ಟೋಕಿಯೋ: ವಿಶೇಷ ಚೇತನರಿಗಾಗಿ ನಡೆಸಲಾಗುತ್ತಿರುವ ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದಿರುವ ಟೇಬಲ್ ಟೆನಿಸ್ ಆಟಗಾರ್ತಿ ಭವಿನಾ ಪಟೇಲ್ ಅವರು ಪ್ರಧಾನ ಮಂತ್ರಿ ಮೋದಿಯವರೊಂದಿಗಿದ್ದ, ದಶಕಗಳ ಹಿಂದಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ತಮ್ಮ ಖಾತೆಯಲ್ಲಿ ಈ ಫೋಟೋ ಹಂಚಿಕೊಂಡಿದ್ದು, ಮೋದಿಯವರ ಜೊತೆಗೆ ಭವಿನಾ ಪಟೇಲ್ ಮತ್ತು ಟೇಬಲ್ ಟೆನ್ನಿಸ್ ಆಟಗಾರ್ತಿ ಸೋನಾಲ್ ಪಟೇಲ್ ಕೂಡಾ ಇದ್ದಾರೆ.
೨೦೧೦ರ ಈ ಭಾವಚಿತ್ರದಲ್ಲಿ ಮೋದಿ ಗುಜರಾತ್ ಸಿಎಂ ಆಗಿದ್ದರು, ಭವಿನಾ ಪಟೇಲ್ ಕುಳಿತಿರುವ ಗಾಲಿ ಕುರ್ಚಿಯನ್ನು ಹಿಡಿದು ನಿಂತಿರುವ ದೃಶ್ಯ ಇದೆ. ಸೋನಾಲ್ ಮತ್ತು ಭಾವಿನಾ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಹೋಗುವ ಮುನ್ನ ಮೋದಿಯವರು ಅವರಿಗೆ ಶುಭ ಕೋರಿದ ೨೦೧೦ರ ಫೋಟೋ ಇದಾಗಿದೆ.
Discussion about this post