ಕನ್ನಡ ನಾಡಿ ಸುದ್ದಿಜಾಲ: ಯುಎಇ(UAE) ಮತ್ತು ಒಮಾನ್ (Oman) ಇದೇ ಅಕ್ಟೋಬರ್ ೧೭ ರಿಂದ ಬಹುನಿರೀಕ್ಷಿತ ಐಸಿಸಿ ಟಿ-೨೦ ವಿಶ್ವಕಪ್ (ICC T೨೦ World Cup ೨೦೨೧) ಟೂರ್ನಿಯ ಸಿದ್ಧತೆಗಳು ನಡೆಯುತ್ತಿದ್ದು, ಶೇ. ೨೦ರಷ್ಟು ಸಾಮರ್ಥ್ಯದೊಂದಿಗೆ ಪಂದ್ಯ ವೀಕ್ಷಣೆ ಮಾಡಲು ಅವಕಾಶ ಸಹ ನೀಡಲಾಗಿದೆ. ಹೀಗಾಗಿ ಐಸಿಸಿ ಟಿ-೨೦ ವಿಶ್ವಕಪ್ ಟಿಕೆಟ್ಗಳ (ICC T೨೦ World Cup ೨೦೨೧ Ticket) ಮಾರಾಟ ಕೂಡ ಆರಂಭಿಸಿದೆ ಕೇವಲ ೧ ಗಂಟೆಯೊಳಗೆ ಟಿಕೆಟ್ಸ್ SOLD OUT ಆಗಿ ದಾಖಲೆ ನಿರ್ಮಿಸಿದೆ.
ಐಸಿಸಿ (ICC) ಯುಎಇ ಮತ್ತು ಒಮಾನ್ನಲ್ಲಿ ನಡೆಯಲಿರುವ ಟಿ-೨೦ ವಿಶ್ವಕಪ್ಗಾಗಿ ೭೦% ಪ್ರೇಕ್ಷಕರನ್ನು ಕ್ರೀಡಾಂಗಣದಲ್ಲಿ ಅನುಮತಿ ನೀಡಲಾಗಿದೆ ಮತ್ತು ಆನ್ಲೈನ್ ಟಿಕೆಟ್ಗಳ ಮಾರಾಟವನ್ನು ಆರಂಭಿಸಲಾಗಿದೆ ಎಂದು ಹಂಚಿಕೊಂಡ ಹಿನ್ನೇಲೆಯಲ್ಲೇ ಟಿಕೆಟ್ಸ್ ಸೋಲ್ಡ್ ಔಟ್ ಆಗಿದೆ.
ಅಕ್ಟೋಬರ್ ೨೪ ರಂದು ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಮುಖಾಮುಖಿಯಾಗಿವೆ. ಈ ಪಂದ್ಯ ವೀಕ್ಷಣೆ ಮಾಡಲು ಎಲ್ಲರೂ ಕಾತುರರಾಗಿದ್ದಾರೆ.
ಬೈನ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ಆಯೋಜನೆಗೊಂಡಿದ್ದು, ಜನರಲ್, ಜನರಲ್ ಈಸ್ಟ್, ಪ್ರೀಮಿಯಂ, ಪೆವಿಲಿಯನ್ ಈಸ್ಟ್ ಮತ್ತು ಪ್ಲಾಟಿನಂ ಸೇರಿದಂತೆ ಎಲ್ಲ ವಿಭಾಗದ ಟಿಕೆಟ್ಗಳು ಸೋಲ್ಡ್ ಆಗಿದ್ದು, ಯಾವುದೇ ಟಿಕೆಟ್ ವೆಬ್ಸೈಟ್ನಲ್ಲಿ ಲಭ್ಯವಿಲ್ಲ ಎಂದು ಯುಎಇ (UAE) ತಿಳಿಸಿದೆ.
ಸದ್ಯ ಯುಎಇನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿ ನಡೆಯುತ್ತಿದ್ದು, ಇದು ಮುಕ್ತಾಯಗೊಳ್ಳುತ್ತಿದ್ದಂತೆ ಐಸಿಸಿ ಟಿ-೨೦ ವಿಶ್ವಕಪ್ ಟೂರ್ನಮೆಂಟ್ ಆರಂಭಗೊಳ್ಳಲಿದೆ.
ಇನ್ನೂ ಒಮಾನ್ನಲ್ಲಿ ನಡೆಯಲಿರುವ ಟಿ-೨೦ ವಿಶ್ವಕಪ್ ಪ್ರಾಥಮಿಕ ಸುತ್ತಿನ ಪಂದ್ಯಗಳಿಗೆ ೩ ಸಾವಿರದಷ್ಟು ವೀಕ್ಷಕರಿಗೆ ಅವಕಾಶ ನೀಡಲಾಗುವುದು ಎಂದು ಐಸಿಸಿ ತಿಳಿಸಿದೆ.
ಹವಾಮಾನ ವೈಪರೀತ್ಯ:
ಅಲ್ಲೀಗ ಶಹೀನ್ ಚಂಡಮಾರುತ ಬೀಸುತ್ತಿದ್ದು, ಸ್ಟೇಡಿಯಂಗಳಿಗೂ ಸಾಕಷ್ಟು ಹಾನಿ ಉಂಟು ಮಾಡಿದ ಬಗ್ಗೆ ವರದಿಯಾಗಿದೆ. ಒಮಾನ್ ನ ಎಲ್ಲಾ ವಿಮಾನ ಸಂಚಾರದಲ್ಲಿ ಬದಲಾವಣೆಗಳಾಗಿದೆ.
ಅಕ್ಟೋಬರ್ ೧೭ರಿಂದ ಐಸಿಸಿ ಟಿ ೨೦ ವಿಶ್ವಕಪ್ ಪ್ರಾರಂಭವಾಗುತ್ತದೆ. ಮೊದಲ ಸುತ್ತಿನ ಪಂದ್ಯಾವಳಿ ಹಾಗೂ ಸೂಪರ್-೧೨(SUPER-12) ಪಂದ್ಯಾವಳಿ ನಡೆಯುತ್ತವೆ. ಟಿ೨೦ ಕ್ರಿಕೆಟ್ನ ಟಾಪ್-೮ ತಂಡಗಳು ನೇರವಾಗಿ ಸೂಪರ್-೧೨ (SUPER-12) ಹಂತಕ್ಕೆ ಅರ್ಹತೆ ಪಡೆದಿವೆ.
ಮೊದಲ ಸುತ್ತಿನಲ್ಲಿ ೮ ತಂಡಗಳು ೨ ಗುಂಪುಗಳಾಗಿ ಸ್ಪರ್ಧಿಸಲಿದ್ದು, ಅದರಲ್ಲಿ ೪ ತಂಡಗಳು ಸೂಪರ್-೧೨ (SUPER-12) ಹಂತಕ್ಕೆ ಪ್ರವೇಶ ಪಡೆಯುತ್ತವೆ. ಸೂಪರ್-೧೨ (SUPER-12) ಸುತ್ತಿನಲ್ಲಿ ಮೊದಲೇ ಇದ್ದ ೮ ತಂಡಗಳು ಸೇರಿ ಒಟ್ಟು ೧೨ ತಂಡಗಳು ಸೆಣಸುತ್ತವೆ. ಅಲ್ಲಿಯೂ ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಅಕ್ಟೋಬರ್ ೨೩ರಿಂದ ಸೂಪರ್-೧೨ (SUPER-12) ಹಂತದ ಪಂದ್ಯಗಳು ಪ್ರಾರಂಭವಾಗುತ್ತದೆ.
Discussion about this post