸುದ್ಧಿ ಜಾಲ: ಬರೊಬ್ಬರಿ ಐದು ಒಲಿಂಪಿಕ್ ಕ್ರೀಡಾಕೂಟದಲ್ಲಿ ಸಾಲು ಸಾಲಾಗಿ ಚಿನ್ನದ ಪದಕ ಗೆದ್ದುಕೊಂಡ ವಿಶ್ವ ಶ್ರೇಷ್ಠ ರಿಲೇ ಓಟಗಾರ್ತಿ ಅಲಿಸನ್ ಫೆಲಿಕ್ಸ್. ಅಮೆರಿಕದ ಸ್ಪ್ರಿಂಟರ್ ಅಲಿಸನ್ ಫೆಲಿಕ್ಸ್ ೨೦೦೪ರ ಅಥೆನ್ಸ್ ಕ್ರೀಡಾಕೂಟದಿಂದ ತಮ್ಮ ಪದಕಗಳ ಜಯಭೇರಿ ಪ್ರಾರಂಭಿಸಿದ್ದರು. ೨೦೨೦ ತೋಕಿಯೋ ಒಲಿಂಪಿಕ್ಸ್ ನವರೆಗೂ ಸಹ ಹೀಗೆಯೇ ಜಯಭೇರಿ ಬಾರಿಸುತ್ತಲೇ ಬಂದಿರುವುದು ಕ್ರೀಡಾ ಆಸಕ್ತರ ಹುಬ್ಬೇರುವಂತೆ ಮಾಡಿದೆ.
೩೫ ವರ್ಷದ ಓಟಗಾರ್ತಿ, ಮೂರು ವರ್ಷ ಮಗಳ ತಾಯಿ ಕೂಡಾ, ಆದರೆ ಪರಿಶ್ರಮ ಮತ್ತು ಕಠಿಣ ಅಭ್ಯಾಸಕ್ಕೆ ಯಾವ ಅಡೆತಡೆಗಳೂ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಒಲಿಂಪಿಕ್ಸ್ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನ, ಬೆಳ್ಳಿ ಹಾಗೂ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸಹ ಕಂಚಿನ ಪದಕವೂ ಸೇರಿ ಇದುವರೆಗೆ ಗೆದ್ದ ಒಟ್ಟು ಪದಕಗಳು ೧೧ ಆಗಿವೆ ಎಂದರೆ ಯಾರು ತಾನೇ ಅಚ್ಚರಿ ಪಡುವುದಿಲ್ಲ ಹೇಳಿ?
ಅಲಿಸನ್ ನ ಹವ್ಯಾಸಗಳು- ಬ್ಯಾಸ್ಕೆಟ್ ಬಾಲ್ ಪ್ರಿಯೆ, ಬಾಲ್ಯದಲ್ಲಿ ಸಾಕಷ್ಟು ವರ್ಷ ಬ್ಯಾಸ್ಕೆಟ್ ಬಾಲ್ ಆಟದಲ್ಲಿ ತಮ್ಮ ಶ್ರಮದ ಅಭ್ಯಾಸ ನಡೆಸಿದ್ದರು. ಆದರೆ ಆಕೆಗೆ ಪದಕ ತಂದುಕೊಟ್ಟಿದ್ದು ರಿಲೇ . ಕುಕ್ಕಿಂಗ್ ಪ್ರಿಯೆ: ಮನೆಯಲ್ಲಿ ಎಲ್ಲರಂತೆ ಕುಕ್ಕಿಂಗ್ ಮಾಡೋದು ಇಷ್ಟ ಪಡೋ ಈ ಮಹಿಳೆಬೇಕರಿ ಐಟಂಗಳ ಜೊತೆಗೆ ವೆಜ್ ನಾ ವೆಜ್ ಎಲ್ಲವನ್ನೂ ಸಹ ಕುಕ್ ಮಾಡ್ತಾರೆ.
ಕುಟುಂಬ ವತ್ಸಲೆ: ತಾಯಿಯಾಗಿ ಎಂದಿಗೂ ತನ್ನ ಕರ್ತವ್ಯ ಮರೆಯದ ಈ ಮಹಿಳೆ ೨೦೧೮ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಾಯಿಯಾದ ಬಳಿಕವೂ ಅಭ್ಯಾಸ ಬಿಡದೆ ಸಾಗಿಬಂತು. “ಎಲ್ಲಾ ತಾಯಂದಿರು ಕ್ರೀಡೆಯಲ್ಲಿ ಆಸಕ್ತಿ ಹೊಂದಬೇಕು, ಆಟವಾಡಬೇಕು” ಎಂಬ ಕಿವಿ ಮಾತು ಸಹ ಅವರು ಹೇಳಿದ್ದಾರೆ.
ಪದಕಗಳ ಸುರಿಮಳೆ: ೨೦೦೪ರ ಒಲಿಂಪಿಕ್ಸ್ ನಲ್ಲಿ ಬೆಳ್ಳಿ, ೨೦೦೮ರಲ್ಲೂ ಬೆಳ್ಳಿ, ೨೦೧೨ರ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟ ವೈಯಕ್ತಿ ಚಿನ್ನ ತಂದುಕೊಟ್ಟಿತು.೨೦೧೯ರ ದೋಹ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ೪೦೦ ಮೀಟರ್ ರಿಲೇ ಪಂದ್ಯದಲ್ಲಿ ಚಿನ್ನದ ಪದಕ ಹಾಗೂ ಮಿಕ್ಸ್ಡ್ ರಿಲೆಯಲ್ಲೂ ಚಿನ್ನ ಬಾಚಿಕೊಂಡಿದ್ದಾರೆ. ಮಗಳು ಹುಟ್ಟಿದ ಒಂದೇ ವರ್ಷದಲ್ಲಿ ಈ ಸಾಧನೆ ನಡೆಸಿದ ಅಲಿಸನ್ ಶ್ರಮ ಮೆಚ್ಚಲೇಬೇಕು.
Discussion about this post